ಕೋಟ್ಯಧೀಶರ ಸಂಖ್ಯೆ ಡಬಲ್: ವಿಶ್ವದಲ್ಲೇ ಬೆಂಗ್ಳೂರು ನಂ.1..!
ಕಳೆದ 10 ವರ್ಷದಲ್ಲಿ ಬೆಂಗಳೂರಿನಲ್ಲಿ ಕೋಟ್ಯಧೀಶರ ಸಂಖ್ಯೆ ದುಪಟ್ಟಾಗಿದೆ ಎಂದು ಎಚ್ ಆ್ಯಂಡ್ ಪಿ ಕಂಪನಿ ಹೇಳಿದೆ. ಸಂಪತ್ತು ದುಪ್ಪಟ್ಟು ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ನಗರ ಬೆಂಗಳೂರು ಆಗಿದೆ. ಬೆಂಗಳೂರಿನ ಜತೆ ವಿಯೆಟ್ನಾಂನ ಹೊಚಿಮಿನ್ ಹಾಗೂ ಸ್ಕಾಟ್ಸ್‌ಡೇಲ್, ಅಮೆರಿಕದ ಅರಿಜೋನಾ ಸ್ಥಾನ ಪಡೆದಿವೆ.
ನ್ಯೂಯಾರ್ಕ್(ಮೇ.09): ಅಮೆರಿಕ ಮೂಲದ ಹಾಆ್ಯಂಡ್ ಪಾರ್ಟ್‌ನರ್ಸ್ ಸಂಸ್ಥೆಯು ವಿಶ್ವದ ಟಾಪ್-10 ಕೋಟ್ಯಧೀಶರ ನಗರಗಳ ಪಟ್ಟಿ ಹಾಗೂ ಸಂಪತ್ತು ಹೆಚ್ಚಳದಲ್ಲಿ ಮುಂಚೂಣಿಯಲ್ಲಿರುವ ನಗರಗಳ ಪಟ್ಟಿಯನ್ನು ಪ್ರಕಟಿಸಿದೆ. ಟಾಪ್-10 ಕೋಟ್ಯಧೀಶರ ನಗರಗಳ ಪಟ್ಟಿಯಲ್ಲಿ ಅಮೆರಿಕದ ನ್ಯೂಯಾರ್ಕ್ ವಿಶ್ವದಲ್ಲೇ ಮೊದಲ ಸ್ಥಾನ ಗಳಿಸಿದೆ. ಅಂತೆಯೇ ಕಳೆದ 10 ವರ್ಷದಲ್ಲಿ ಕೋಟ್ಯಧೀಶರ ಸಂಖ್ಯೆ ದುಪ್ಪಟ್ಟು ಆದ ನಗರಗಳ ಪೈಕಿ ಜಗತ್ತಿನಲ್ಲೇ ಬೆಂಗಳೂರು ಮೊದಲ ಸ್ಥಾನ ಗಳಿಸಿದೆ.
10 ಲಕ್ಷ ಡಾಲರ್ (8 ಕೋಟಿ ರು.) ಅಥವಾ ಅದಕ್ಕಿಂತ ಹೆಚ್ಚಿನ ಸಂಪತ್ತು ಉಳ್ಳವರು ಬೆಂಗಳೂರಿನಲ್ಲಿ ಅತಿ ವೇಗವಾಗಿ ವೃದ್ಧಿಸುತ್ತಿದ್ದಾರೆ. ವಿಪ್ರೋ ಹಾಗೂ ಇನ್ಫೋಸಿಸ್‌ನಂತಹ ಕಂಪನಿಗಳ ತವರು ಇದಾಗಿದೆ. ಕಳೆದ 10 ವರ್ಷದಲ್ಲಿ ಬೆಂಗಳೂರಿನಲ್ಲಿ ಕೋಟ್ಯಧೀಶರ ಸಂಖ್ಯೆ ದುಪಟ್ಟಾಗಿದೆ ಎಂದು ಎಚ್ ಆ್ಯಂಡ್ ಪಿ ಕಂಪನಿ ಹೇಳಿದೆ. ಸಂಪತ್ತು ದುಪ್ಪಟ್ಟು ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ನಗರ ಬೆಂಗಳೂರು ಆಗಿದೆ. ಬೆಂಗಳೂರಿನ ಜತೆ ವಿಯೆಟ್ನಾಂನ ಹೊಚಿಮಿನ್ ಹಾಗೂ ಸ್ಕಾಟ್ಸ್‌ಡೇಲ್, ಅಮೆರಿಕದ ಅರಿಜೋನಾ ಸ್ಥಾನ ಪಡೆದಿವೆ.
Business Success: ಇವರೆಲ್ಲ ಕೋಟ್ಯಾಧಿಪತಿ ಆಗಿದ್ದು ಹೇಗೆ? ಹೊರಬಿತ್ತು ಗುಟ್ಟು
ಇನ್ನು ವಿಶ್ವದ ಟಾಪ್-10 ಕೋಟ್ಯಧೀಶ ನಗರಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿರುವ ನ್ಯೂಯಾರ್ಕ್ ನಂತರ ಟೋಕಿಯೋ, ಅಮೆರಿಕದ ದ ಬೇ ಏರಿಯಾ, ಲಂಡನ್, ಸಿಂಗಾಪುರ, ಲಾಸ್ ಏಂಜಲೀಸ್, ಹಾಂಕಾಂಗ್, ಬೀಜಿಂಗ್, ಶಾಂಫ್ಟ್, ಸಿಡ್ನಿ ಸ್ಥಾನ ಪಡೆದಿವೆ.