1 ಕೋಟಿ ಬಾಂಗ್ಲಾ ಮುಸ್ಲಿಂರನ್ನು ಹೊರ ದಬ್ಬುತ್ತೇವೆ: ಬಿಜೆಪಿಗ
1 ಕೋಟಿ ಬಾಂಗ್ಲಾ ಮುಸ್ಲಿಂರನ್ನು ಹೊರ ದಬ್ಬುತ್ತೇವೆ: ಬಿಜೆಪಿಗ| ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ನಾಯಿಗಳಂತೆ ಹೊಡೆದು ಕೊಲ್ಲಲಾಗಿದೆ ಎಂದಿದ್ದ ನಾಯಕ
ಬಾರಾಸಾತ್[ಜ.20]: ಕೇಂದ್ರ ಸರ್ಕಾರದ ಮಹತ್ವದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನಾಕಾರರನ್ನು ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ನಾಯಿಗಳಂತೆ ಹೊಡೆದು ಕೊಲ್ಲಲಾಗಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ದಿಲೀಪ್ ಘೋಷ್, ಇದೀಗ ಎನ್‌ಆರ್‌ಸಿ ಜಾರಿ ಮೂಲಕ ಪಶ್ಚಿಮ ಬಂಗಾಳದಲ್ಲಿರುವ 1 ಕೋಟಿ ಬಾಂಗ್ಲಾದೇಶಿ ಮುಸ್ಲಿಮರನ್ನು ರಾಜ್ಯದಿಂದ ಹೊರದಬ್ಬುತ್ತೇವೆ ಎಂದು ಗುಡುಗಿದ್ದಾರೆ.
ಅಕ್ರಮ ಬಾಂಗ್ಲನ್ನರಿಗೂ ಪಡಿತರ: ರಾಜಕಾರಣಿಗಳಿಗೆ ಮತಬ್ಯಾಂಕ್, ದಲ್ಲಾಳಿಗಳಿಗೆ ಹಣದ ಮೂಲ
ಭಾನುವಾರ ರಾರಯಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಘೋಷ್, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವವರು ಬಂಗಾಳಿ ಹಾಗೂ ಭಾರತದ ವಿರೋಧಿಗಳು ಎಂದು ಹೇಳಿದರು. ಅಲ್ಲದೆ, ವಿದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಸಿಲುಕಿರುವ ಹಿಂದು ನಿರಾಶ್ರಿತರ ಸಮರ್ಥನೆಗಾಗಿ ನನ್ನನ್ನು ಕೋಮುವಾದಿಯಾಗಿ ಬಿಂಬಿಸಿದರೂ, ಚಿಂತೆಯಿಲ್ಲ ಎಂದರು.
ರಾಜ್ಯದಲ್ಲಿ ಸರ್ಕಾರದ 1 ಕೇಜಿ ಅಕ್ಕಿ ತಿನ್ನುತ್ತಿರುವ 1 ಕೋಟಿ ಅಕ್ರಮ ಮುಸ್ಲಿಮರು ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಲಿಕರಿಂದಲೇ ಅಕ್ರಮ ವಲಸಿಗರಿಗೆ ಗೇಟ್‌ಪಾಸ್!, ಜೋಪಡಿಗಳು ತೆರವು, ಊರು ಖಾಲಿ!