Asianet Suvarna News Asianet Suvarna News

228 ಮಂದಿ ಬಲಿ ತೆಗೆದ ವಿಮಾನ ಅಪಘಾತಕ್ಕೂ ಮುನ್ನ ಪೈಲೆಟ್ ಚೀರಾಡಿ ಹೇಳಿದ ಮಾತು ಬಹಿರಂಗ!

228 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವಿಮಾನ ಇದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡಿತ್ತು. ಅಪಘಾತಕ್ಕೆ ಕೆಲವೇ ಕ್ಷಣಗಳ ಮುನ್ನ ಪೈಲೆಟ್ ಹೇಳಿದ ಮಾತು ವಿಮಾನದ ಬ್ಲಾಕ್ ಬಾಕ್ಸ್‌ನಿಂದ ಬಹಿರಂಗವಾಗಿದೆ. ಜೊತೆಗೆ ವಿಮಾನ ಅಪಘಾತಕ್ಕೆ ಕಾರಣಗಳೂ ಹೊರಬಿದ್ದಿದೆ.
 

Air France Flight 447 crash Case Investigation reveals pilot last words after 15 years ckm
Author
First Published Apr 21, 2024, 8:36 PM IST

ಪ್ಯಾರಿಸ್(ಏ.21)ಪ್ರಯಾಣಿಕರ ಹೊತ್ತ ವಿಮಾನ ಟೇಕ್ ಆಫ್ ಆಗಿತ್ತು. ಆಗಸದಲ್ಲಿ ವೇಗವಾಗಿ ಸಾಗುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಬಿಟ್ಟಿತ್ತು. 216 ಪ್ರಯಾಣಿಕರು, 12 ಸಿಬ್ಬಂದಿಗಳು ಸೇರಿದಂತೆ ಒಟ್ಟು 228 ಮಂದಿ ಈ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಈ ವಿಮಾನ ಅಪಘಾತಕ್ಕೆ ಕಾರಣ ತನಿಖೆಯಲ್ಲಿ ಬಹಿರಂಗವಾಗಿದೆ. ಜೊತೆಗೆ ಅಪಘಾತಕ್ಕೂ ಮುನ್ನ ಪೈಲೆಟ್ ಹೇಳಿದ ಕೊನೆಯ ಮಾತುಗಳು ಕೂಡ ಬ್ಲಾಕ್ ಬಾಕ್ಸ್‌ನಿಂದ ಬಹಿರಂಗವಾಗಿದೆ. ಹೌದು, ಏರ್ ಫ್ರಾನ್ಸ್ 447 ವಿಮಾನ ಜೂನ್ 01, 2009ರಲ್ಲಿ ಅಪಘಾತಕ್ಕೀಡಾಗಿತ್ತು. ಬರೋಬ್ಬರಿ 15 ವರ್ಷಗಳ ಬಳಿಕ ಈ ಘಟನೆ ಸತ್ಯಾಂಶ ಹೊರಬಿದ್ದಿದೆ.

ಬ್ರೆಜಿಲ್‌ನ ರಿಯೋ ಡಿ ಜನೈರೋದಿಂದ ಫ್ರಾನ್ಸ್‌ನ ಪ್ಯಾರಿಸ್‌ಗೆ ಜೂನ್ 1, 2009ರಂದು ಏರ್ ಫ್ರಾನ್ಸ್ ವಿಮಾನ ಪ್ರಯಾಣ ಬೆಳೆಸಿತ್ತು. ಆದರೆ ಪ್ಯಾರಿಸ್ ತಲುವ ಮೊದಲೇ ಅಪಘಾತ ಸಂಭವಿಸಿತ್ತು. ಅಟ್ಲಾಂಟಿಕ್ ಸಮುದ್ರದಲ್ಲಿ ಈ ವಿಮಾನ ಪತನಗೊಂಡಿತ್ತು. ಅಪಘಾತ ನಡೆದ ದಿನದಿಂದ ಬರೋಬ್ಬರಿ 2 ವರ್ಷಗಳ ಕಾಲ ಹುಡುಕಾಟ ನಡೆಸಲಾಗಿತ್ತು. 10,000 ಚದರ ಕಿಲೋಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿ ವಿಮಾನದ ಅವಶೇಷಗಳನ್ನು ಪತ್ತೆ ಮಾಡಲಾಗಿತ್ತು.

