Asianet Suvarna News Asianet Suvarna News

ಲೈಂಗಿಕ ತೃಪ್ತಿಗಾಗಿ ಶಿಶ್ನಕ್ಕೆ ಬ್ಯಾಟರಿ ಹಾಕಿಕೊಂಡ 71ರ ವೃದ್ಧ, ಮುಂದಾಗಿದ್ದೇನು?

battery insertion In Penis ಲೈಂಗಿಕ ತೃಪ್ತಿ ಪಡೆದುಕೊಳ್ಳುವ ಕಾರಣಕ್ಕಾಗಿ ಶಿಶ್ನಕ್ಕೆ ಮೂರು ಪುಟ್ಟ ಬ್ಯಾಟರಿಗಳನ್ನು ಅಳವಡಿಸಿಕೊಂಡಿದ್ದ 71 ವರ್ಷದ ವೃದ್ಧ, ಬಳಿಕ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದ ಘಟನೆ ನಡೆದಿದೆ.

Australian man rushes to emergency after inserts batteries into penis san
Author
First Published Feb 18, 2024, 10:30 PM IST

ನವದೆಹಲಿ (ಫೆ.18): ಹುಣಸೆ ಮುಪ್ಪಾದರೂ ಹುಳಿ ಮುಪ್ಪೇ ಎನ್ನುವ ಪ್ರಖ್ಯಾತ ಗಾದೆ ಕನ್ನಡದಲ್ಲಿದೆ. ಬಹುಶಃ ಈ ಮಾತನ್ನು ಇಲ್ಲಿನ ವೃದ್ಧನ ವಿಚಾರದಲ್ಲಿ ಖಂಡಿತವಾಗಿಯೂ ಹೇಳಬಹುದಾಗಿದೆ. ಲೈಂಗಿಕ ತೃಪ್ತಿ ಪಡೆದುಕೊಳ್ಳುವ ಸಲುವಾಗಿ ಶಿಶ್ನದಲ್ಲಿ ಮೂರು ಸಣ್ಣ ಪುಟ್ಟ ಬ್ಯಾಟರಿಗಳನ್ನು ಅಳವಡಿಸಿಕೊಂಡಿದ್ದ 71 ವರ್ಷದ ವೃದ್ಧನಿಗೆ ವೈದ್ಯರು ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿದ ಬೆನ್ನಲ್ಲಿಯೇ ವೈದ್ಯರು 24 ಗಂಟೆಯ ಒಳಗಾಗಿ ಶಸ್ತ್ರಚಿಕಿತ್ಸೆ ನಡೆಯಬೇಕು ಎಂದು ತಿಳಿಸಿದ್ದರು. ಶಸ್ತ್ರಚಿಕಿತ್ಸೆಗೂ ಮುನ್ನ ಬ್ಯಾಟರಿಯನ್ನು ತೆಗೆಯುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಲಾಯಿತಾದರೂ, ಎಲ್ಲವೂ ವಿಫಲಗೊಂಡಿತ್ತು. ಈ ವಿಲಕ್ಷಣ ಪ್ರಕರಣವು ಮಾರ್ಚ್‌ನ 'ಯೂರಾಲಜಿ ಕೇಸ್ ರಿಪೋರ್ಟ್ಸ್' ನಲ್ಲಿ ಅಧ್ಯಯನವಾಗಿ ಕಾಣಿಸಿಕೊಂಡಿದೆ.  ಮೂತ್ರಶಾಸ್ತ್ರ ಜರ್ನಲ್ ಬಿಡುಗಡೆ ಮಾಡಿದ ಸಾಕಷ್ಟು ಘಟನೆಗಳ ವಿವರಣೆಯಲ್ಲಿ ಈ ಕೇಸ್‌ ದಾಖಲಾಗಿದೆ.

ಜರ್ನಲ್‌ನಲ್ಲಿನ ವರದಿಯ ಪ್ರಕಾರ, 13.5 ಮಿಮೀ ಅಗಲ ಮತ್ತು 3.2 ಮಿಮೀ ಎತ್ತರದ ಬ್ಯಾಟರಿಗಳನ್ನು ತೆಗೆಯುವ ನಿಟ್ಟಿನಲ್ಲಿ ವ್ಯಕ್ತಿಗೆ ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಆರೈಕೆ ಬೇಕಾಗಿತ್ತು ಎಂದು ತಿಳಿಸಲಾಗಿದೆ. ಈ ಹಿಂದೆಯೂ ಆತ ಲೈಂಗಿಕ ತೃಪ್ತಿ ಪಡೆಯುವ ನಿಟ್ಟಿನಲ್ಲಿ ತಮ್ಮ ಮೂತ್ರನಾಳಕ್ಕೆ ಬೇರೆ ರೀತಿಯ ವಸ್ತುಗಳನ್ನು ಸೇರಿಸಿಕೊಳ್ಳುತ್ತಿದ್ದ. ಯಾವ ಬಾರಿಯೂ ಈ ರೀತಿಯ ಸಮಸ್ಯೆ ಆಗಿರಲಿಲ್ಲ. ಆದರೆ ಈ ಬಾರಿ ಬ್ಯಾಟರಿಗಳು 'ಮೂತ್ರನಾಳದೊಳಗೆ ಹೆಚ್ಚು ಸಮೀಪದಲ್ಲಿ ಸೇರಿಕೊಂಡಿದ್ದವು.  ಈ ಕಾರಣದಿಂದಾಗಿ ಅವುಗಳನ್ನು ತೆಗೆದುಹಾಕಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಬಳಿಕ, ವೈದ್ಯರು ತ್ವರಿತವಾಗಿ ಬ್ಯಾಟರಿಗಳನ್ನು ತೆಗೆದುಹಾಕಲು ಮುಂದಾಗಿದ್ದರು. ಹಾಗೇನಾದರೂ ಎರಡು ಗಂಟೆಯ ಒಳಗಾಗಿ ಇದನ್ನು ತೆಗೆಯಲು ಸಾಧ್ಯವಾಗದೇ ಇದ್ದರೆ ನೆಕ್ರೋಸಿಸ್ ಅಂದರೆ, ದೇಹದ ಅಂಗಾಂಶಗಳ ಸಾವಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದರು. ಬ್ಯಾಟರಿಗಳನ್ನು ತೆಗೆದುಹಾಕಲು ವೈದ್ಯರು ಫೋರ್ಸ್ಪ್ಸ್  (forceps ) ಬಳಸಬೇಕಾಯಿತು.

ಈ ವ್ಯಕ್ತಿ ಕಳೆದ ಮೂರು ವರ್ಷಗಳಿಂದ ವೃದ್ಧ ನಿಮಿರುವಿಕೆಯ ಸಮಸ್ಯೆಯಿಂದ ಹೋರಾಟ ಮಾಡುತ್ತಿದ್ದ. ಅದಲ್ಲದೆ, ಆತ ಶಾಕ್ ವೇವ್ ಥೆರಪಿಗೆ ಕೂಡ ಒಳಗಾಗಿದ್ದರು ಎಂದು ಜರ್ನಲ್‌ನಲ್ಲಿ ತಿಳಿಸಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಹತ್ತು ದಿನಗಳ ನಂತರ, ಅವರು ಶಿಶ್ನ ಊತ ಮತ್ತು ಮೂತ್ರ ಮಾಡುವ ವೇಳೆ ಸಮಸ್ಯೆ ಆಗುತ್ತಿದೆ ಎನ್ನುವ ಕಾರಣದೊಂದಿಗೆ ಆಸ್ಪತ್ರೆಗೆ ವಾಪಸಾಗಿದ್ದರು. ಈ ಹಂತದಲ್ಲಿ ಅವರ ಶಿಶ್ನದ ಚರ್ಮದ ಛೇದನ ಮಾಡಲಾಗಿತ್ತು. ಆ ಬಳಿಕ ದೊಡ್ಡ ಪ್ರಮಾಣದ ದ್ರವವನ್ನು ಹೊರಹಾಕಲಾಗಿತ್ತು ಎಂದು ಅಧ್ಯಯನ ತಿಳಿಸಿದೆ.

Viral Video: 'ಅವರಿಗೆ ಅವರ ಸ್ಥಳ ನೀಡಿ..' ಪ್ಯಾಲೆಸ್ತೇನ್‌ ಜೊತೆ ಕಾಶ್ಮೀರ ಹೋಲಿಸಿದ ಪ್ರಕಾಶ್‌ ರಾಜ್‌!

ಆಗಿರುವ ಗಾಯದ ಗಂಭೀರತೆನ್ನು ಗಮನಿಸಿದರೆ, ಶಿಶ್ನ ಮೂತ್ರನಾಳದ ಪುನರ್ನಿರ್ಮಾಣಕ್ಕೆ 3-ಹಂತದ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಸದ್ಯದ ಮಟ್ಟಿಗೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಲಾಗಿದೆ.

'ನಿಮ್ಮ ಆಶೀರ್ವಾದ ಇರಲಿ..' ತಂದೆ-ತಾಯಿ ಆಗುತ್ತಿರುವ ಖುಷಿ ಹಂಚಿಕೊಂಡ ಬಾಲಿವುಡ್‌ ಸ್ಟಾರ್‌!

Follow Us:
Download App:
  • android
  • ios