ಕೊರೋನಾ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವವರೆಂದರೆ ಅದು ಕೊರೋನಾ ವಾರಿಯರ್ಸ್. ಕೊರೋನಾ ಪೀಡಿತರ ಚಿಕಿತ್ಸೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ರಜೆಗಳನ್ನು ಕ್ಯಾನ್ಸಲ್ ಮಾಡಿ ನಿರಂತರ ಸೇವೆ ನೀಡುತ್ತಿದ್ದಾರೆ. ಇತ್ತ ಮನೆಗೂ ಬಾರದೆ, ಕುಟುಂಬ ಸದಸ್ಯರಿಂದ ದೂರವಿದ್ದು, ಆಸ್ಪತ್ರೆಯಲ್ಲೇ ಉಳಿದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ನರ್ಸ್‌ ಒಬ್ಬರು ತನ್ನ ಮಕ್ಕಳನ್ನು ಎರಡು ತಿಂಗಳ ಬಳಿಕ ಭೇಟಿಯಾಗುತ್ತಿರುವ ವಿಡಿಯೋ ಒಂದು ಭಾರೀ ವೈರಲಲ್ ಆಗಿದೆ. ಹಲವಾರು ದಿನಗಳ ಬಳಿಕ ಅಮ್ಮನನ್ನು ಕಂಡು ಈ ಮಕ್ಕಳು ಸಂತಸದಿಂದ ಕುಣಿದಿದ್ದಾರೆ.

ರಾಕ್ಸ್ ಚ್ಯಾಪ್‌ಮನ್ ಎಂಬವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಘಟನೆ ಕುರಿತು ವಿವರಣೆ ನೀಡಿರುವ ರಾಕ್ಸ್ 'ಈಕೆ ಶಾರ್ಲೆಟ್, ಕೊರೋನಾ ಅಟ್ಟಹಹಾಸದ ಸಂದರ್ಭದಲ್ಲಿ ಈಕೆ ಜನರ ಪ್ರಾಣ ಕಾಪಾಡುವ ಕಾಯಕದಲ್ಲಿ ತೊಡಗಿದ್ದರು. ಹೀಗಾಗಿ ತಮ್ಮ ಮಕ್ಕಳಿಂದ ಕಳೆದ ಒಂಧತ್ತು ವಾರದಿಂದ ದೂರವಿದ್ದರು. ಒಂಭತ್ತು ವರ್ಷದ ಬೆಲಾ ಹಾಗೂ ಏಳು ವರ್ಷದ ಹ್ಯಾಟಿ ತಮ್ಮ ಆಂಟಿ ಮನೆಯಲ್ಲಿ ಉಳಿದುಕೊಂಡಿದ್ದರು. ಈ ಮಕ್ಕಳು ಕಳೆದ ಒಂಭತ್ತು ತಿಂಗಳಿಂದ ತನ್ನ ತಾಯಿಯನ್ನು ನೋಡಿರಲಿಲ್ಲ' ಎಂದಿದ್ದಾರೆ.

ಇನ್ನು ವಿಡಿಯೋದಲ್ಲಿ ಹೇಗೆ ಮಕ್ಕಳು ತಮ್ಮ ಪಾಡಿಗೆ ಕುಳಿತು ಮಾತನಾಡುತ್ತಿದ್ದಾಗ, ಹಿಂಬದಿಯಿಂದ ಸದ್ದು ಮಾಡದೇ ಬಂದ ತಾಯಿ ಮಕ್ಕಳಿಗೆ ಅರ್ಪ್ಐಸ್ ನಿಡುವುದನ್ನು ನೋಡಬಹುದಾಗುದೆ. ಇಬ್ಬರೂ ಮಕ್ಕಳು ಅದೇನೋ ನೋಡುತ್ತಿರುತ್ತಾರೆ. ಅಷ್ಟರಲ್ಲಿ ಹಿಂದೆ ಬಂದು ನಿಂತ ತಾಯಿ ಏನು ನೋಡುತ್ತಿದ್ದೀರಾ? ಎಂದು ಪ್ರಶ್ನಿಸುತ್ತಾರೆ. ತಾಯಿಯ ಧ್ವನಿ ಕೇಳಿ ಅಚ್ಚರಿಗೊಳ್ಳುವ ಮಕ್ಕಳು ಹಿಂತಿರುಗಿದಾಗ ಖುಷಿಯಲ್ಲಿ ತೇಲಾಡುತ್ತಾರೆ. ಅಮ್ಮನನ್ನು ಅಪ್ಪಿಕೊಂಡು ಅಳಲಾರಂಭಿಸುತ್ತಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಈ ನಡುವೆ ಮುದ್ದಿನ ನಾಯಿಗಳೂ ಅಮ್ಮ, ಮಕ್ಕಳ ನಡುವೆ ತಮ್ಮನ್ನೂ ಅಪ್ಪಿಕೊಳ್ಳಲು ಯತ್ನಿಸುತ್ತಿರುವುದೂ ನೆಟ್ಟಿಗರ ಗಮನ ಸೆಳೆದಿದೆ.

ನಮ್ಮ ನಡುವೆಯೂ ಹೀಗೆ ಕುಟುಂಬ ಸದಸ್ಯರಿಂದ ದೂರವಿದ್ದು, ಕೊರೋನಾ ಸಮರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ವಾರಿಯರ್ಸ್ ಇದ್ದಾರೆ. ಇವರಿಗೆ ಯಾವುದೇ ಲಾಕ್‌ಡೌನ್ ಇಲ್ಲ, ರೋಗಿಗಳ ಸೇವೆಯಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿಭಾಯಿಸುತ್ತಿರುವ ಈ ಕೊರೋನಾ ವೀರರಿಗೊಂದು ಸಲಾಂ ಎನ್ನಲು ಮರೆಯದಿರಿ.