ವಿಶ್ವದ ಈ ಮೂಲೆಯಲ್ಲಾಯ್ತು 'ಹನುಮಂತ'ನ ಜನನ, ಮಗುವನ್ನು ನೋಡಿ ಎಲ್ಲರಿಗೂ ಅಚ್ಚರಿ!
* ಬ್ರೆಜಿಲ್‌ನಲ್ಲಿ 12 ಸೆಂ. ಮೀಟರ್ ಉದ್ದ ಬಾಲವಿರುವ ಮಗುವಿನ ಜನನ
* ಈ ಬಾಲ ಬೆಳೆಯಲು ಕಾರಣವೇನು?
* ವೈದ್ಯರಿಗೇ ಮಗುವನ್ನು ಕಂಡು ಶಾಕ್
ಬ್ರೆಜಿಲ್(ನ.06): ಬಾಲವಿರುವ ಮಾನವ ಎಂದರೆ ಪ್ರತಿಯೊಬ್ಬರಿಗೂ ನೆನಪಾಗೋದು ರಾಮನ ಬಂಟ ಹನುಮಂತ ಹೆಸರು. ಆದರೆ ಇಂದಿನ ಯುಗದಲ್ಲಿ ಒಬ್ಬ ವ್ಯಕ್ತಿಗೆ ಬಾಲವಿದೆ ಎಂದರೆ ಯಾರೂ ನಂಬುವುದಿಲ್ಲ. ಆದರೆ ಬ್ರೆಜಿಲ್ ನಲ್ಲಿ ವಿಚಿತ್ರ ಮಗುವೊಂದು ಜನಿಸಿದ್ದು, ಇದಕ್ಕೆ 12 ಸೆಂ.ಮೀ ಉದ್ದದ ಬಾಲವಿದೆ. ಇನ್ನು ಈ ಕಂದನಿಗೆ ಬಾಲವಿದೆ ಎಂದು ತಿಳಿದಾಗ ಅದು ಕೇವಲ 35 ವಾರಗಳ ಶಿಶುವಾಗಿತ್ತು. ಹುಟ್ಟುವ ಮೊದಲೇ ಮಗುವಿಗೆ ಬಾಲ ಇರುವುದು ಗೊತ್ತಿದ್ದರೂ ಅದರಿಂದ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದರು.
ಮಗುವಿನ ದೇಹದಲ್ಲಿ ಬಾಲ ಏಕೆ ಬೆಳೆಯಿತು?
ಬ್ರೆಜಿಲ್‌ನಲ್ಲಿ ಮಗು ಬಾಲದೊಂದಿಗೆ ಜನಿಸಿರುವುದು ವೈದ್ಯರನ್ನೇ ಅಚ್ಚರಿಗೀಡು ಮಾಡಿದ್ದು, ಇದು ಬಹಳ ಅಪರೂಪದ ಪ್ರಕರಣವಾಗಿದೆ. ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟವಾದ ಚಿತ್ರದಲ್ಲಿ ಮಗುವಿನ ಬೆನ್ನಿನ ಕೆಳಗೆ ಗಡ್ಡೆಯಿದ್ದು ಬಾಲ ಅಲ್ಲಿಂದ ಹುಟ್ಟಿಕೊಂಡಿರುವುದು ಕಂಡುಬರುತ್ತದೆ. ವೈದ್ಯರ ಪ್ರಕಾರ, ಎಲ್ಲಾ ಶಿಶುಗಳು ಗರ್ಭಾವಸ್ಥೆಯ ನಾಲ್ಕರಿಂದ ಎಂಟು ವಾರಗಳ ನಡುವೆ ಗರ್ಭಾಶಯದಲ್ಲಿ ಭ್ರೂಣದ ಬಾಲವನ್ನು ಅಭಿವೃದ್ಧಿಪಡಿಸುತ್ತವೆ, ಆದರೆ ಅದು ಸಾಮಾನ್ಯವಾಗಿ ದೇಹದೊಂದಿಗೆ ಸೇರಿಕೊಳ್ಳುತ್ತದೆ. ಆದರೆ ಕೆಲವು ಅಪರೂಪದ ಸಂದರ್ಭಗಳಲ್ಲಿ ಇದು ಸಂಭವಿಸುವುದಿಲ್ಲ ಅಲ್ಲದೇ ಬಾಲ ಬೆಳೆಯುತ್ತಲೇ ಇರುತ್ತದೆ. ಬ್ರಿಟನ್‌ನಲ್ಲಿ ಮಗು ಜನಿಸಿದಾಗ, ಬಾಲವು 12 ಸೆಂಟಿಮೀಟರ್‌ಗೆ ಬೆಳೆದಿತ್ತು ಎಂದು ಹೇಳಲಾಗಿದೆ.
