ಇಮ್ರಾನ್ ಖಾನ್ ಅವರನ್ನು ಭಾರತಕ್ಕೆ ಆಹ್ವಾನಿಸಲಿರುವ ಮೋದಿ ಸರ್ಕಾರ!
ವರ್ಷದ ಕೊನೆಯಲ್ಲಿ ಭಾರತಕ್ಕೆ ಬರಲಿರುವ ಪಾಕ್ ಪ್ರಧಾನಿ| ಪಾಕ್ ಪ್ರಧಾನಿ ಇಮ್ರಾನ್ ಖಾನ್’ಗೆ ಆಹ್ವಾನ ನೀಡಲಿರುವ ಭಾರತ| ನವದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘದ ಶೃಂಗಸಭೆ| ಎಲ್ಲ 8 ಸದಸ್ಯ ರಾಷ್ಟ್ರಗಳಿಗೂ ಆಹ್ವಾನ ನೀಡಲಿರುವ ಭಾರತ| ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಸ್ಷಷ್ಟನೆ|
ನವದೆಹಲಿ(ಜ.16): ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಭಾರತ ಅಧಿಕೃತ ಆಹ್ವಾನ ನೀಡಲಿದೆ.
ವರ್ಷದ ಕೊನೆಯಲ್ಲಿ ನವದೆಹಲಿಯಲ್ಲಿ ಶಾಂಘೈ ಸಹಕಾರ ಸಂಘದ ಶೃಂಗಸಭೆ ನಡೆಯಲಿದ್ದು, ಇದರಲ್ಲಿ ಎಲ್ಲ 8 ಸದಸ್ಯ ರಾಷ್ಟ್ರಗಳು ಹಾಗೂ 4 ವೀಕ್ಷಣಾ ರಾಷ್ಟ್ರಗಳು ಭಾಗವಹಿಸಲಿವೆ.
ಈ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನೂ ಭಾರತ ಸರ್ಕಾರ ಆಹ್ವಾನಿಸಲಿರುವುದಾಗಿ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಶಾಂಘೈ ಸಹಕಾರ ಸಂಘದ ಶೃಂಗಸಭೆಗೆ ಎಲ್ಲ ಸದಸ್ಯ ರಾಷ್ಟ್ರಗಳನ್ನೂ ಆಹ್ವಾನಿಸಲಾಗುವುದು ಎಂದು ರವೀಶ್ ಕುಮಾರ್ ಸ್ಷಷ್ಟಪಡಿಸಿದ್ದಾರೆ.
ಕಳೆದ ಜೂನ್’ನಲ್ಲಿ ಕಿರ್ಗಿಸ್ತಾನ್’ನಲ್ಲಿ ನಡೆದ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸಿದ್ದರು.
ಕರ್ತಾರ್‌ಪುರ ಉದ್ಘಾಟನೆಗೆ ಸಿಂಗ್‌ಗೆ ಇಮ್ರಾನ್ ಅಧಿಕೃತ ಆಹ್ವಾನ!
ಚೀನಾ ನೇತೃತ್ವದ SCO ಆರ್ಥಿಕ ಹಾಗೂ ಭದ್ರತಾ ಸಂಘವಾಗಿದ್ದು, 2001ರಲ್ಲಿ ರಷ್ಯಾ, ಕಿರ್ಗಿಸ್ತಾನ್, ಕಜಾಕಿಸ್ತಾನ್, ಉಜ್ಬೇಕಿಸ್ತಾನ್ ಹಾಗೂ ತಜಾಕಿಸ್ತಾನ್ ಇದರ ಸದಸ್ಯ ರಾಷ್ಟ್ರಗಳಾಗಿದ್ದವು. 2017ರಲ್ಲಿ ಭಾರತ ಮತ್ತು ಪಾಕಿಸ್ತಾನ SCOದ ಸದಸ್ಯ ರಾಷ್ಟ್ರಗಳಾಗಿ ಸೇರಿದವು.