ಕಣ್ಣು ಕಾಣಿಸದಿದ್ದರೂ ಹರಿಯಿತು ಕಣ್ಣೀರ ಕೋಡಿ... ಭಾವುಕ ವಿಡಿಯೋ
- ಮೊದಲ ಬಾರಿ ಮೊಮ್ಮಗನ ಭೇಟಿಯಾದ ಅಜ್ಜಿ
- ಭಾವುಕ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್
ಕಣ್ಣು ಕಾಣಿಸದ (ಕುರುಡು) ಮಹಿಳೆಯೊಬ್ಬರು ಮೊದಲ ಬಾರಿಗೆ ತಮ್ಮ ಮೊಮ್ಮಗನ ಭೇಟಿಯಾಗಿದ್ದು, ಆ ಕ್ಷಣದ ಮಹಿಳೆಯ ಭಾವುಕ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಣ್ಣು ಕಾಣಿಸದೇ ಇದ್ದರು ಮಗುವನ್ನು ಎತ್ತಿಕೊಂಡ ಕೂಡಲೇ ಆ ಮಹಿಳೆ ಸಂಪೂರ್ಣ ಭಾವುಕರಾಗಿ ಕಣ್ಣೀರಿಟ್ಟರು.
ನವಜಾತ ಶಿಶುವನ್ನು ಹಿಡಿದುಕೊಂಡ ಆಕೆಯ ಭಾವನೆಗೆ ಬೆಲೆ ಕಟ್ಟಲು ಸಾಧ್ಯವಿರಲಿಲ್ಲ. ಆಕೆಯ ಹುಟ್ಟಿದ ಹಬ್ಬದ ದಿನವೇ ಆಕೆಗೆ ಮೊದಲ ಬಾರಿಗೆ ತನ್ನ ಮೊಮ್ಮಗುವನ್ನು ನೋಡಲಾಗದಿದ್ದರು ಹಿಡಿದುಕೊಳ್ಳುವ ಅವಕಾಶ ಸಿಕ್ಕಿತ್ತು. ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್ ಆಗಿದೆ. ಮಹಿಳೆ ಗೇಟ್‌ನ ಹತ್ತಿರ ನಿಂತಿರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಮಗುವನ್ನು ಆಕೆಯ ಕೈಗೆ ನೀಡುತ್ತಾಳೆ. ಆಗ ಆಕೆ ಮಗುವನ್ನು ಎದೆಗಪ್ಪಿ ಖುಷಿಯಿಂದ ಕಣ್ಣೀರಿಡುತ್ತಾಳೆ.
ನನ್ನ ತಾಯಿ ಕುರುಡಿಯಾಗಿದ್ದು, ನನ್ನ ಸಹೋದರ ಆಕೆಗೆ ಆಕೆಯ ಹುಟ್ಟು ಹಬ್ಬಕ್ಕಾಗಿ ಕೆಲವು ಹೂವುಗಳನ್ನು ತೆಗೆದುಕೊಂಡು ಬರುವುದಾಗಿ ಹೇಳಿದ್ದ. ಅವಳು ಅದೇ ನಿರೀಕ್ಷೆಯಲ್ಲಿದ್ದಳು. ಆದರೆ ಆಕೆಯ ಕೈಗೆ ಮಗುವನ್ನು ಇತ್ತಾಗ ಇದೇನು ಎಂದು ಕೇಳಿದ ಆಕೆ ಓ ಮೈ ಲವ್ ಎಂದು ಹೇಳುತ್ತಾ ಮಗುವನ್ನು ಎದೆಗಪ್ಪಿಕೊಂಡು ಭಾವುಕಳಾದಳು ಎಂದು ಆಕೆಯ ಪುತ್ರ ಹೇಳಿದ್ದಾನೆ.
