Asianet Suvarna News Asianet Suvarna News

ಅಫ್ಘಾನಿಸ್ತಾನದ ಅಧಿಕಾರ ಬಿಟ್ಟುಕೊಟ್ಟ ಘನಿ, ಅಹ್ಮದ್ ಜಲಾಲಿ ನೂತನ ಮುಖ್ಯಸ್ಥ!

* ಅಪ್ಘಾನಿಸ್ತಾನದಲ್ಲಿ ತಾಲಿಬಾನಿಯರ ಹಿಡಿತ

* ಕಾಬೂಲ್‌ಗೂ ತಾಲಿಬಾನಿಯರ ಎಂಟ್ರಿ

* ಅಧಿಕಾರ ಹಸ್ತಾಂತರಿಸಿದ ಅಧ್ಯಕ್ಷ ಘನಿ, ಅಹ್ಮದ್ ಜಲಾಲಿ ನೂತನ ಮುಖ್ಯಸ್ಥ

Ashraf Ghani to step down Ali Ahmad Jalali will serve as the head of the new interim Afghanistan govt pod
Author
Bangalore, First Published Aug 15, 2021, 5:22 PM IST

ಕಾಬೂಲ್(ಆ.15): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ಸಂಪೂರ್ಣ ಹಿಡಿತ ಸಾಧಿಸಿದೆ. ಮೂಲಗಳ ಪ್ರಕಾರ, ಭಾನುವಾರದಂದು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೇಮಕ ಮಾಡುವುದರೊಂದಿಗೆ ತಾಲಿಬಾನ್‌ಗೆ ಅಧಿಕಾರವನ್ನು ವರ್ಗಾಯಿಸಲು ಅಫ್ಘಾನ್ ಅಧ್ಯಕ್ಷೀಯ ಅರಮನೆ ಎಆರ್‌ಜಿಯಲ್ಲಿ ಮಾತುಕತೆ ನಡೆಯುತ್ತಿದೆ. ರಾಷ್ಟ್ರೀಯ ಸಮನ್ವಯಕ್ಕಾಗಿ ಉನ್ನತ ಮಂಡಳಿಯ ಮುಖ್ಯಸ್ಥ ಅಬ್ದುಲ್ಲಾ ಇದರ ಮಧ್ಯಸ್ಥಿಕೆ ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಮಧ್ಯಂತರ ಸರ್ಕಾರದ ನೂತನ ಮುಖ್ಯಸ್ಥರಾಗಿ ಅಲಿ ಅಹ್ಮದ್ ಜಲಾಲಿಯನ್ನು ನೇಮಿಸಲಾಗುತ್ತದೆ ಎಂದು ಖಮಾ ಪ್ರೆಸ್‌ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ. ಈ ಮಧ್ಯೆ ಆಂತರಿಕ ಮತ್ತು ವಿದೇಶಾಂಗ ವ್ಯವಹಾರಗಳ ಹಂಗಾಮಿ ಮಂತ್ರಿ ಅಬ್ದುಲ್ ಸತ್ತಾರ್ ಮಿರ್ಜಾಕ್ವಾಲ್ ವಿಭಿನ್ನ ವಿಡಿಯೋಗಳಲ್ಲಿ ಕಾಬೂಲ್‌ ಜನರನ್ನು ಸುರಕ್ಷಿತವಾಗಿರಿಸುತ್ತೇವೆ, ಅಂತಾರಾಷ್ಟ್ರೀಯ ಮಿತ್ರರಾಷ್ಟ್ರಗಳೊಂದಿಗೆ ಸೇರಿ ನಗವನ್ನು ರಕ್ಷಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ಇನ್ನು ಈಗಾಗಲೇ ಕಾಬೂಲ್ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಅಧಿಕಾರ ವರ್ಗಾವಣೆ ಶಾಂತಿಯುತವಾಗಿ ನಡೆಯುತ್ತದೆ ಎಂದು ಮಿರ್ಜಕ್ವಾಲ್ ಹೇಳಿದ್ದಾರೆ. ಅಲ್ಲದೇ ಭದ್ರತಾ ಪಡೆಗಳು ನಗರದ ಭದ್ರತೆಯನ್ನು ಖಾತ್ರಿಪಡಿಸುತ್ತವೆ ಎಂದೂ ಕಾಬೂಲ್ ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.

"

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಪ್ರವೆಶಿಸಿದ ತಾಲಿಬಾನಿಯರು!

ಇದಕ್ಕೂ ಮುನ್ನ ಭಾನುವಾರ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಪ್ರವೇಶಿಸಿದರು, ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ಹೇಳುವಂತೆ, ಅಮೆರಿಕ ತನ್ನ ರಾಯಭಾರ ಕಚೇರಿಯನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಿದೆ.  ತಾಲಿಬಾನಿಯರು "ಎಲ್ಲ ಕಡೆಯಿಂದ" ಬರುತ್ತಿದ್ದಾರೆ ಎಂದು ಹೇಳಿದರು ಹಿರಿಯ ಅಧಿಕಾರಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಅಫ್ಘಾನ್ ಅಧ್ಯಕ್ಷರ ನಿವಾಸದ ಖಾತೆಯಿಂದ ಟ್ವೀಟ್ ಮಾಡಿದ್ದು, ಕಾಬೂಲ್ ಸುತ್ತಮುತ್ತ ಹಲವು ಸ್ಥಳಗಳಲ್ಲಿ ಗುಂಡಿನ ಸದ್ದು ಕೇಳಿಬಂದಿದೆ, ಆದರೆ ಭದ್ರತಾ ಪಡೆಗಳು, ಅಂತಾರಾಷ್ಟ್ರೀಯ ಮಿತ್ರರಾಷ್ಟ್ರಗಳೊಂದಿಗೆ ನಗರದ ನಿಯಂತ್ರಣವನ್ನು ಪಡೆದುಕೊಂಡಿವೆ ಎಂದು ಬರೆಯಲಾಗಿದೆ. .

Follow Us:
Download App:
  • android
  • ios