ಬಿಟ್ಟಿಂಗ್ಬಿಡನ್ ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಆದ ವಿಡಿಯೋ ಬೇಬಿ ಡೈನೋಸಾರ್‌ಗಳೆ ಎಂದು ಅಚ್ಚರಿಗೊಳಗಾದ ನೆಟ್ಟಿಗರು ಇವು ಡೈನೋಸಾರ್‌ಗಳಲ್ಲ ಕೋಟಿಸ್ ಅಥವಾ ಕೋಟಿಮುಂಡಿಸ್  ಎಂಬ ಪ್ರಾಣಿಗಳು

ಬೇಬಿ ಡೈನೋಸಾರ್‌ಗಳಂತೆ ಕಾಣುವ ಗುಂಪೊಂದು ಬೀಚ್‌ನಲ್ಲಿ ಓಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಟ್ಟಿಂಗ್ಬಿಡನ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ. ಇದು ನನಗೆ ಕೆಲವು ಸೆಕೆಂಡುಗಳನ್ನು ತೆಗೆದುಕೊಂಡಿತು. ಈ ವಿಡಿಯೋದಲ್ಲಿ ಕಾಣಿಸುವ ಪ್ರಾಣಿಗಳು ಉದ್ದ ಕತ್ತಿನ ಡೈನೋಸಾರ್‌ ಪ್ರಬೇಧದ ಸೌರೋಪಾಡ್ಸ್‌ ಡೈನೋಸಾರ್‌ಗಳಂತೆ ಕಾಣಿಸುತ್ತಿದ್ದು, ಸಮುದ್ರದತ್ತ (sea) ಓಡುತ್ತಿವೆ. 14 ಸೆಕೆಂಡ್‌ಗಳ ವಿಡಿಯೋ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ. 

ಆದರೆ ಕೆಲವರು ಅದು ಡೈನೋಸಾರ್‌ಗಳ (dinosaurs) ಗುಂಪಲ್ಲ ಎಂಬುದನ್ನು ತ್ವರಿತವಾಗಿ ಗುರುತಿಸಿದ್ದಾರೆ. "ಕೋಟಿಸ್ ಅಥವಾ ಕೋಟಿಮುಂಡಿಸ್ ಎಂದೂ ಕರೆಯುವ ಪ್ರೊಸಿಯೊನಿಡೆ ಕುಟುಂಬಕ್ಕೆ ಸೇರಿದ ಅಪರೂಪದ ಪ್ರಾಣಿಗಳು ಇವಾಗಿವೆ. ಇವು ದಕ್ಷಿಣ ಅಮೆರಿಕಾ (South America) , ಮಧ್ಯ ಅಮೆರಿಕಾ, ಮೆಕ್ಸಿಕೋ (Mexico) ಮತ್ತು ನೈಋತ್ಯ ಯುನೈಟೆಡ್ ಸ್ಟೇಟ್ಸ್‌ಗೆ (United State) ಸೇರಿದ ಸ್ಥಳೀಯ ಸಸ್ತನಿಗಳಾಗಿವೆ. ಕೋಟಿಮುಂಡಿ ಎಂಬ ಹೆಸರು ಬ್ರೆಜಿಲ್‌ನ (Brazil) ಟುಪಿಯನ್ ಭಾಷೆಗಳಿಂದ ಬಂದಿದೆ ಇದರ ಅರ್ಥ ಒಂಟಿ ಕೋಟಿ ಎಂದು ಬಳಕೆದಾರರು ಈ ಜೀವಿಗಳ ಬಗ್ಗೆ ಟ್ವಿಟ್ಟರ್‌ನಲ್ಲಿ(Twitter) ವಿವರಿಸಿದ್ದಾರೆ. 

ಟ್ವಿಟರ್‌ನಲ್ಲಿ ಈ ವೀಡಿಯೊವನ್ನು 9.8 ಮಿಲಿಯನ್ ಜನ ವೀಕ್ಷಿಸಿದ್ದಾರೆ. 47,000 ಕ್ಕೂ ಜನ ಲೈಕ್ ಮಾಡಿದ್ದಾರೆ. ನಾನು ಇದನ್ನು ನನ್ನ 9 ವರ್ಷದ ಮಗನಿಗೆ ತೋರಿಸಿದೆ ಮತ್ತು ಏನಾಗುತ್ತಿದೆ ಎಂಬುದನ್ನು ಕಂಡುಹಿಡಿಯಲು ಅವನಿಗೆ ಕೆಲವು ಸೆಕೆಂಡುಗಳೇ ಬೇಕಾಯಿತು. ನನಗೆ ಇದನ್ನು ತಿಳಿಯಲು ಮಿಲಿಯನ್ ವರ್ಷ ತೆಗೆದುಕೊಂಡಿತು. ನಿಮ್ಮ ಜೀವನದುದ್ದಕ್ಕೂ ಜುರಾಸಿಕ್ ಚಲನಚಿತ್ರಗಳನ್ನು ನೋಡಿದ ಪರಿಣಾಮ ಇದು. ಎಂದು ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. 

ವಯಸ್ಕ ಕೋಟಿಸ್‌ಗಳ ಗಾತ್ರವು 33 ರಿಂದ 69 ಸೆಂ.ಮೀ (13 ರಿಂದ 27 ಇಂಚು) ಉದ್ದವಿದ್ದು, ಇದು ತಲೆಯಿಂದ ಬಾಲದ ತುದಿಯವರೆಗಿನ ಉದ್ದವಾಗಿದೆ. ಕೋಟಿಸ್‌ಗಳು ಮನೆಯ ದೊಡ್ಡ ಬೆಕ್ಕಿನ ಗಾತ್ರವನ್ನು ಹೊಂದಿದ್ದು, ಭುಜದಲ್ಲಿ ಸುಮಾರು 30 cm (12 in) ಎತ್ತರ ಮತ್ತು 2 ರಿಂದ 8 kg (4.4 ಮತ್ತು 17.6 lb) ನಡುವೆ ತೂಕವಿರುತ್ತದೆ. 


ಕೆಲ ದಿನಗಳ ಹಿಂದೆ ಹಾವು ಮುಂಗುಸಿ ಕಿತ್ತಾಡುವ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೇಳಿ ಕೇಳಿ ಮುಂಗುಸಿ ಹಾವುಗಳ ಪರಮ ಶತ್ರು. ಸಣ್ಣ ಸಣ್ಣ ಕಾಲುಗಳನ್ನು ಹೊಂದಿರುವ ಸಣ್ಣ ಗಾತ್ರದ ಪ್ರಾಣಿ ಮುಂಗಿಸಿ ತನಗಿಂತ ಬಲಾಢ್ಯ ಸರೀಸೃಪವಾದ ಹಾವಿನೊಂದಿಗೆ ಹೋರಾಡಿ ಗೆಲ್ಲುತ್ತದೆ. ಇತ್ತ ನಾಗರಹಾವುಗಳು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದ್ದು, ಇವುಗಳ ವಿಷ 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮನುಷ್ಯರನ್ನು ಕೊಲ್ಲುವುದು. ಆದರೂ ಇದು ಮುಂಗುಸಿಗೆ ಹೆದರುತ್ತದೆ. ಏಕೆಂದರೆ ಹಾವು ಕಡಿದರು ಮುಂಗುಸಿ ಬದುಕಬಲ್ಲದು ಮತ್ತು ನಾಗರಹಾವುಗಳೊಂದಿಗಿನ ಕಾದಾಟದ ಶೇ. 75 ರಿಂದ 80 ಪ್ರಕರಣಗಳಲ್ಲಿ, ಮುಂಗುಸಿ ಯಾವಾಗಲೂ ಗೆಲ್ಲುತ್ತದೆ. ಭಾರತೀಯ ಬೂದು ಮುಂಗುಸಿ (ನೆವ್ಲಾ) ನಿರ್ದಿಷ್ಟವಾಗಿ ಕಾದಾಡಲು ಮತ್ತು ನಾಗರಹಾವುಗಳಂತಹ ವಿಷಕಾರಿ ಹಾವುಗಳನ್ನು ತಿನ್ನುವ ತನ್ನ ಗುಣಕ್ಕೆ ಹೆಸರುವಾಸಿಯಾಗಿದೆ.

ಭಾರತೀಯ ಬೂದು ಮುಂಗುಸಿಯೊಂದು (Indian gray mongoose) ನಾಗರಹಾವಿನೊಂದಿಗೆ ತೀವ್ರವಾಗಿ ಹೋರಾಡುತ್ತಿರುವ ವೀಡಿಯೊವೊಂದು ವೈರಲ್ ಆಗುತ್ತಿದೆ. ನಾಗರಹಾವು ಮುಂಗುಸಿಯ ಸೀಮೆಯನ್ನು ಪ್ರವೇಶಿಸಿದಂತೆ ಕಾಣುತ್ತದೆ ಮತ್ತು ಮುಂಗುಸಿಯೊಂದಿಗೆ ಮುಖಾಮುಖಿಯಾದ ನಂತರ, ನಾಗರಹಾವು ತನ್ನ ಪ್ರಾಣವನ್ನು ಉಳಿಸಲು ಅಲ್ಲಿಂದ ಓಡಿ ಹೋಗುತ್ತಿರುವುದು ಹಾಗೂ ಮುಂಗುಸಿಯು ತನ್ನ ಸೀಮೆಯಿಂದ ಅದನ್ನು ಅಟ್ಟಿಸಿಕೊಂಡು ಹೋಗುವುದನ್ನು ನೋಡಬಹುದು. 'ಮುಂಗುಸಿ ತನ್ನ ನೆಚ್ಚಿನ ಊಟದೊಂದಿಗೆ' ಎಂಬ ಶೀರ್ಷಿಕೆಯೊಂದಿಗೆ ಟ್ವಿಟ್ಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ.