ಮೋದಿ ಬಾಂಗ್ಲಾ ಭೇಟಿ ಹಿಂದೆ ಪಶ್ಚಿಮ ಬಂಗಾಳ ಚುನಾವಣಾ ತಂತ್ರ!
ಪ್ರಧಾನಿ ಮೋದಿ ಬಾಂಗ್ಲಾದೇಶ ಭೇಟಿಯ ಹಿಂದೆ ಪಶ್ಚಿಮ ಬಂಗಾಳ ಚುನಾವಣಾ ತಂತ್ರ| ನಾಳೆ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ| ಬಾಂಗ್ಲಾ ದೇಶದಲ್ಲಿ ಮೋದಿ ಟೆಂಪಲ್ ರನ್| ನಾಳೆ ನರೇಂದ್ರ ಮೋದಿ ಠಾಕೂರ್ಬಾಡಿ ಮತ್ತು ಸಬ್ಖೇರಾ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ
ನವದೆಹಲಿ(ಮಾ.26) ದೇಶದಲ್ಲಿ ಒಂದೆಡೆ ಪಂಚರಾಜ್ಯ ಚುನಾವಣೆಗಳು ಘೋಷಣೆಯಾಗಿವೆ, ಹೀಗಿರುವಾಗ ಪಶ್ಚಿಮ ಬಂಗಾಳದಲ್ಲಿ ಶನಿವಾರ ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಚುನಾವಣಾ ಭರಾಟೆ ನಡುವೆ ಅತ್ತ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಬಾಂಗ್ಲಾ ತಲುಪಿದ್ದು, ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಮೋದಿಯನ್ನು ಸ್ವಾಗತಿಸಿದ್ದಾರೆ. ಹೀಗಿರುವಾಗ ಮೋದಿ ಬಾಂಗ್ಲಾ ಭೇಟಿ ಪಶ್ಚಿಮ ಬಂಗಾಳ ಚುನಾವಣಾ ತಂತ್ರ ಎಂಬ ಮಾತುಗಳೂ ಕೇಳಿ ಬಂದಿವೆ.
ಬಾಂಗ್ಲಾ ಪತ್ರಿಕೆಯಲ್ಲಿ ಮೋದಿ ಲೇಖನ, ಮುಜಿಬುರ್ ರೆಹಮಾನ್ ಸಂಘರ್ಷ ನೆನಪಿಸಿಕೊಂಡ ಭಾರತದ ಪ್ರಧಾನಿ!
ಹೌದು ಬಾಂಗ್ಲಾ ದೇಶದಲ್ಲಿ ಮೋದಿ ಟೆಂಪಲ್ ರನ್ ನಡೆಸಲಿದ್ದಾರೆ. ಠಾಕೂರ್ಬಾಡಿ ಮತ್ತು ಸಬ್ಖೇರಾ ಸ್ಥಳಗಳಿಗೆ ಪ್ರಧಾನಿ ಭೇಟಿ ನೀಡಲಿದ್ದಾರೆ. ಇನ್ನು ಈ ಎರಡು ಭಾಗಗಳಲ್ಲಿ ಅತಿ ಹೆಚ್ಚು ಮಥರಾ ಸಮುದಾಯದವರು ನೆಲೆಸಿದ್ದಾರೆ. ಇತ್ತ ಇದೇ ಮಥುರಾ ಸಮುದಾಯದವರು ಪಶ್ಚಿಮ ಬಂಗಾಳದ 30 ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಹೀಗಾಗಿ ಮೋದಿ ಬಾಂಗ್ಲಾ ಭೇಟಿ ಹಿಂದೆ ಚುನಾವಣಾ ತಂತ್ರವಿದೆ ಎನ್ನಲಾಗಿದೆ.
ಮೋದಿ 2 ದಿನ ಬಾಂಗ್ಲಾ ಪ್ರವಾಸ: ಕೋವಿಡ್ ಬಳಿಕ ಮೊದಲ ವಿದೇಶ ಭೇಟಿ!
ಇನ್ನುಳಿದಂತೆ ಮೋದಿ ಸುರೇಶ್ವರಿ ಶಕ್ತಿ ಪೀಠಕ್ಕೂ ಭೇಟಿ ನೀಡಲಿದ್ದಾರೆ. ಸುರೇಶ್ವರಿ ದೇವತೆ ಮಧುರಾ ಸಮುದಾಯ ದೇವರಾಗಿದ್ದು. ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಮತ ಗಳಿಸಲು ಸಹಕಾರಿಯಾಗಲಿದೆ ಎನ್ನಲಾಘಿದೆ.