ಅವಳಿಗಳ ಬಗ್ಗೆ ಹಲವು ವಿಚಿತ್ರ ನಂಬಿಕೆ, ಊಹಾಪೋಹಾಗಳಿವೆ. ಅವರಿಗೆ ಒಮ್ಮೆಲೇ ಎಲ್ಲವೂ ಆಗುತ್ತದೆ. ಒಬ್ಬರ ಮೇಲೆಯೇ ಪ್ರೀತಿಯಾಗುತ್ತದೆ. ಒಮ್ಮೆಗೆ ಹಸಿವಾಗುತ್ತದೆ. ಒಮ್ಮೆಗೆ ಏನೇನೋ ಆಗುತ್ತೆ ಅಂತೆಲ್ಲಾ ಹೇಳುವುದನ್ನ ಕೇಳಿದ್ದೇವೆ. ಅದೇನೆ ಇರಲಿ ಈಗ ಅವಳಿ ಜೋಡಿಯೊಂದು ಮತ್ತೆ ಸುದ್ದಿಗೆ ಗ್ರಾಸವಾಗಿದೆ.
ಅವಳಿಗಳ ಬಗ್ಗೆ ಹಲವು ವಿಚಿತ್ರ ನಂಬಿಕೆ, ಊಹಾಪೋಹಾಗಳಿವೆ. ಅವರಿಗೆ ಒಮ್ಮೆಲೇ ಎಲ್ಲವೂ ಆಗುತ್ತದೆ. ಒಬ್ಬರ ಮೇಲೆಯೇ ಪ್ರೀತಿಯಾಗುತ್ತದೆ. ಒಮ್ಮೆಗೆ ಹಸಿವಾಗುತ್ತದೆ. ಒಮ್ಮೆಗೆ ಏನೇನೋ ಆಗುತ್ತೆ ಅಂತೆಲ್ಲಾ ಹೇಳುವುದನ್ನ ಕೇಳಿದ್ದೇವೆ. ಅದೇನೆ ಇರಲಿ ಈಗ ಅವಳಿ ಜೋಡಿಯೊಂದು ಮತ್ತೆ ಸುದ್ದಿಗೆ ಗ್ರಾಸವಾಗಿದೆ. ಆಸ್ಟ್ರೇಲಿಯಾದ ಅವಳಿಗಳಾಗಿರು ಪರ್ಥ್‌ನ ಅನ್ನಾ ಮತ್ತು ಲೂಸಿ ಡಿಸಿಂಕ್ ಅವಳಿ ಸಹೋದರಿಯರು. ಇವರಿಬ್ಬರ ರುಚಿ ಆಯ್ಕೆ ಅಭಿರುಚಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಅವಳಿಗಳ ಬಗ್ಗೆ ಕುತೂಹಲ ಹೆಚ್ಚಿಸುವುದರ ಜೊತೆ ಚರ್ಚಿಸುವಂತೆ ಮಾಡಿದೆ.
ಈ ಹಿಂದೆ ಈ ಅವಳಿ ಸಹೋದರಿಯರಿಬ್ಬರೂ ಬೆನೆ ಬೆರ್ನೆ ಎಂಬ ಓರ್ವನನ್ನೇ ಪ್ರೀತಿಸುತ್ತಿದ್ದರು. ಎರಡೂ ವರ್ಷಗಳ ನಂತರ ಅವನನ್ನೇ ಇಬ್ಬರೂ ಮದುವೆಯಾಗುವುದು ಎಂಬುದು ಈ ಸಹೋದರಿಯರ ಚಿಂತನೆಯಾಗಿತ್ತು. ಅನ್ನಾ ಮತ್ತು ಲೂಸಿ ಡಿಂಕೆ ಇತ್ತೀಚೆಗಷ್ಟೇ ತಮ್ಮ 36ನೇ ವಸಂತಕ್ಕೆ ಕಾಲಿರಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಬಾಯ್‌ಫ್ರೆಂಡ್ ಬೆನೆ ಬೆರ್ನೆ ಜೊತೆ ಇವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಮಾಮೂಲಿ ಎಲ್ಲಾ ಟ್ವಿನ್ಸ್‌ಗಳಂತೆ ಇವರು ಈ ವೇಳೆ ಒಂದೇ ರೀತಿಯ ಉಡುಪನ್ನು ಧರಿಸಿದ್ದರು.
ಒಟ್ಟಿಗೆ ಹುಟ್ಟಿ, ಒಟ್ಟಿಗೆ ಬೆಳೆದ ಅವಳಿಗಳು 24ನೇ ಹುಟ್ಟುಹಬ್ಬದಂದೇ ದೂರವಾದರು!
