Asianet Suvarna News Asianet Suvarna News

ವಿವಾದಿತ ಮೋದಿ ಸಾಕ್ಷ್ಯಚಿತ್ರಕ್ಕೆ ಬಿಬಿಸಿ ಸಂಸ್ಥೆ ಸಮರ್ಥನೆ: ಭಾರತ, ರಿಷಿ ಸುನಕ್‌ ಟೀಕೆಗೆ ಸ್ಪಷ್ಟನೆ

ಮೋದಿ ಸಾಕ್ಷ್ಯಚಿತ್ರಕ್ಕೆ ಬಿಬಿಸಿ ಸಮರ್ಥನೆ ಮಾಡಿದ್ದು, ಸಾಕ್ಷ್ಯಚಿತ್ರ ಸಂಶೋಧನೆ ಆಧರಿಸಿದೆ ಎಂದು ಬ್ರಿಟನ್‌ ಪ್ರಧಾನಿ, ಭಾರತದ ಟೀಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದೆ. 

bbc defends modi documentary as rigorously researched ash
Author
First Published Jan 21, 2023, 9:35 AM IST

ಲಂಡನ್‌: ಗುಜರಾತ್‌ ಗಲಭೆ ವೇಳೆ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಪಾತ್ರದ ಕುರಿತು ತಾನು ತಯಾರಿಸಿರುವ ವಿವಾದಿತ ಸಾಕ್ಷ್ಯಚಿತ್ರವನ್ನು ಬ್ರಿಟನ್‌ ಮೂಲದ ಬ್ರಿಟಿಷ್‌ ಬಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (ಬಿಬಿಸಿ) ಸಮರ್ಥಿಸಿಕೊಂಡಿದೆ.‘ಸಂಶೋಧನೆ ನಡೆಸಿ ಸಂಪಾದಕೀಯ ಗುಣಮಟ್ಟಕಾಯ್ದುಕೊಂಡು ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದೇವೆ’ ಎಂದು ಬಿಬಿಸಿ ಸ್ಪಷ್ಟಪಡಿಸಿದೆ.

ಈ ಸಾಕ್ಷ್ಯಚಿತ್ರ (Documentary) ಯಾವುದೇ ವಸ್ತುನಿಷ್ಠತೆ ಹೊಂದಿಲ್ಲದ ಪ್ರಚಾರದ ಸರಕು ಎಂಬ ಭಾರತದ ವಿದೇಶಾಂಗ ಸಚಿವಾಲಯ (External Affairs Ministry) ಟೀಕೆ ಮತ್ತು ಸಾಕ್ಷ್ಯಚಿತ್ರದಲ್ಲಿನ ಮೋದಿ (Modi) ಕುರಿತ ಅಂಶಗಳನ್ನು ತಾವು ಸಾರಸಗಟಾಗಿ ತಿರಸ್ಕರಿಸುವುದಾಗಿ ಸ್ವತಃ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ (Britain Prime Minister Rishi Sunak) ಬ್ರಿಟನ್‌ ಸಂಸತ್‌ನಲ್ಲಿ (Parliament) ಹೇಳಿಕೆ ನೀಡಿದ ಮಾರನೇ ದಿನ ಬಿಬಿಸಿ (BBC) ಈ ಸ್ಪಷ್ಟನೆ ನೀಡಿದೆ.

ಇದನ್ನು ಓದಿ: ಬ್ರಿಟನ್‌ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್‌

‘ವಿಶ್ವದೆಲ್ಲೆಡೆಯ ಪ್ರಮುಖ ವಿಷಯಗಳ ಕುರಿತು ಬೆಳಕು ಚೆಲ್ಲಲು ನಾವು ಬದ್ಧರಾಗಿದ್ದೇವೆ. ಈ ಸಾಕ್ಷ್ಯಚಿತ್ರವು ಭಾರತದ ಹಿಂದೂ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತ ಮುಸ್ಲಿಮರು ನಡುವಿನ ಉದ್ವಿಗ್ನ ಪರಿಸ್ಥಿತಿ, ಈ ಉದ್ವಿಗ್ನ ಪರಿಸ್ಥಿತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂಬಂಧವನ್ನು ತೋರಿಸುವ ಯತ್ನವಾಗಿದೆ. ಇದನ್ನು ತಯಾರಿಸುವ ವೇಳೆ ಗರಿಷ್ಠ ಮಟ್ಟದ ಸಂಪಾದಕೀಯ ಗುಣಮಟ್ಟ ಕಾಪಾಡಿಕೊಂಡು, ಕೂಲಂಕಷ ಅಧ್ಯಯನ ನಡೆಸಲಾಗಿದೆ. ಈ ಸಾಕ್ಷ್ಯಚಿತ್ರ ತಯಾರಿಸಲು ನಾವು ಸಾಕಷ್ಟು ಜನರು, ಸಾಕ್ಷಿಗಳು ಮತ್ತು ತಜ್ಞರನ್ನು ಸಂದರ್ಶಿಸಿದ್ದೇವೆ ಮತ್ತು ಸಾಕಷ್ಟು ಭಿನ್ನ ಅಭಿಪ್ರಾಯಗಳನ್ನು ತೋರಿಸಿದ್ದೇವೆ. ಅದರಲ್ಲಿ ಬಿಜೆಪಿಯಲ್ಲಿದ್ದವರ ಪ್ರತಿಕ್ರಿಯೆಯೂ ಇದೆ. ಭಾರತ ಸರ್ಕಾರಕ್ಕೂ ತನ್ನ ಅಭಿಪ್ರಾಯ ಸಲ್ಲಿಕೆಯ ಅವಕಾಶ ನೀಡಲಾಗಿತ್ತಾದರೂ ಅವರು ಅದನ್ನು ತಿರಸ್ಕರಿಸಿದರು’ ಎಂದು ಬಿಬಿಸಿ ಸ್ಪಷ್ಟನೆ ನೀಡಿದೆ.

