ರಾಮ ಮಂದಿರ ಶಂಕು ಸ್ಥಾಪನೆ: ಅಮೆರಿಕದಲ್ಲಿ ಹೆಚ್ಚು ವೀಕ್ಷಣೆ

ಆಗಸ್ಟ್ 05ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ರಾಮಮಂದಿರಕ್ಕೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮವನ್ನು ಭಾರತ ಸೇರಿದಂತೆ ವಿದೇಶಗಳಲ್ಲೂ ಅತಿಹೆಚ್ಚು ಜನ ವೀಕ್ಷಿಸಿದ್ದಾರೆ. ಅದರಲ್ಲೂ ಅಮೆರಿಕ ಹಾಗೂ ಬ್ರಿಟನ್‌ನಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Ayodhya Ram Mandir Found stone ceremony widely watched across the world highest viewership from USA

ನವದೆಹಲಿ(ಆ.07): ಐತಿಹಾಸಿಕ ರಾಮ ಮಂದಿರಕ್ಕೆ ಶಂಸುಸ್ಥಾಪನೆ ಕಾರ್ಯಕ್ರಮವನ್ನು ವಿಶ್ವದ ಹಲವು ದೇಶಗಲ್ಲಿ ಕೋಟ್ಯಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಅದರಲ್ಲೂ ಅಮೆರಿಕ ಹಾಗೂ ಬ್ರಿಟನ್‌ನಲ್ಲಿ ಅತೀ ಹೆಚ್ಚು ಮಂದಿ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿದ್ದಾರೆ. 

ಸರ್ಕಾರಿ ಸ್ವಾಮ್ಯದ ದೂರದರ್ಶನ ಕಾರ್ಯಕ್ರಮದ ನೇರ ಪ್ರಸಾರವನ್ನು ಮಾಡಿದ್ದು, ಈ ದೃಶ್ಯಗಳು ದೇಶದ 200ಕ್ಕೂ ಹೆಚ್ಚು ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ದೃಶ್ಯದ ಸಿಗ್ನಲ್‌ಗಳನ್ನು ಎಎನ್‌ಐ ಸುದ್ದಿ ಸಂಸ್ಥೆ ಹಾಗೂ ಅಸೋಸಿಯೇಟ್‌ ಪ್ರೆಸ್‌ ಟೆಲಿವಿಶನ್‌ ನ್ಯೂಸ್‌ಗೆ ನೀಡಲಾಗಿದ್ದು, ಇವುಗಳು ಕ್ರಮವಾಗಿ 1200 ಸ್ಟೇಷನ್‌ ಹಾಗೂ 450 ಚಾನೆಲ್‌ಗಳಿಗೆ ವಿತರಿಸಿದೆ. ಏಷ್ಯಾ ಫೆಸಿಪಿಕ್‌ ರಾಷ್ಟ್ರಗಳಿಗೆ ಡಿಡಿ ಹಾಗೂ ದೂರದರ್ಶನ ದೃಶ್ಯಗಳನ್ನು ನೀಡಿದೆ.

ರಾಮಮಂದಿರವಾಯ್ತು, ಪ್ರಧಾನಿ ಮೋದಿ ಮುಂದಿನ ಟಾರ್ಗೆಟ್ ಮಥುರಾ, ಕಾಶಿನಾ?

ಯೂಟ್ಯೂಬ್‌ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಾಂತರ ಮಂದಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದು, ಅಮೆರಿಕ, ಬ್ರಿಟನ್‌, ಇಟಲಿ, ನೆದರ್‌ಲೆಂಡ್‌, ಜಪಾನ್‌, ಕೆನಡಾ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಯುಎಇ, ಸೌದಿ ಅರೇಬಿಯಾ, ಒಮಾನ್‌, ಕುವೈಟ್‌, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಇಂಡೋನೇಷ್ಯಾ, ಥಾಯ್ಲೆಂಡ್‌, ಪಿಲಿಪ್ಪೈನ್ಸ್‌, ಸಿಂಗಾಪುರ, ಶ್ರೀಲಂಕಾ ಹಾಗೂ ಮಾರೀಷಸ್‌ನಲ್ಲಿ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ದೂರದರ್ಶನ ಮಾಹಿತಿ ನೀಡಿದೆ.
 

Latest Videos
Follow Us:
Download App:
  • android
  • ios