ಮಗುವಿನ ಗುರುತನ್ನು ಬಹಿರಂಗಪಡಿಸಲಾಗಿಲ್ಲ
ಬ್ರೆಜಿಲ್‌ನಲ್ಲಿ ಜನಿಸಿದ ಮಗುವಿನ ಉದ್ದನೆಯ ಬಾಲ ಅಲ್ಟ್ರಾಸೌಂಡ್ ಸ್ಕ್ಯಾನ್‌ನಲ್ಲಿ ಮಾತ್ರ ಪತ್ತೆಯಾಗಿದೆ. ಜರ್ನಲ್ ಆಫ್ ಪೀಡಿಯಾಟ್ರಿಕ್ ಸರ್ಜರಿ ಕೇಸ್ ವರದಿಗಳು ಶಸ್ತ್ರಚಿಕಿತ್ಸೆಯು ಯಾವುದೇ ತೊಡಕುಗಳನ್ನು ಉಂಟುಮಾಡಲಿಲ್ಲ ಎಂದು ವರದಿ ಮಾಡಿದೆ. ಆದರೆ ಬಾಲಕ ಚೇತರಿಸಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಬಾಲವು ಮಕ್ಕಳಲ್ಲಿ ಹೊರಬರುತ್ತದೆ ಆದರೆ ಸ್ವಲ್ಪ ಸಮಯದ ನಂತರ ಅದು ತನ್ನಷ್ಟಕ್ಕೇ ಒಳಗೆ ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಕೆಲವು ಒಳ ಹೋಗದೆ ಒಳಕ್ಕೆ ಸರಿಯುವುದಿಲ್ಲ ಮತ್ತು ಉದ್ದವಾದ ಬಾಲವಾಗುತ್ತವೆ. ಬಾಲದ ಶಸ್ತ್ರಚಿಕಿತ್ಸೆಯ ನಂತರದ ವಿಶ್ಲೇಷಣೆಯು ಮೂಳೆಗಳಿಲ್ಲದ ಅಂಗಾಂಶದಿಂದ ಮಾಡಲ್ಪಟ್ಟಿದೆ ಎಂದು ಕಂಡುಬಂದಿದೆ. ಆದರೆ, ಮಗುವಿನ ಹೆಸರು ಏನು ಮತ್ತು ಎಲ್ಲಿಯವರು ಎಂದು ಎಂದು ವರದಿಯಲ್ಲಿ ಹೇಳಲಾಗಿಲ್ಲ.
ಮೂರು ಶಿಶ್ನದೊಂದಿಗೆ ಜನಿಸಿದ ಮಗು..! ಇದೇ ಮೊದಲು
ವೈದ್ಯಕೀಯ ಇತಿಹಾಸದಲ್ಲಿ ಮೊದಲನೆ ಬಾರಿಗೆ ಮೂರು ಶಿಶ್ನಗಳೊಂದಿಗೆ ಗಂಡು ಮಗು ಜನಿಸಿದ ಘಟನೆಯೊಂದು ವೈದ್ಯರನ್ನೂ ಅಚ್ಚರಿಗೊಳಪಡಿಸಿದೆ. ವೈದ್ಯರ ಪ್ರಕಾರ ಇದು ಮೂರು ಶಿಶ್ನದೊಂದಿಗೆ ಜನಿಸಿದ ಮೊದಲ ಮಾನವ. ಮಗು ಮೂರು ತಿಂಗಳ ಹಿಂದೆ ಮಗು ಜನಿಸಿದೆ ಎಂದು ವರದಿಯಾಗಿದೆ.
