* ಆಫ್ಘ​ನ್‌: ಇನ್ನು ಪ್ರತಿ​ಭ​ಟ​ನೆಗೆ ತಾಲಿ​ಬಾನ್‌ ಅನು​ಮತಿ ಕಡ್ಡಾ​ಯ!* ಪ್ರತಿಭಟನೆ ಉದ್ದೇಶದ ಬಗ್ಗೆಯೂ ಬಹಿರಂಗಪಡಿಸಬೇಕು* ಪ್ರತಿಭಟನೆ ವೇಳೆ ಕೂಗುವ ಘೋಷಣೆಗಳನ್ನೂ ಸಲ್ಲಿಸಬೇಕು* ಆಫ್ಘನ್‌ ಪ್ರಜೆಗಳಿಗೆ ತಾಲಿಬಾನ್‌ ಭಯೋತ್ಪಾದಕರ ಕಟ್ಟಪ್ಪಣೆ

ಕಾಬೂಲ್‌(ಸೆ.11): ತಮ್ಮ ಆಡಳಿತದ ವಿರುದ್ಧದ ಪ್ರತಿರೋಧವನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲ್ಲ ಎಂದು ಇತ್ತೀಚೆಗಷ್ಟೇ ಘೋಷಣೆ ಮಾಡಿದ್ದ ತಾಲಿಬಾನ್‌ ಉಗ್ರರು, ದೇಶದಲ್ಲಿ ನಡೆಸಲು ಉದ್ದೇಶಿಸುವ ಪ್ರತಿಭಟನೆಗಳ ಮೇಲೆ ