Business Success: ಇವರೆಲ್ಲ ಕೋಟ್ಯಾಧಿಪತಿ ಆಗಿದ್ದು ಹೇಗೆ? ಹೊರಬಿತ್ತು ಗುಟ್ಟು

ಹಣ ಸಂಪಾದನೆ ಮಾಡೋದು ಸುಲಭದ ಮಾತಲ್ಲ. ಕೆಲವರಿಗೆ ಇದ್ರ ಕಲೆ ತಿಳಿದಿದೆ. ಹಣ ಗಳಿಸುವ ಜೊತೆ ವಿನಿಯೋಗಿಸುವ ಮಹತ್ವವನ್ನು ಅವರು ಅರಿತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
 

Man Asks Millionaires How They Become Rich Viral Video roo

ಕೋಟ್ಯಾಧಿಪತಿಯಾಗಬೇಕು ಅನ್ನೋದು ಪ್ರತಿಯೊಬ್ಬರ ಕನಸು. ನನಗೆ ಹಣ ಬೇಡ, ಶ್ರೀಮಂತಿಕೆ ಬೇಡ, ಐಷಾರಾಮಿ ಜೀವನ ಅಗತ್ಯವಿಲ್ಲ ಎನ್ನುವವರು ಬಹಳ ಅಪರೂಪ. ಹೇಗೆ ಹಣ ಸಂಪಾದನೆ ಮಾಡಬೇಕು, ಗಳಿಸಿದ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು, ಚಿಕ್ಕ ವಯಸ್ಸಿನಲ್ಲೇ ಲಕ್ಷಾಧಿಪತಿ, ಕೋಟ್ಯಾಧಿಪತಿ ಆಗೋದು ಹೇಗೆ ಇದು ಜನರು ಸದಾ ಚಿಂತಿಸುವ ವಿಷ್ಯದಲ್ಲಿ ಒಂದು. ಶ್ರೀಮಂತರಾಗ್ಬೇಕು ಅಂದರೆ ಏನು ಮಾಡ್ಬೇಕು ಅಂತಾ ಅನೇಕರು ಸಲಹೆ ನೀಡ್ತಾರೆ. ಆದ್ರೆ ಹೇಳೋದು ಬೇರೆ, ಅನುಭವ ಬೇರೆ. ನಿಮಗೆ ಪುಕ್ಕಟ್ಟೆ ಸಲಹೆ ನೀಡುವವರೆಲ್ಲ ಶ್ರೀಮಂತರಾಗಿರೋದಿಲ್ಲ. ಅದೇ ನೀವು ಶ್ರೀಮಂತರಾದ ವ್ಯಕ್ತಿಗಳ ಬಳಿ ಸಲಹೆ ಕೇಳಿದ್ರೆ ಅದು ಪ್ರಯೋಜನಕ್ಕೆ ಬರುತ್ತದೆ. ಹಾಗಂತ ಅದನ್ನು ಪಾಲಿಸಿಕೊಂಡು ನೀವೂ ಅವರಂತೆ ಹಣ ಸಂಪಾದನೆ ಮಾಡೋದು ಸುಲಭವಲ್ಲ. ನಿಮ್ಮ ಹಾಗೂ ಅವರ ನಡುವೆ ಅಜಗಜಾಂತರ ವ್ಯತ್ಯಾಸವಿರುತ್ತದೆ. ರಾತ್ರೋರಾತ್ರಿ ನೀವು ಶ್ರೀಮಂತರಾಗಲು ಕನಸಿನ ಮಾತು. ಒಂದ್ವೇಳೆ ಲಾಟರಿ ಹೊಡೆದ್ರೂ ಅದನ್ನು ಹೇಗೆ ಬಳಸಬೇಕೆಂಬ ಕಲೆ ನಿಮಗೆ ತಿಳಿದಿರಬೇಕು. ಕಷ್ಟಪಟ್ಟು ಹಣ ಸಂಪಾದನೆ ಮಾಡಿದ ಹಾಗೂ ಅದನ್ನು ಉತ್ತಮ ಜಾಗದಲ್ಲಿ ಹೂಡಿಕೆ ಮಾಡಿದ ಜನರನ್ನು ಮಾತನಾಡಿಸಿದಾಗ ನಿಮಗೆ ಸಾಕಷ್ಟು ವಿಷ್ಯ ತಿಳಿಯುತ್ತದೆ. ಅದನ್ನು ನಿಮ್ಮ ಕೆಲಸದಲ್ಲಿ ಜಾರಿಗೆ ತರಬಹುದು. 

ಸಾಮಾಜಿಕ ಜಾಲತಾಣ (Social Media) ಎಕ್ಸ್ ನಲ್ಲಿ ವ್ಯಕ್ತಿಯೊಬ್ಬ ದಾರಿಯಲ್ಲಿ ಬರ್ತಿದ್ದ ಶ್ರೀಮಂತ ವ್ಯಕ್ತಿಗಳ ಮುಂದೆ ಮೈಕ್ ಹಿಡಿದಿದ್ದಾನೆ. ಅವರು ಶ್ರೀಮಂತರಾಗಲು ಏನೆಲ್ಲ ಮಾಡಿದ್ದಾರೆ ಎಂಬ ಪ್ರಶ್ನೆ ಕೇಳಿದ್ದಾನೆ. ಎಂಟು ಜನರು ಇದಕ್ಕೆ ಉತ್ತರ ನೀಡಿದ್ದಾರೆ. ಒಬ್ಬೊಬ್ಬರ ವಿಡಿಯೋ (Video) ವನ್ನು ಆತ ಪ್ರತ್ಯೇಕವಾಗಿ ಪೋಸ್ಟ್ ಮಾಡಿದ್ದಾನೆ. ನೀವೂ ಕೋಟ್ಯಾಧಿಪತಿ (Crorepati) ಯಾಗುವ ಕನಸು ಕಾಣುತ್ತಿದ್ದರೆ ಈ ಸರಣಿ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದು. ಅವರ ಸಲಹೆಯನ್ನು ಪಾಲಿಸಬಹುದು.

ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಅತ್ತೆ ಹೆಸರಾಂತ ಭಾರತೀಯ ವಿಜ್ಞಾನಿ!

@jonjfarb ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಆಗಿದೆ. ಮಿಯಾಮಿಯ ಬೀದಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ನಿರೂಪಕ ಮಾತನಾಡಿಸಿದ್ದಾನೆ.  ಈತ ಹಂಚಿಕೊಂಡ ವಿಡಿಯೋದಲ್ಲಿ 32ನೇ ವಯಸ್ಸಿನ ವ್ಯಕ್ತಿಯೊಬ್ಬ ಇದ್ದಾನೆ. ಆತ ಚಿಕ್ಕ ವಯಸ್ಸಿನಲ್ಲೇ ಮಿಲಿಯನೇರ್ ಆಗಿದ್ದು, ಅದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾನೆ. ಆತ ನೀಡಿದ ಅತ್ಯುತ್ತಮ ಆರ್ಥಿಕ ಸಲಹೆ ಅಂದ್ರೆ ರಿಯಲ್ ಎಸ್ಟೇಟ್. ಸಾಲ ಮಾಡಿ ಒಂದು ಮನೆ ಖರೀದಿ ಮಾಡಿ, ಅದ್ರಲ್ಲಿ ಚಿಕ್ಕ ಕೋಣೆಯಲ್ಲಿ ನೀವು ವಾಸವಾಗಿ ಉಳಿದಿದ್ದನ್ನು ಬಾಡಿಗೆಗೆ ನೀಡಬೇಕು. ಅದ್ರಿಂದ ಬಂದ ಹಣವನ್ನು ಮತ್ತೊಂದು ಮನೆ ಖರೀದಿಗೆ ಬಳಸಬೇಕು. ಇದೇ ನನ್ನ ಶ್ರೀಮಂತಿಕೆ ಗುಟ್ಟು ಎಂದು ಆತ ಹೇಳಿದ್ದಾನೆ.

ಇನ್ನೊಬ್ಬ ವ್ಯಕ್ತಿ ಕೂಡ ರಿಯಲ್ ಎಸ್ಟೇಟ್ (Real Estate) ಬಗ್ಗೆಯೇ ಹೇಳಿದ್ದಾನೆ. ಮನೆಯನ್ನು ಬಾಡಿಗೆಗೆ ಕೊಟ್ಟು ಹಣ ಸಂಪಾದನೆ ಮಾಡುತ್ತಿರುವುದಾಗಿ ಆತ ಹೇಳಿದ್ದಾನೆ. ಇನ್ನೊಬ್ಬ ವ್ಯಕ್ತಿ 29ನೇ ವಯಸ್ಸಿನಲ್ಲಿಯೇ ರಿಯಲ್ ಎಸ್ಟೇಟ್ ಗೆ ಕೈ ಹಾಕಿ ಹಣ ಸಂಪಾದನೆ ಮಾಡಿದ್ದಾನೆ. ಟ್ಯಾಕ್ಸ್ ಕಟ್ಟದ ಮನೆಗಳನ್ನು ಅಮೆರಿಕಾ ಸರ್ಕಾರ ಹರಾಜಿನಲ್ಲಿ ಇಡುತ್ತದೆ. ಇಲ್ಲಿ ಮನೆಗಳ ಬೆಲೆ ಕಡಿಮೆ ಇರುತ್ತದೆ. ಈ ಹರಾಜಿನಲ್ಲಿ ಮನೆ ಖರೀದಿ ಮಾಡಿ ಅದನ್ನು ಮಾರುವ ವ್ಯಕ್ತಿ ಹಣವನ್ನು ಕೂಡಿಡಬಾರದು, ಹಣದಿಂದ ಹಣ ಮಾಡೋದನ್ನು ಕಲಿಯಬೇಕು ಎಂದಿದ್ದಾನೆ.

ಎರಡು ಹೊಲಿಗೆ ಯಂತ್ರಗಳಿಂದ ಆರಂಭಿಸಿ 1000 ಕೋಟಿ ಒಡೆತಿಯರಾದ ಭಾರತದ ಶೇಷ್ಠ ಫ್ಯಾಷನ್ ಡಿಸೈನರ್

ಎಂಟು ವಿಡಿಯೋದಲ್ಲಿ ಬಹುತೇಕ ಎಲ್ಲರೂ ತಮ್ಮ ಶ್ರೀಮಂತಿಕೆಗೆ ರಿಯಲ್ ಎಸ್ಟೇಟ್ ಕಾರಣ ಎಂದಿದ್ದಾರೆ. ಇದನ್ನು ನೋಡಿದ ಬಳಕೆದಾರರು, ಷೇರಿನ ಬಗ್ಗೆ ಯಾರೂ ಮಾತನಾಡಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, 2 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. 

 

Latest Videos
Follow Us:
Download App:
  • android
  • ios