ರಷ್ಯಾದಲ್ಲಿ ಪಟಾಕಿ ಫ್ಯಾಕ್ಟರಿಯೊಂದರಲ್ಲಿ ಭಾರೀ ಬೆಂಕಿ| ರಾತ್ರಿ ಇಡೀ ಆಕಾಶದಲ್ಲಿ ಪಟಾಕಿ ಸಿಡಿಯುವ ದೃಶ್ಯಗ| ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. 

ರಷ್ಯಾದಲ್ಲಿ ಪಟಾಕಿ ಫ್ಯಾಕ್ಟರಿಯೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದ ರಾತ್ರಿ ಇಡೀ ಆಕಾಶದಲ್ಲಿ ಪಟಾಕಿ ಸಿಡಿಯುವ ದೃಶ್ಯಗಳು ಕಂಡು ಬಂದವು. ಸದ್ಯ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಪಟಾಕಿ ಹಿಂದೂ ಸಂಪ್ರದಾಯ ಅಲ್ಲ ಎಂದ ಡಿ ರೂಪಾಗೆ ಪಾಠ!

ಡೈಲಿ ಮೇಲ್ ವರದಿಯನ್ವಯ ಈ ಘಟನೆ ಡಿಸೆಂಬರ್ 6ರಂದು ದಕ್ಷಿಣ ರಷ್ಯಾದಲ್ಲಿ ನಡೆದಿದೆ. ಇನ್ನು ವೈರಲ್ ಆದ ವಿಡಿಯೋದಲ್ಲಿ ಪಟಾಕಿಗಳು ಸಿಡಿಯುವಾಗ ಅಗ್ನಿಶಾಮಕ ದಳ ಸಿಬ್ಬಂದಿಯೂ ಅಲ್ಲಿಂದ ಹಿಂದೆ ಸರಿದ ದೃಶ್ಯ ನೋಡಬಹುದಾಗಿದೆ. ಯಾಕೆಂದರೆ ಅಲ್ಲಿ ಭಾರೀ ಪ್ರಮಾಣದಲ್ಲಿ ಸಿಡಿಯುತ್ತಿದ್ದ ಪಟಾಕಿಯಿಂದ ಹೊರಟ ಬೆಂಕಿ ಕಿಡ ಅಲ್ಲಿದ್ದವರ ಮೇಲೆ ಹಾರುತ್ತಿದ್ದವು.

Scroll to load tweet…

ಸ್ಥಳೀಯ ಮಾಧ್ಯಮಗಳನ್ವಯ ಎಡವಟ್ಟಿನಿಂದಾಗಿ ವಿದ್ಯುತ್ ಹೀಟರ್‌ನಿಂದಾಗಿ ಬೆಂಕಿ ಆವರಿಸಿ, ಅಲ್ಲಿದ್ದ ಪಟಾಕಿ ಫ್ಯಾಕ್ಟರಿಗೆ ವ್ಯಾಪಿಸಿದೆ. ಈ ಫ್ಯಾಕ್ಟರಿಯಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿ ದಾಸ್ತಾನು ಇರಿಸಲಾಗಿತ್ತು. ಹೊಸ ವರ್ಷಾಚರಣೆಗೆ ಇಲ್ಲಿ ದಾಸ್ತಾನು ಇಡಲಾಗಿತ್ತೆನ್ನಲಾಗಿದೆ. 

Scroll to load tweet…

ಇಲ್ಲಿನ ಕಟ್ಟಡಗಳಿಗೂ ಭಾರೀ ಹಾನಿ ಸಂಭವಿಸಿದ್ದು, ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಗಳು ತಿಳಿಸಿವೆ.