ಅಯ್ಯೋ ಒಮ್ಮೆ ಕೆಳಗಿಳ್ಸಿ... ಪ್ಯಾರಾಗ್ಲೈಡಿಂಗ್ ಮಾಡಲು ಹೋಗಿ ಏನಾಯ್ತು ನೋಡಿ
ನವಜಾತ ಶಿಶುವಿನ ಆರೋಗ್ಯದ (babies health) ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ. ಪುಟಾಣಿ ಮಕ್ಕಳ ಆರೈಕೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಅದಕ್ಕಾಗಿ ಸಾಸಿವೆ ದಿಂಬುಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇದು ಮಕ್ಕಳಿಗೆ ಅತ್ಯಂತ ಪ್ರಯೋಜನಕಾರಿ. ಏನಿದು ಸಾಸಿವೆ ದಿಂಬು ಮತ್ತು ಯಾಕೆ ಇದನ್ನು ಬಳಕೆ ಮಾಡುತ್ತಾರೆ ನೋಡೋಣ..
ನವಜಾತ ಶಿಶುಗಳನ್ನು ಹುಟ್ಟಿನಿಂದ 6 ತಿಂಗಳ ವಯಸ್ಸಿನವರೆಗೆ ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗಿದೆ ಎಂದು ಆರೋಗ್ಯ ತಜ್ಞರು (Health experts) ಹೇಳುತ್ತಾರೆ, ಏಕೆಂದರೆ ಇದು ನಿರ್ಣಾಯಕ ಸಮಯ. ಇನ್ನು ಮಕ್ಕಳಿಗೆ ಸಣ್ಣ ಗಾಯಗಳು ಸಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ, ನೀವು ಮಗುವಿನ ದೇಹದ ಕೆಳಗೆ ಸಾಸಿವೆ ಬೀಜದ ದಿಂಬನ್ನು ಇಡಬೇಕು. ಇದು ಯಾಕೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ...
Woman Murder: ಸಾಕಷ್ಟು ಆಸ್ತಿ ಮಾಡಿ ಗಂಡ ಹೋಗಿದ್ದ.. ಅದೊಂದು ಕೆಲಸ ಮಾಡಿ ಹೆಣವಾದಳು!
ನವಜಾತ ಶಿಶುವಿನ ತಲೆ (babies head)ತುಂಬಾ ಮೃದುವಾಗಿದೆ, ಸ್ವಲ್ಪ ಎಡವಿದರೂ ಮಗುವಿನ ತಲೆಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದೇ ಸಮಯದಲ್ಲಿ, ದೇಹದ ಮೂಳೆಗಳು ಹೊಂದಿಕೊಳ್ಳುತ್ತವೆ ಮತ್ತು ದೇಹದ ಮೇಲೆ ಸಣ್ಣ ಒತ್ತಡವು ಸಹ ಮಗುವಿನ ಆರೋಗ್ಯವನ್ನು ಹಾನಿಗೊಳಿಸುತ್ತದೆ, ಆದ್ದರಿಂದ ಮಗುವಿಗೆ ಮೃದುವಾದ ದಿಂಬು ಮಾಡಬೇಕಾದ ಅಗತ್ಯವಿದೆ.
ಇತರ ದಿಂಬುಗಳಿಗೆ ಹೋಲಿಸಿದರೆ ಸಾಸಿವೆ ದಿಂಬು ಮೃದುವಾಗಿರುತ್ತದೆ, ಇದು ತಲೆ ಕೆಳಗೆ ಒಂದೇ ಕಡೆಗೆ ಇರುತ್ತದೆ. ಈ ದಿಂಬನ್ನು ಇಡುವುದರಿಂದ ಮಗುವಿನ ತಲೆಯ ಗಾತ್ರ ಕ್ಷೀಣಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಮಗುವಿನ ತಲೆಗೆ ಬಲ ಸಿಗುತ್ತದೆ. ದಿಂಬನ್ನು ಹುಟ್ಟಿನಿಂದ 8 ರಿಂದ 9 ತಿಂಗಳ ವಯಸ್ಸಿನವರೆಗೆ ಬಳಸಬೇಕು ಎಂದು ಆರೋಗ್ಯ ತಜ್ಞರು (Health experts) ಹೇಳುತ್ತಾರೆ. ಮಗು ಮಂಡಿಯ ಮೇಲೆ ನಡೆಯಲು ಪ್ರಾರಂಭಿಸಿದಾಗ ಸಾಸಿವೆ ದಿಂಬನ್ನು ತೆಗೆಯಬೇಕು. ಇದರಿಂದ ಮಗುವಿನ ತಲೆಗೆ ಬಲ ಸಿಗುತ್ತದೆ.