ಜೊತೆಗೆ ಬಾಯ್‌ಫ್ರೆಂಡ್‌ನಿಂದ ಅವಳಿ ಮಕ್ಕಳನ್ನು ಪಡೆಯಲು ಈ ಸಹೋದರಿಯರು ಬಯಸಿದ್ದರು. ಸಾಮಾಜಿಕ ಮಾಧ್ಯಮಗಳ ಮುಂದೆ ಈ ವಿಚಾರ ಹಂಚಿಕೊಂಡು ಈ ಜೋಡಿ ಅಂದೇ ಭಾರಿ ವೈರಲ್ ಆಗಿದ್ದರು. ಆದರೆ ಈ ಅವಳಿಗಳಿಗೆ ಈಗ ನಿರಾಸೆ ಕಾದಿದೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಬಹುಪತ್ನಿತ್ವ ಜಾರಿಯಲ್ಲಿಲ್ಲ. ಕೆಲ ವರದಿಗಳ ಪ್ರಕಾರ ಬೆನ್ ಕಳೆದ ವರ್ಷವೇ ಈ ಸಹೋದರಿಯರಿಗೆ ವಿವಾಹದ ಪ್ರಸ್ತಾಪವಿಟ್ಟಿದ್ದರು ಎನ್ನಲಾಗಿದೆ. ಆದರೆ ಬಹುಪತ್ನಿತ್ವ ಕಾನೂನು ಬಾಹಿರವಾಗಿರುವುದರಿಂದ ಮದುವೆ ನಡೆಯಲಿಲ್ಲ ಎಂದು ತಿಳಿದು ಬಂದಿದೆ.
ಈ ನಡುವೆ ಈ ಸಹೋದರಿಯರನ್ನು ಟಿವಿ ಚಾನೆಲ್ ಒಂದು ಎಕ್ಸ್ಟ್ರೀಮ್ ಸಿಸ್ಟರ್ ಎಂಬ ತನ್ನ ಕಾರ್ಯಕ್ರಮಕ್ಕೆ ಕರೆಸಿದ್ದು, ಈ ವೇಳೆ ಈ ಅವಳಿ ಸಹೋದರಿಯರು ಹಲವು ವಿಚಾರಗಳನ್ನು ಟಿವಿ ಮುಂದೆ ಹಂಚಿಕೊಂಡಿದ್ದಾರೆ. ತಮಗೆ ತಮ್ಮ ಗೆಳೆಯ ಬೆರ್ನೆಯಿಂದ ಅವಳಿ ಮಕ್ಕಳನ್ನು ಪಡೆಯುವ ಆಸೆ ಇದೆ. ಈ ಕಾರಣಕ್ಕೆ ನಾವು ಐವಿಎಫ್ ತಂತ್ರಜ್ಞಾನದ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ಇವರು ಟಿವಿ ಡಾಕ್ಯುಮೆಂಟರಿಯಲ್ಲಿ ಗರ್ಭಧಾರಣೆಯ ಪರೀಕ್ಷೆಗೆ ಒಳಗಾಗಿದ್ದು, ಫಲಿತಾಂಶ ಮಾತ್ರ ನಿರಾಶೆ ಕಾದಿತ್ತು. ಆದರೆ ತಮ್ಮ ಮುಂದಿನ ಹುಟ್ಟುಹಬ್ಬದ ಸಮಯದ ವೇಳೆಗೆ ಅವಳಿ ಮಕ್ಕಳನ್ನು ಪಡೆದೇ ತಿರುತ್ತೇವೆ ಎಂದಿದ್ದಾರೆ ಈ ಬೆಡಗಿಯರು.
ತಾಯಿ ಹೊಟ್ಟೆಯೊಳಗೇ ಹೊಡೆದಾಡಿಕೊಂಡ ಅವಳಿ ಮಕ್ಕಳು: ವಿಡಿಯೋ ವೈರಲ್
ಕೆಲ ದಿನಗಳ ಹಿಂದಷ್ಟೇ ಅವಳಿಗಳಲ್ಲಿ ಮೊದಲು ಹುಟ್ಟುವ ಮಗು ವಾಸ್ತವವಾಗಿ ಸಣ್ಣವ ಅಥವಾ ಸಣ್ಣವಳಾಗಿರುತ್ತಾಳೆ. ನಂತರ ಹುಟ್ಟುವ ಮಗು ದೊಡ್ಡವ ಅಥವಾ ದೊಡ್ಡವಳಾಗಿರುತ್ತಾಳೆ. ದೊಡ್ಡ ಮಗು ಸಣ್ಣ ಮಗುವನ್ನು ಗರ್ಭದಿಂದ ಮೊದಲು ಹೊರಗೆ ದೂಡುವುದರಿಂದ ಸಣ್ಣ ಮಗು ಮೊದಲು ಬರುತ್ತದೆ. ಆದರೆ ಮೊದಲು ಭೂಮಿಗೆ ಬಂದವನನ್ನು ದೊಡ್ಡವ ಏನುತ್ತಾರೆ ವಾಸ್ತವವಾಗಿ ನಂತರ ಬಂದ ಮಗುವೇ ದೊಡ್ಡ ಮಗು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ವಿವರಿಸಲಾಗಿತ್ತು. ಅದು ನಿಜವೋ ತಿಳಿಯದು ಅದಕ್ಕೆ ಅನೇಕರು ಹಾಗಾದರೆ ಸಿಸೇರಿಯನ್ ಮಾಡಿದಾ ಪ್ರಕರಣಗಳಲ್ಲಿ ದೊಡ್ಡವರು ಯಾರು ಎಂಬ ಪ್ರಶ್ನೆಯನ್ನು ನೋಡುಗರು ಕೇಳಿದ್ದರು. ಜೊತೆಗೆ ಬಹುತೇಕರು ಇದು ನಿಜ ವಿಚಾರ ಎಂದೂ ಕಾಮೆಂಟ್ ಮಾಡಿದ್ದರು. ಆದರೆ ಇದನ್ನು ಅವಳಿಗಳು ಒಪ್ಪಲು ಸಿದ್ಧರಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು.