Asianet Suvarna News Asianet Suvarna News

ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿದ ಜೋ ಬೈಡೆನ್; ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆ

ಬೈಡೆನ್ ಬದಲಾಗಿ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಈ ಮೂಲಕ ಅಧ್ಯಕ್ಷ ಹುದ್ದೆಗೆ ಸ್ಪರ್ಧ ಸಿದ ಎರಡನೇ ಮಹಿಳೆ ಎನ್ನಿಸಿಕೊಳ್ಳಲಿದ್ದಾರೆ

joe Biden quits presidential race Kamala Harris democratic party president candidate mrq
Author
First Published Jul 22, 2024, 7:26 AM IST | Last Updated Jul 22, 2024, 12:46 PM IST

ವಾಷಿಂಗ್ಟನ್: ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್, ಮುಂಬರುವ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿಯುವ ಘೋಷಣೆ ಮಾಡಿದ್ದಾರೆ. ಹೀಗಾಗಿ ಹಾಲಿ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.ಈ ಕುರಿತು ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಬೈಡನ್, 'ಅಮೆರಿಕದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದು ನನ್ನ ಜೀವನದ ಅತಿದೊಡ್ಡ ಗೌರವ. ಇದೇ ಹುದ್ದೆಗೆ ಮತ್ತು ಆಯ್ಕೆ ನನ್ನ ಉದ್ದೇಶವಾಗಿತ್ತಾದರೂ ದೇಶದ ಹಿತದೃಷ್ಟಿಯಿಂದ ಚುನಾವಣಾ ಕಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೇನೆ ಮತ್ತು ನನ್ನ ಗುರಿಯನ್ನು ಕರ್ತವ್ಯ ಅಧ್ಯಕ್ಷೀಯ ಪೂರ್ಣಗೊಳಿಸಲು ಬಳಸಲು ನಿರ್ಧರಿಸಿದ್ದೇನೆ' ಎಂದು ಹೇಳಿದ್ದಾರೆ. ನ.5ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. 

ಕಣದಿಂದ ಹೊರಕ್ಕೆ ಏಕೆ? 

ಜೋ ಬೈಡೆನ್‌ ಕಳೆದ ಒಂದೆರೆಡು ವರ್ಷದಿಂದ ವಯೋಸಹಜ ಸಮಸ್ಯೆಗಳಿಗೆ ತುತ್ತಾಗಿದ್ದಾರು. ಇದರಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಮುಜುಗರಕ್ಕೆ ಉಂಟಾಗಿದ್ದರು. ಅಕ್ಕಪಕ್ಕದಲ್ಲಿದ್ದವರು ಮತ್ತು ಎದುರಿಗೆ ಇದ್ದವರನ್ನು ಕೂಡಾ ಸರಿಯಾಗಿ ಗುರುತಿಸಲಾಗದ ಸ್ಥಿತಿಗೆ ತಲುಪಿದ್ದಾರೆ. ಅದರಲ್ಲೂ ಇತ್ತೀಚೆಗೆ ರಿಪಬ್ಲಿಕನ್ ಪಕ್ಷ ಎದುರಾಳಿ ಟ್ರಂಪ್ ಜೊತೆಗೆ ನಡೆದ ಟಿವಿ ಚರ್ಚೆ ವೇಳೆ ಬೈಡೆನ್ ವರ್ತನೆ, ನಡವಳಿಕೆ ಭಾರೀ ಟೀಕೆಗೆ ಗುರಿಯಾಗಿತ್ತು. ಜೊತೆಗೆ ಬೈಡನ್ ಸ್ಪರ್ಧಾಕಣದಿಂದ ಹಿಂದಕ್ಕೆ ಸರಿಯಬೇಕೆಂಬ ದೊಡ್ಡ ಒತ್ತಾಯಕ್ಕೆ ಕಾರಣವಾಗಿತ್ತು.


 
ಟ್ರಂಪ್‌ ಗೆ ಕಮಲಾ ಎದುರಾಳಿ? 

ಬೈಡೆನ್ ಬದಲಾಗಿ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಈ ಮೂಲಕ ಅಧ್ಯಕ್ಷ ಹುದ್ದೆಗೆ ಸ್ಪರ್ಧ ಸಿದ ಎರಡನೇ ಮಹಿಳೆ ಎನ್ನಿಸಿಕೊಳ್ಳಲಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಆಯ್ಕೆಯಾದರೆ ಮೊದಲ ಮಹಿಳೆ ಮತ್ತು ಅಮೆರಿಕದ ಅಧ್ಯಕ್ಷೆಯಾದ ಭಾರತ ಮೂಲದ ಮಹಿಳೆ ಎಂಬ ಗೌರವ ಒಲಿಯಲಿದೆ. 

ಐದು ಬಾರಿ ಪ್ರಫೋಸ್ ಮಾಡಿ ಕೊನೆಗೂ ಪ್ರೀತಿ ಗೆದ್ದ ಅಮೆರಿಕಾ ಅಧ್ಯಕ್ಷ

ಕಮಲಾ ಹ್ಯಾರಿಸ್‌ನ್ನು ಸೋಲಿಸೋದು ಸುಲಭ ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೆಮಾಕ್ರೆಟ್ ಪಕ್ಷದ ಜೋ ಬೈಡೆನ್ ಅವರಿಗಿಂತಲು ಉಪಾಧ್ಯಕ್ಷೆ ಕಮಲಾ ಪ್ಯಾರಿಪ್‌ರನ್ನು ಸೋಲಿಸುವುದು ಹೆಚ್ಚು ಸುಲಭವಾಗಿದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿನ ಹೇಳಿಕೊಂಡಿದ್ದಾರೆ. 

ಕಮಲಾ ಹ್ಯಾರಿಸ್ ಅರ್ಹಳು 

ಅಮೆರಿಕ ಅಧ್ಯಕ್ಷೆಯಾಗಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅರ್ಹಳು ಎಂದು ಹಾಲಿ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ತಮ್ಮ ಬದಲು ಕಮಲಾ ಅಭ್ಯರ್ಥಿ ಆಗಬೇಕು ಎಂಬ ಬೇಡಿಕೆ ಬೆನ್ನಲ್ಲೇ ಅವರ ಈ ಹೇಳಿಕೆ ಬಂದೆ. ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸಿ ದೇಶವನ್ನು ಮುನ್ನಡೆಸಲು ಅರ್ಹಳು ಎಂಬುದನ್ನು ಕಂಡುಕೊಂಡೇ ಕಮಲಾ ಹ್ಯಾರಿಸ್‌ ಅವರನ್ನು ಉಪಾಧ್ಯಕ್ಷೆಯಾಗಿ ಆರಿಸಿಕೊಂಡಿದ್ದೆ ಎಂದು ಶುಕ್ರವಾರ ಜೋ ಬೈಡನ್ ಹೇಳಿಕೆ ಬಿಡುಗಡೆ ಮಾಡಿದ್ದರು.

ಹತ್ಯೆ ಯತ್ನದಿಂದ ಚುನಾವಣೆಯಲ್ಲಿ ಟ್ರಂಪ್‌ ಪರ ಅನುಕಂಪದ ಅಲೆ? ಮಸ್ಕ್‌, ಬೆಜೋಸ್‌ ಬೆಂಬಲ

Latest Videos
Follow Us:
Download App:
  • android
  • ios