ನವ​ದೆ​ಹ​ಲಿ(ಮೇ.27): ಈ ವರ್ಷದ ಮೊದಲ ಚಂದ್ರಗ್ರಹಣ ಹಾಗೂ ಸೂಪರ್‌ ಮೂನ್‌, ರೆಡ್‌ ಬ್ಲಡ್‌ ಮೂನ್‌ ವಿದ್ಯ​ಮಾ​ನವನ್ನು ವಿಶ್ವ​ದೆ​ಲ್ಲೆ​ಡೆಯ ಜನರು ಕಣ್ತುಂಬಿ​ಕೊಂಡರು. ಭಾರ​ತ​ದಲ್ಲಿ ಮಧ್ಯಾಹ್ನ 2.17 ನಿಮಿ​ಷಕ್ಕೆ ಆರಂಭ​ವಾದ ಗ್ರಹಣ ಸಂಜೆ 7.19ಕ್ಕೆ ಕೊನೆ​ಗೊಂಡಿತು.

ಈಶಾನ್ಯ ರಾಜ್ಯ​ಗ​ಳ ಕೆಲವು ಕಡೆ​ಗ​ಳಲ್ಲಿ ಗ್ರಹಣ ಗೋಚ​ರಿಸಿತು. ಬುದ್ಧ ​ಪೂ​ರ್ಣಿ​ಮೆಯಂದೇ ಸೂಪರ್‌ ಮೂನ್‌ ವಿದ್ಯ​ಮಾನ ಸಂಭ​ವಿ​ಸಿ​ರು​ವು​ದು ವಿಶೇಷ. ಆದರೆ, ಕರ್ನಾ​ಟಕ ಸೇರಿ​ದಂತೆ ಭಾರ​ತದ ಬಹು​ತೇಕ ಕಡೆ ಈ ವಿದ್ಯ​ಮಾನ ಗೋಚ​ರಿ​ಸ​ಲಿಲ್ಲ. ಏಷ್ಯಾದ ಪೂರ್ವ ಕರಾವಳಿ, ಪೆಸಿಫಿಕ್‌ ಸಾಗರ, ಆಸ್ಪ್ರೇಲಿಯಾ, ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಈ ಅಪರೂಪದ ವಿದ್ಯಮಾನ ಕಂಡು​ಬಂದಿತು.

ಚಂದ್ರ ಭೂಮಿಯ ಸಮೀ​ಪದಿಂದ ಹಾದು ಹೋಗುವ ಕಾರ​ಣಕ್ಕೆ ಚಂದ್ರ ಎಂದಿ​ಗಿಂತಲೂ ದೊಡ್ಡ​ದಾಗಿ ಗೋಚ​ರಿ​ಸ​ಲಿದ್ದು, ಸೂಪರ್‌ ಮೂನ್‌ ಎಂದು ಕರೆ​ಯ​ಲಾ​ಗು​ತ್ತದೆ. ಭೂಮಿಯ ಸಂಪೂರ್ಣ ನೆರಳಿನಿಂದ ಚಂದ್ರ ಆವೃತ್ತವಾಗಿ, ಕೆಂಪು ಬಣ್ಣ ಗೋಚರವಾದರೆ ಅದನ್ನು ಬ್ಲಡ್‌ ರೆಡ್‌ ಬ್ಲಡ್‌ ಮೂನ್‌ ಎಂದು ಕರೆಯಲಾಗುತ್ತದೆ. ತೀರಾ ಅಪ​ರೂ​ಪ​ಕ್ಕೊಮ್ಮೆ ಇಂತಹ ವಿದ್ಯ​ಮಾ​ನ​ಗಳು ಬಾನಂಗ​ಳ​ದಲ್ಲಿ ಸಂಭ​ವಿ​ಸು​ತ್ತವೆ. ಕಳೆದ ವರ್ಷವೂ ಬುದ್ಧ​ಪೂ​ರ್ಣಿ​ಮೆ​ಯಂದು ಸೂಪರ್‌ ಮೂನ್‌ ವಿದ್ಯ​ಮಾನ ಸಂಭ​ವಿ​ಸಿತ್ತು.