ವಾಷಿಂಗ್ಟನ್‌: ಭಾರತೀಯ-ಅಮೆರಿಕದ ಆರೋಗ್ಯ ತಜ್ಞ ವಿದುರ್‌ ಶರ್ಮಾ ಅವರನ್ನು ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮ ಕೊರೋನಾ ನಿಯಂತ್ರಣ ತಂಡದ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನವನ್ನು ಚುರುಕುಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಬೈಡನ್‌ ಅವರು ತಂಡವೊಂದನ್ನು ರಚಿಸಿದ್ದಾರೆ.

ತಂಡವು ದೇಶಾದ್ಯಂತ ಹೆಚ್ಚು ಮಂದಿಗೆ ಕೊರೋನಾ ಪರೀಕ್ಷೆ, ಸಾಧ್ಯವಿರುವಷ್ಟು ಮಂದಿಗೆ ಲಸಿಕೆ ಸೇರಿದಂತೆ ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಿದೆ.

ಒಬಾಮಾ ಆಡಳಿತದ ಅವಧಿಯಲ್ಲಿ ಶರ್ಮಾ ದೇಶಿಯ ನೀತಿ ಮಂಡಳಿಯಲ್ಲಿ ಆರೋಗ್ಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಇದರ ಜೊತೆಯಲ್ಲಿ ಪ್ರೊಟೆಕ್ಟ್​ ಅವರ್​ ಕೇರ್ ನಲ್ಲಿ ಉಪ ಸಂಶೋಧನಾ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವಿಸ್ಕನ್ಸಿನ್ ​ನಲ್ಲಿ ಜನಿಸಿ ಮಿನ್ನೆಸೋಟಾದಲ್ಲಿ ಬೆಳೆದ ಶರ್ಮಾ ಪೋಷಕರು ಭಾರತೀಯ ಮೂಲದವರಾಗಿದ್ದಾರೆ. ವಿದುರ್​ ಶರ್ಮಾ ಹಾರ್ವಡ್​ ಟಿ.ಹೆಚ್​. ಚಾನ್​ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್ ಹಾಗೂ ಲ್ಯೂಯಿಸ್​ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ .

ಅಮೆರಿಕದಲ್ಲಿ ನಡೆಯುತ್ತಿರುವ ಕೊರೊನಾ ಲಸಿಕೆ ಕಾರ್ಯಕ್ರಮವನ್ನ ಮೇಲ್ವಿಚಾರಣೆ ಮಾಡುವ ಸಲುವಾಗಿ ಈ ರೆಸ್ಪಾನ್ಸ್ ತಂಡವನ್ನ ರಚನೆ ಮಾಡಲಾಗಿದೆ.