ಕ್ಯಾನ್‌ಬೆರಾ[ಮಾ.07]: ತೀರಾ ಅನಿವಾರ್ಯವಾದರೆ ಮನೆಯಲ್ಲಿರುವ ಪತ್ರಿಕೆಯನ್ನು ಟಾಯ್ಲೆಟ್‌ ಪೇಪರ್‌ ಆಗಿ ಬಳಸಿದರಾಯಿತು ಎಂದು ತಮಾಷೆ ಮಾಡುವುದನ್ನು ಕೇಳಿದ್ದೇವೆ. ಆದರೆ, ಆಸ್ಪ್ರೇಲಿಯಾದ ಪತ್ರಿಕೆಯೊಂದು ಇದನ್ನು ಕಾರ್ಯರೂಪಕ್ಕೆ ತಂದಿದೆ.

ಆಸ್ಪ್ರೇಲಿಯಾದಲ್ಲಿ ಕೊರೋನಾ ವೈರಸ್‌ ಭೀತಿಯಿಂದ ಜನರು ಟಾಯ್ಲೆಟ್‌ ಪೇಪರ್‌ಗಳನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರಂತೆ. ಇದರಿಂದ ಅಂಗಡಿಯಲ್ಲಿ ಟಾಯ್ಲೆಟ್‌ ಪೇಪರ್‌ಗಳ ತೀವ್ರ ಕೊರತೆ ಎದುರಾಗಿದೆಯಂತೆ. ಹೀಗಾಗಿ ಟಿ.ಎನ್‌. ನ್ಯೂಸ್‌ ಎಂಬ ಪತ್ರಿಕೆ ಟಾಯ್ಲೆಟ್‌ ಪೇಪರ್‌ ಆಗಿ ಬಳಸಿಕೊಳ್ಳುವುದಕ್ಕೆ ಗುರುವಾರ 8 ಹೆಚ್ಚುವರಿ ಪುಟಗಳನ್ನು ಮುದ್ರಿಸಿದೆ.

ಕೊರೋನಾ ವೈರಸ್ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅದರ ಮೇಲೆ ಕಮೋಡ್‌ನ ವಾಟರ್‌ ಮಾರ್ಕ್ ಹಾಕಲಾಗಿದ್ದು, ಕತ್ತರಿಸಿ ಟಾಯೆಟ್‌ ಪೇಪರ್‌ ಆಗಿ ಬಳಸಿಕೊಳ್ಳಬಹುದಾಗಿದೆ. ಮನೆಗೆ ಬಂದ ಪತ್ರಿಕೆಯಲ್ಲಿ ಟಾಯ್ಲೆಟ್‌ ಪೇಪರ್‌ ಇರುವುದನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.