ನವದೆಹಲಿ(ಮೇ.23):  ಕೊರೋನಾ ವೈರಸ್ ಚೀನಾ ನಿರ್ಮಿತ ಅನ್ನೋ ಆರೋಪಗಳಿವೆ. ಚೀನಾ ತನ್ನ ಆರ್ಥಿಕತೆಯನ್ನು ಬಲಪಡಿಸಲು ಹಾಗೂ ವಿಶ್ವದ ಮೇಲೆ ಪ್ರಭುತ್ವ ಸಾಧಿಸಲು ಕೊರೋನಾ ವೈರಸ್ ಮೂಲಕ ಆಟವಾಡಿದೆ ಅನ್ನೋ ಮಾತುಗಳು ಇವೆ. ಆದರೆ ಕೊರೋನಾ ಬಂದ ಬಳಿಕ ಇದೀಗ ಹಲವು ದೇಶಗಳು ಒಂದಾಗಿ ಚೀನಾ ಮೇಲೆ ಆರೋಪಗಳ ಸುರಿಮಳೆಗೈಯುತ್ತಿದೆ. ಇತ್ತ ಭಾರತ ಸದ್ದಿಲ್ಲದೆ ತನ್ನ ಕೆಲಸ ಮಾಡಿ ಮುಗಿಸುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ 2ನೇ ಅತೀ ದೊಡ್ಡ ಹೊಡೆತ ನೀಡಿದ್ದಾರೆ.

ಮುಕ್ತ ವಾಯುಸೀಮೆ ಒಪ್ಪಂದಕ್ಕೆ ಗುಡ್‌ಬೈ, ಅಮೆರಿಕ ಯುದ್ದೋನ್ಮಾದದಲ್ಲಿದೆ ಎಂದ ಚೀನಾ

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂಪಾಯಿ ಘೋಷಣೆ ಮಾಡಿದ ಪ್ರಧಾನಿ ಮೋದಿ, ಚೀನಾ ಸೇರಿದಂತೆ ವಿದೇಶಿ ವಸ್ತುಗಳ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ಮೂಲಕ ಚೀನಾ ಆರ್ಥಿಕ ವ್ಯವಹಾರದ ಮೇಲೆ ಬಹುದೊಡ್ಡ ಪೆಟ್ಟು ನೀಡಿದ್ದರು. ಇನ್ನು ಅಮೆರಿಕಾ ಸೇರಿದಂತೆ  ಪ್ರಬಲ ದೇಶಗಳು ಭಾರತದ ಬೆಂಬಲಕ್ಕಿರುವುದು ಮೋದಿ ಶಕ್ತಿ ಮತ್ತಷ್ಟು ಹೆಚ್ಚಿಸಿದೆ. ಇದರ ನಡುವೆ ಚೀನಾ ಹಿಡಿತದಲ್ಲಿರುವ ತೈವಾನ್ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರಕ್ಕೆ ಬಿಜೆಪಿ ಎಂಪಿ ಮೀನಾಕ್ಷಿ ಲೇಖಿ ಹಾಗೂ ರಾಹುಲ್ ಕಸ್ವಾನ್ ಪಾಲ್ಗೊಳ್ಳುವ ಮೂಲಕ, ಚೀನಾಗೆ 2ನೇ ಅತೀ ದೊಡ್ಡ ಹೊಡೆತ ನೀಡಿದ್ದಾರೆ.

ಇಡೀ ಜಗತ್ತೇ ಭಾರತಕ್ಕೆ ಶರಣು, ಮೋದಿ ಬಂಟನ ಕೈಯಲ್ಲಿ ಚೀನಾ ಭವಿಷ್ಯ!.

ಮೋದಿ ಸೂಚನೆಯಂತೆ ಮೀನಾಕ್ಷಿ ಲೇಖಿ ಹಾಗೂ ರಾಹುಲ್ ಕಸ್ವಾನ್, ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್ ವೆನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಶುಭಹಾರೈಸಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ತೈವಾನ್ ದ್ವೀಪ ರಾಷ್ಟ್ರ ಚೀನಾದ ಕಪಿಮುಷ್ಟಿಯಲ್ಲಿದೆ. ಹಲವು ದಶಕಗಳಿಂದ ತೈವಾನ್ ಚೀನಾ ವಿರುದ್ದ ಹೋರಾಟ ಮಾಡುತ್ತಲೇ ಇದೆ. ಸ್ವತಂತ್ರ ದೇಶವಾಗಲು ಹಲವು ಪ್ರಯತ್ನಗಳು ನಡೆಸಿದೆ. ಆದರೆ ಚೀನಾ ಎಲ್ಲವನ್ನೂ ಹತ್ತಿಕ್ಕಿದೆ. 

ನೂತನವಾಗಿ ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ತ್ಸಾಯಿ ಇಂಗ್ ವೆನ್, ಡಮಾಕ್ರಟಿಕ್ ಪ್ರೊಗ್ಸೆಸ್ಸೀವ್ ಪಾರ್ಟಿಯ ನಾಯಕರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಚೀನಾದಿಂದ ಮುಕ್ತವಾಗಲು ಹೋರಾಟ ನಡೆಸಿದ್ದಾರೆ. ಇದೀಗ ಇವರ ಪ್ರಮಾಣ ವಚನ ಸ್ವೀಕರಾ ಸಮಾರಂಭದಲ್ಲಿ ಬಿಜೆಪಿ ಎಂಪಿಗಳು ಭಾಗವಹಿಸೋ ಮೂಲಕ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದೆ. 

ಮೋದಿ ಬೆಂಬಲ ಪಡೆದಿರುವ ತೈವಾನ್ ಅಧ್ಯಕ್ಷರಿಗೆ ಇತ್ತ ಅಮೆರಿಕ, ಸೇರಿದಂತೆ ಇತರ ರಾಷ್ಟ್ರದ ಬೆಂಬಲ ದೂರೆಯುವುದರಲ್ಲಿ ಅನುಮಾನವಿಲ್ಲ. ಎಲ್ಲರ ಬೆಂಬಲದೊಂದಿದೆ ಚಳುವಳಿ ತೀವ್ರಗೊಂಡರೆ ತೈವಾನ್ ಮೇಲಿನ ಚೀನಾ ಪ್ರಭುತ್ವ ಅಂತ್ಯವಾಗಲಿದೆ.