ಢಾಕಾ(ಮಾ.26): ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿದ್ದಾರೆ. ಎರಡನೇ ದಿನ ನರೇಂದ್ರ ಮೋದಿ ಬಾಂಗ್ಲಾದ ಖುಲ್‌ನಾ ಜಿಲ್ಲೆಯ ಈಶ್ವರಪುರ ಹಳ್ಳಿಯ ಜಶೋರೇಶ್ವರೀ ಕಾಳೀ ಮಂದಿರಕ್ಕೆ ತೆರಳಲಿದ್ದಾರೆ. ಪಿಎಂ ಮೋದಿ ಈ ಪ್ರವಾಸ ಆರಂಭಕ್ಕೂ ಮುನ್ನ ನಾನು ಪೌರಾಣಿಕ ಪರಂಪರೆಯುಳ್ಳ 51 ಶಕ್ತಿಪೀಠಗಳಲ್ಲೊಂದಾದ ಶೋರೇಶ್ವರೀ ಕಾಳೀ ಮಂದಿರದಲ್ಲಿ ದೇವಿ ಕಾಳಿಯ ಪೂಜೆ ನೆರವೇರಿಸಲು ಕಾತುರನಾಗಿದ್ದೇನೆ ಎಂದಿದ್ದರು. 

ಪ್ರಧಾನಿ ಮೋದಿ ಗುಣಗಾನ ಮಾಡಿದ ಬಾಂಗ್ಲಾ ಕ್ರಿಕೆಟಿಗ ಶಕೀಬ್‌ ಅಲ್‌ ಹಸನ್‌

ಈ ಮಂದಿರಕ್ಕಿತ್ತು 100 ದ್ವಾರಗಳು 

ಇದು ಬಾಂಗ್ಲಾದೇಶದ ಮೂರನೇ ಅತಿ ಪ್ರಮುಖ ಶಕ್ತಿಪೀಠವಾಗಿದೆ. ಕಾಳೀ ಪೂಜೆ ದಿನ ಇಲ್ಲಿ ಬಹುದೊಡ್ಡ ಉತ್ಸವ ಆಯೋಜಿಸಲಾಗುತ್ತದೆ. ಹಿಂದೆ ಈ ದೇಗುಲಕ್ಕೆ ನೂರು ಸ್ವಾರಗಳಿದ್ದವೆನ್ನಲಾಗಿದೆ. ಜಶೋರೇಶ್ವರೀ ಅಂದರೆ ಜಶೋರದ ದೇವಿ ಎಂದರ್ಥ. ಈ ದೇಗುಲ ಭಾರತದ ಉಪಖಂಡಗಳಲ್ಲಿರುವ ಶಕ್ತಿಪೀಠಗಳಲ್ಲೊಂದು ಎನಮ್ನಲಾಗುತ್ತದೆ. ಹಿಂದೂ ಪರಂಪರೆಯನ್ವಯ ಈ ದೇಗುಲ 51 ಶಕ್ತಿಪೀಠಗಳಲ್ಲೊಂದು. ಹೀಗಾಗೇ ಹಿಂದೂ ಸಮುದಾಯದಲ್ಲಿ ಇದೊಂದು ಪವಿತ್ರ ಸ್ಥಳ ಎನ್ನಲಾಗಿದೆ.

ಮೋದಿ ಬಾಂಗ್ಲಾ ಭೇಟಿ ಹಿಂದೆ ಪಶ್ಚಿಮ ಬಂಗಾಳ ಚುನಾವಣಾ ತಂತ್ರ!

ಪಿಎಂ ಭೇಟಿ ಹಿನ್ನೆಲೆ ದೇಗುಲ ರೆಡಿ

ಮಂದಿರದ ಕಾರ್ಯವಾಹಕ ಜ್ಯೋತಿ ಚಟೋಪಾಧ್ಯಾಯ ಈ ಕುರಿತು ಮಾತನಾಡುತ್ತಾ 'ನಾನು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲು ತಯಾರಾಗಿದ್ದೇನೆ. ಭಾರತದ ಪ್ರಧಾನಿ ಈ ದೇಗುಲಕ್ಕೆ ಭೇಟಿ ನೀಡುತ್ತಾರೆಂದು ಬಹಳ ಖುಷಿಯಾಗಿದೆ' ಎಂದಿದ್ದಾರೆ.