ಕಾಂಗ್ರೆಸ್‌ ಟೀಕೆ:
ಈ ನಡುವೆ, ಕಾಂಗ್ರೆಸ್‌ ಪಕ್ಷವು, ‘21 ವರ್ಷ ಬಳಿಕವೂ ಗುಜರಾತ್‌ ಗಲಭೆ ಬಗ್ಗೆ ಮೋದಿಗೆ ಭಯ ಇದ್ದಂತಿದೆ. ಅವರು ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ ಬ್ಲಾಕ್‌ ಮಾಡಿದ್ದು ತಪ್ಪು’ ಎಂದಿದೆ.

ಇದನ್ನೂ ಓದಿ: 'ಚರ್ಚಿಲ್‌ ಬಗ್ಗೆಯೂ ಸಿರೀಸ್‌ ಮಾಡಿ..'ಪಿಎಂ ಮೋದಿ ಕುರಿತಾಗಿ ಬಿಬಿಸಿ ಸರಣಿಗೆ ಟ್ವಿಟರ್‌ನಲ್ಲಿ ಟೀಕೆ!

ಗುಜರಾತ್‌ ಗಲಭೆ ಚಿತ್ರಣ
2002ರಲ್ಲಿ ಗೋಧ್ರಾದಲ್ಲಿ 59 ಕರಸೇವಕರನ್ನು ಒಂದು ಕೋಮಿನ ಜನರು ರೈಲಿಗೆ ಬೆಂಕಿ ಹಚ್ಚಿದ್ದರು. ಬಳಿಕ ಸೇಡಿಗಾಗಿ ಒಂದು ಕೋಮಿನ ಜನರು ಇನ್ನೊಂದು ಕೋಮಿನವರ ಮೇಲೆ ತಿರುಗಿಬಿದ್ದಿದ್ದರು. ‘ಈ ವೇಳೆ, ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪೊಲೀಸರಿಗೆ, ‘ಕ್ರಮ ಕೈಗೊಳ್ಳದೇ ಸುಮ್ಮನಿರಿ’ ಎಂದಿದ್ದರು. ಈ ಬಗ್ಗೆ ಬ್ರಿಟನ್‌ ತಂಡ ಪುರಾವೆ ಸಂಗ್ರಹಿಸಿತ್ತು’ ಎಂದು ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ ಮಾಡಿದೆ. ಈ ಸಾಕ್ಷ್ಯಚಿತ್ರ 2 ಭಾಗಗಳಲ್ಲಿದ್ದು ಮೊದಲ ಭಾಗ ಕಳೆದ ವಾರ ಪ್ರಸಾರವಾಗಿದೆ. ಎರಡನೇ ಭಾಗ ಶೀಘ್ರವೇ ಪ್ರಸಾರವಾಗಬೇಕಿದೆ. ಇದು ಸುಳ್ಳು ಅಂಶದಿಂದ ಕೂಡಿದ ಸಾಕ್ಷ್ಯಚಿತ್ರ ಎಂದಿರುವ ಭಾರತ, ಇದನ್ನು ಯೂಟ್ಯೂಬ್‌ನಿಂದ ನಿರ್ಬಂಧಿಸಿದೆ.

ಇದನ್ನೂ ಓದಿ: "ರಾಣಿಯ ಖಾಸಗಿ ಅಂಗವಲ್ಲ"; Queen Elizabeth II ಸಾವಿನ ಕವರೇಜ್‌ನಲ್ಲಿ ಬಿಬಿಸಿ ಬ್ಲಂಡರ್‌ ಭಾರೀ ವೈರಲ್‌

Follow Us:
Download App:
  • android
  • ios