72 ಪ್ರಯಾಣಿಕರಿದ್ದ ವಿಮಾನ ಅಕ್ತಾವುನಲ್ಲಿ ಪತನ, ಕೊನೆಯ ಕ್ಷಣಗಳ ದೃಶ್ಯ ಸೆರೆ!
72 ಪ್ರಯಾಣಿಕರನ್ನು ಹೊತ್ತು ಸಾಗಿದ ಪ್ರಯಾಣಿಕ ವಿಮಾನ ಅಕ್ತಾವುನಲ್ಲಿ ಪತನಗೊಂಡಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿದೆ. ಇತ್ತ ಹಲವು ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಮಾನದ ಕೊನೆಯ ಕ್ಷಣಗಳ ದೃಶ್ಯ ಸೆರೆಯಾಗಿದೆ.
ಅಕ್ತಾವು(ಡಿ.25) ವಿಶ್ವವೇ ಕ್ರಿಸ್ಮಸ್ ಸಂಭ್ರಮದಲ್ಲಿರುವಾಗ ಕಜಕಿಸ್ತಾನದ ಅಕ್ತಾವಿನಲ್ಲಿ ವಿಮಾನ ಪತನಗೊಂಡಿದೆ. 72 ಪ್ರಯಾಣಿಕರನ್ನು ಹೊತ್ತ ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಬಕು ನಗರದಿಂದ ರಷ್ಯಾದ ಗ್ರೋಜ್ನಿ ನಗರಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ ಕಜಕಿಸ್ತಾನದ ಅಕ್ತಾವು ಬಳಿ ವಿಮಾನ ಏಕಾಏಕಿ ಪತನಗೊಂಡಿದೆ. ನೆಲಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ. ಭೀಕರ ಘಟನೆಯ ದೃಶ್ಯ ಸೆರೆಯಾಗಿದೆ. ದಟ್ಟ ಮಂಜಿನ ಕಾರಣ ವಿಮಾನದ ಮಾರ್ಗ ಕೊನೆಯ ಕ್ಷಣದಲ್ಲಿ ಬದಲಾಯಿಸಲಾಗಿತ್ತು. ಆದರೆ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೆ, ಅತ್ತ ಹಾರಾಡಲು ಸಾಧ್ಯವಾಗದೆ ವಿಮಾನ ನೆಲಕ್ಕೆ ಅಪ್ಪಳಿಸಿದೆ.
ಕಜಕಿಸ್ತಾನ ತುರ್ತು ಸಚಿವಾಲಯ ವಿಮಾನ ಪತನ ಮಾಹಿತಿ ನೀಡಿದೆ. ಅಜರ್‌ಬೈಜಾನ್ ಏರ್‌ಲೈನ್ಸ್ ಅಕ್ತಾವುನಲ್ಲಿ ಪತನಗೊಂಡಿದೆ. 72 ಪ್ರಯಾಣಿಕರು ಈ ವಿಮಾನದಲ್ಲಿದ್ದರು. ಭೀಕರ ಪತನ ಇದಾಗಿರುವ ಕಾರಣ ಪ್ರಯಾಣಿಕರು ಸ್ಥಿತಿ ತಿಳಿದಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ರಕ್ಷಣಾ ತಂಡಗಳು ಸ್ಥಳದಲ್ಲಿದೆ. ರಕ್ಷಣಾ ಕಾರ್ಯಗಳು ನಡೆಯುತ್ತಿದೆ ಎಂದಿದೆ.
228 ಮಂದಿ ಬಲಿ ತೆಗೆದ ವಿಮಾನ ಅಪಘಾತಕ್ಕೂ ಮುನ್ನ ಪೈಲೆಟ್ ಚೀರಾಡಿ ಹೇಳಿದ ಮಾತು ಬಹಿರಂಗ!
ರಷ್ಯಾದ ಗ್ರೋಜ್ನಿಗೆ ಹೊರಟಿದ್ದ ವಿಮಾನಕ್ಕೆ ಮಾರ್ಗ ಬದಲಾವಣೆ ಸೂಚನೆ ನೀಡಲಾಗಿತ್ತು. ಗ್ರೋಜ್ನಿಯಲ್ಲಿ ದಟ್ಟ ಮಂಜು ಆವರಿಸಿರುವ ಕಾರಣ ವಿಮಾನ ಹಾರಾಟ ಸವಾಲಾಗುವ ಸಾಧ್ಯತೆ ಇದೆ. ಹೀಗಾಗಿ ಮಾರ್ಗ ಬದಲಾವಣೆಗೆ ಸೂಚಿಸಲಾಗಿತ್ತು. ಆದರೆ ಅಕ್ತಾವು ಬಳಿ ವಿಮಾನ ಆಗಮಸದಲ್ಲೇ ಕೆಲ ಸುತ್ತು ಹೊಡದಿದೆ. ವಿಮಾನ ಲ್ಯಾಂಡಿಂಗ್ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಲ್ಯಾಂಡಿಂಗ್ ಸಾಧ್ಯವಾಗಿಲ್ಲ. ನೇರವಾಗಿ ವಿಮಾನ ನೆಲಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ವಿಮಾನ ಪತನಗೊಂಡಿದೆ.
ಪತನಗೊಂಡ ಕೆಲವೇ ನಿಮಿಷಗಳಲ್ಲಿ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದೆ. ಬೆಂಕಿ ನಂದಿಸಿ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. 52 ರಕ್ಷಣಾ ತಂಡದ ಸದಸ್ಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ. 11 ಯಂತ್ರಗಳನ್ನು ಬಳಸಿಕೊಲ್ಳಾಗಿದೆ. ಕಜಕಿಸ್ತಾನ್ ತುರ್ತು ಸಚಿವಾಲಯದ ಮಾಹಿತಿ ಪ್ರಕಾರ ಕೆಲ ಪ್ರಯಾಣಿಕರು ಬದುಕುಳಿದಿದ್ದಾರೆ. ಸದ್ಯ ಪ್ರಯಾಣಿಕರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ.
ವಿಮಾನ ಪತನಕ್ಕೆ ಕಾರಣಗಳು ತಿಳಿದುಬಂದಿಲ್ಲ. ತಾಂತ್ರಿಕ ಕಾರಣ ಅಥವಾ ಮಂಜು ಮುಸುಕಿದ ವಾತಾವರಣ ವಿಮಾನ ಪತನಕ್ಕೆ ಕಾರಣವಾಯಿತಾ ಅನ್ನೋ ಮಾಹಿತಿ ಇನ್ನಷ್ಟೇ ತಳಿಯಬೇಕಿದೆ. ರಷ್ಯಾಗೆ ಹೊರಟಿರುವ ವಿಮಾನವಾಗಿದ್ದ ಕಾರಣ ಕೆಲ ಅನುಮಾನಗಳು ವ್ಯಕ್ತವಾಗತೋಡಗಿದೆ. ವಿಮಾನ ಹೈಜಾಕ್ ಮಾಡಿರುವ ಸಾಧ್ಯತೆ ಇದೆಯಾ ಅನ್ನೋ ಕುರಿತು ತನಿಖೆ ಆರಂಭಗೊಂಡಿದೆ.
ಸ್ಟಾರ್ ನಟ ಅನುಮತಿ ನೀಡದಿದ್ದರೆ ಬದುಕುಳಿಯುತ್ತಿದ್ದರು ನಟಿ ಸೌಂದರ್ಯ, ನಿರ್ದೇಶಕ ಬಿಚ್ಚಿಟ್ಟ ಘಟನೆ!