ಉಕ್ರೇನ್‌ನ 65 ಮಂದಿ ಯುದ್ಧಕೈದಿಗಳಿದ್ದ ರಷ್ಯಾ ವಿಮಾನ ಪತನ

ವಿಮಾನದ ಬ್ಲಾಕ್ ಬಾಕ್ಸ್ ಪತ್ತೆಯಾಗಿತ್ತು. ಬಳಿಕ ತನಿಖೆಗಳು ಚುರುಕುಗೊಳಿಸಲಾಗಿತ್ತು. ಇದೀಗ ಅಪಘಾತಕ್ಕೂ ಕೆಲವೇ ಕ್ಷಣಗಳ ಮುನ್ನ ಪೈಲೆಟ್ ಹೇಳಿದ ಕೊನೆಯ ಮಾತು ಬಹಿರಂಗವಾಗಿದೆ. 32 ವರ್ಷದ ಪಿಯರೆ ಸೆಡ್ರಿಕ್ ಬೊನಿನ್ ಈ ವಿಮಾನದಲ್ಲಿ ಕೋ ಪೈಲೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಮತ್ತೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡಿದ ಪೈಲೆಟ್‌ಗೆ ಸಾಧ್ಯವಾಗಿಲ್ಲ. ಒಂದೆಡೆ ಸಮಯ ಮೀರುತ್ತಿದೆ. ಮತ್ತೊಂದೆಡೆ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಶರವೇಗದ ಪ್ರಯತ್ನ ನಡೆಸಿದ ಪೈಲೆಟ್, ಒಮ್ಮೆಲೆ ಚೀರಾಡುತ್ತಾ, ಈ ವಿಮಾನದ ನಿಯಂತ್ರಣ ನನ್ನ ಬಳಿ ಇಲ್ಲ. ಈ ವಿಮಾನದ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಚೀರಾಡಿದ್ದಾರೆ. ಈ ಎರಡು ವಾಕ್ಯದ ಬೆನ್ನಲ್ಲೇ ವಿಮಾನ ಅಪಘಾತಕ್ಕೀಡಾಗಿದೆ. 

ವಿಮಾನ ಅಪಘಾತಕ್ಕೆ ಪ್ರಮುಖ 2 ಕಾರಣಗಳು ತನಿಖೆಯಿಂದ ಬಹಿರಂಗವಾಗಿದೆ. ಒಂದು ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು, ಮತ್ತೊಂದು ಪೈಲಟ್ ತಕ್ಷಣಕ್ಕೆ ತಾಂತ್ರಿಕ ಸಮಸ್ಯೆ ನಡುವೆ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ವಿಫಲರಾಗಿದ್ದಾರೆ ಅನ್ನೋದು ಬಹಿರಂಗವಾಗಿದೆ. 37 ವರ್ಷದ ಪೈಲೆಟ್ ರಾಬರ್ಟ್ ಆಡಿದ ಮಾತುಗಳು ಕೂಡ ದಾಖಲಾಗಿದೆ. ನಾವು ಎಲ್ಲಾ ಪ್ರಯತ್ನ ಮಾಡಿದ್ದೇವೆ. ಏನಾಗಿದೆ ಅನ್ನೋದೇ ಅರ್ಥವಾಗುತ್ತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ ಅನ್ನೋ ಮಾತುಗಳನ್ನಾಡಿರುವುದು ಬಹಿರಂಗವಾಗಿದೆ.

ಮಿಜೋರಾಂ ಏರ್‌ಪೋರ್ಟ್‌ನಲ್ಲೇ ಪತನಗೊಂಡ 14 ಜನರಿದ್ದ ಸೇನಾ ವಿಮಾನ

ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಪೈಲೆಟ್ ಎದುರಿಸಿ ವಿಮಾನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ವಿಫಲರಾಗಿದ್ದಾರೆ. ಕ್ಲಿಷ್ಟ ಸಂದರ್ಭದಲ್ಲಿ ಪೈಲೆಟ್ ತಾಂತ್ರಿಕ ಸಮಸ್ಯೆ ನಿವಾಸಿ ವಿಮಾನ ನಿಯಂತ್ರಣ ಪಡೆಯಲು ಸಾಧ್ಯವಾಗದೆ ಕಾರಣ ವಿಮಾನ ಪತನಗೊಂಡಿದೆ ಎಂದು ತನಿಖಾ ವರದಿ ಹೇಳಿದೆ
 

Follow Us:
Download App:
  • android
  • ios