ಈ ಸ್ಥಿತಿಯನ್ನು ಟ್ರಿಫಾಲಿಯಾ ಎಂದು ಕರೆಯಲಾಗುತ್ತದೆ. ಟ್ರಿಫಾಲಿಯಾ ಪ್ರಕರಣವು ಇರಾಕ್‌ನ ಉತ್ತರದ ಡುಹೋಕ್‌ನಲ್ಲಿ ವರದಿಯಾಗಿದೆ.
ವೈದ್ಯರ ಪ್ರಕಾರ, ಅವನ ಹೆತ್ತವರು ಮಗುವಿನ ಸ್ಕ್ರೋಟಮ್‌ನ ತಳದಲ್ಲಿ ಎರಡು ಚರ್ಮದ ಪ್ರಕ್ಷೇಪಗಳನ್ನು ಕಂಡಿದ್ದಾರೆ. ನಂತರ ಮಗುವನ್ನು ವೈದ್ಯರ ಬಳಿಗೆ ಕರೆತಂದಿದ್ದರು. ಆದರೆ ಚರ್ಮದಂತೆ ಕಂಡಿದ್ದು ಶಿಶ್ನ ಎಂದು ತಿಳಿದುಬಂದಾಗ ವೈದ್ಯರು ಸಹ ಗೊಂದಲಕ್ಕೊಳಗಾದರು.
ಮಗುವಿನ ಮುಖ್ಯ ಶಿಶ್ನ ಮಾತ್ರ ಕಾರ್ಯನಿರ್ವಹಿಸುತ್ತಿತ್ತು, ಆದ್ದರಿಂದ ವೈದ್ಯರು ಹೆಚ್ಚುವರಿ ಶಿಶ್ನಗಳನ್ನು ತೆಗೆದುಹಾಕಿದ್ದಾರೆ. ಡಾ. ಶಕೀರ್ ಸಲೀಮ್ ಜಬಾಲಿ ನೇತೃತ್ವದ ತಂಡವು ಇಂಟರ್ನ್ಯಾಷನಲ್ ಜರ್ನಲ್ ಆಫ್ ಸರ್ಜರಿ ಕೇಸ್ ರಿಪೋರ್ಟ್ಸ್ನಲ್ಲಿ ಇದರ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.
ಟ್ರಿಫಾಲಿಯಾ (ಮೂರು ಶಿಶ್ನಗಳು) ಇದುವರೆಗೂ ಮನುಷ್ಯರಲ್ಲಿ ವರದಿಯಾಗದ ಸ್ಥಿತಿಯಾಗಿದೆ. ಅತಿಮಾನುಷ ಶಿಶ್ನ ಹೊಂದಿರುವ ರೋಗಿಗಳು ವಿಶಿಷ್ಟ ಪ್ರಸ್ತುತಿಯನ್ನು ಹೊಂದಿದ್ದಾರೆ. ಇದರಲ್ಲಿ ಎಲ್ಲಾ ಪ್ರಕರಣಗಳು ಒಂದೇ ಆಗಿರುವುದಿಲ್ಲ. ಇದರ ಚಿಕಿತ್ಸೆ ಕಷ್ಟ. ಇದು ವೈದ್ಯಕೀಯ, ನೈತಿಕ ಮತ್ತು ದೇಹದ ಸೌಂದರ್ಯದ ಅಂಶಗಳನ್ನು ಕಾಯ್ದುಕೊಳ್ಳುವ ಸಾವಲು ಒಡ್ಡುತ್ತದೆ. ನಿರ್ವಹಣೆಗೆ ಸಂಯೋಜಿತ ಮಲ್ಟಿಡಿಸಿಪ್ಲಿನರಿ ತಂಡದ ಅಗತ್ಯವಿದೆ. ದೀರ್ಘಾವಧಿಯ ಅನುಸರಣೆಯ ಅಗತ್ಯವಿದೆ. ಮೂತ್ರನಾಳದ ದೈಹಿಕ ಬೆಳವಣಿಗೆ ಮತ್ತು ಅಂಗರಚನಾಶಾಸ್ತ್ರವನ್ನು ಅವಲಂಬಿಸಿ ನಕಲಿ ಶಿಶ್ನವನ್ನು ಹೊರತೆಗೆಯುವ ಅಗತ್ಯವಿದೆ ಎನ್ನಲಾಗಿದೆ,