Asianet Suvarna News Asianet Suvarna News

ದಾವೋಸ್‌ನಲ್ಲಿ ಮೋದಿ, ಟ್ರಂಪ್ ವಿರುದ್ಧ ಬಿಲಿಯನೇರ್ ಸೊರೊಸ್ ವಾಗ್ದಾಳಿ!

ದಾವೋಸ್ ಶೃಂಗಸಭೆಯ ವೇದಿಕೆಯಲ್ಲೇ ಮೋದಿ ವಿರುದ್ಧ ಹರಿಹಾಯ್ದ ಜಾರ್ಜ್ ಸೊರೊಸ್| ಹಂಗೇರಿ ಮೂಲದ ಅಮೆರಿಕನ್ ಬಿಲೆನಿಯರ್ ಜಾರ್ಜ್ ಸೊರೊಸ್ | ಮೋದಿ ಭಾರತವನ್ನು ಅಸಹಿಷ್ಣು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಹೊರಟಿದ್ದಾರೆ ಎಂದ ಜಾರ್ಜ್| 'ಸಿಎಎ ನೆಪದಲ್ಲಿ ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯಲು ಮೋದಿ ಪ್ರಯತ್ನ'| ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧವೂ ಹರಿಹಾಯ್ದ ಜಾರ್ಜ್ ಸೊರೊಸ್|

Billionaire George Soros Attack PM Modi and Donald Trump At Davos Summit
Author
Bengaluru, First Published Jan 24, 2020, 4:55 PM IST

ದಾವೋಸ್(ಜ.24): ದಾವೋಸ್ ಶೃಂಗಸಭೆಯ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಂಗೇರಿ ಮೂಲದ ಅಮೆರಿಕನ್ ಬಿಲೆನಿಯರ್ ಜಾರ್ಜ್ ಸೊರೊಸ್ ತೀವ್ರ ವಾಗ್ದಾಳಿ ನಡೆಸಿದ ಪ್ರಸಂಗ ನಡೆದಿದೆ.

ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಾರ್ಜ್ ಸೊರೊಸ್, ಪ್ರಧಾನಿ ಮೋದಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವಲ್ಲಿ ನಿರತರಾಗಿದ್ದು, ಇದರಿಂದ ಆ ದೇಶ ಅಶಾಂತಿಯ ಗೂಡಾಗಿ ಪರಿವರ್ತನೆಯಾಗಿದೆ ಎಂದು ಹರಿಹಾಯ್ದರು.

1 ಕೋಟಿ ಬಾಂಗ್ಲಾ ಮುಸ್ಲಿಂರನ್ನು ಹೊರ ದಬ್ಬುತ್ತೇವೆ: ಬಿಜೆಪಿಗ

ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಪೌರತ್ವ ತಿದ್ದುಪಡಿ ಕಾಯ್ದೆಯ ಹೆಸರಲ್ಲಿ ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯಲು ಮೋದಿ ಸರ್ಕಾರ ಹುನ್ನಾರ ನಡೆಸಿದೆ ಎಂದು ಜಾರ್ಜ್ ಸೊರೊಸ್ ಗಂಭೀರ ಆರೋಪ ಮಾಡಿದರು.

Watch live now: the current state of open society around the world and optimism for the future, especially among young people and students, from @Davos #WEF20: https://t.co/REiZePV7qx

— George Soros (@georgesoros) January 23, 2020

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೂ ತರಾಟೆಗೆ ತೆಗೆದುಕೊಂಡ ಸೊರೊಸ್, ಜಗತ್ತು ತನ್ನ ಸುತ್ತಲೇ ತಿರುಗಬೇಕೆಂದು ಟ್ರಂಪ್ ಬಯಸುತ್ತಿದ್ದಾರೆ. ಅಧ್ಯಕ್ಷರಿಗೆ  ಸೀಮಿತಗೊಂಡಿದ್ದ ಸಾಂವಿಧಾನಿಕ ಮಿತಿಗಳನ್ನು ಅವರು ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿದರು.

ಟ್ರಂಪ್ ತಮ್ಮ ವರ್ತನೆಗಳಿಂದಾಗಿ ಅಮೆರಿಕ ಸಂಸತ್ತಿನಲ್ಲಿ ವಾಗ್ದಂಡನೆ ಎದುರಿಸುತ್ತಿದ್ದಾರೆ. ಆದರೂ ಮತ್ತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು, ದೇಶದ ಹಿತಾಸಕ್ತಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಸೊರೊಸ್ ತೀವ್ರ ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios