ಬೆಂಗಳೂರು( ನ. 18) ಐಪಿಎಸ್ ಆಫೀಸರ್ ಡಿ ರೂಪಾ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.  ಪಟಾಕಿ ಸಿಡಿಸುವುದು ಹಿಂದು ಸಂಪ್ರದಾಯ ಅಲ್ಲ. ಪಟಾಕಿ ಬಗ್ಗೆ ಪುರಾಣದಲ್ಲಿ ಉಲ್ಲೇಖ ಇಲ್ಲ ಎಂದು ಬರೆದುಕೊಂಡಿದ್ದು ಎಲ್ಲ ಕತೆಗಳಿಗೆ ಕಾರಣ..

ವೇದಗಳ ಕಾಲದಲ್ಲಿ ಪಟಾಕಿ ಉಲ್ಲೇಖ ಇರಲಿಲ್ಲ. ಯುರೋಪಿಯನ್ನರ ಕಾರಣಕ್ಕೆ ನಮ್ಮ ದೇಶಕ್ಕೆ ಪಟಾಕಿ ಆಗಮನ ಆಯಿತು ಎಂದು ರೂಪಾ ಬರೆದಿದ್ದರು.

ಹಸಿರು ಪಟಾಕಿಯೂ ಸೇಫಲ್ಲ

ಬೆಂಗಳೂರು ರೈಲ್ವೆ ವಿಭಾಗದ ಐಜಿಪಿಯಾಗಿರುವ ರೂಪಾ ಹೇಳಿಕೆಗೆ ವಿರೋಧದ ಅಭಿಪ್ರಾಯಗಳು ಬಂದಿವೆ.  ದೀಪಾವಳಿಯನ್ನು ಹೇಗೆ ಆಚರಣೆ ಮಾಡಬೇಕು ಎಂಬುದನ್ನು  ನೀವು ನಮಗೆ ಹೇಳಿಕೊಡಬೇಕಿಲ್ಲ ಎಂದು ರೂಪಾಗೆ ಅನೇಕರು ಉತ್ತರ ನೀಡಿದ್ದಾರೆ.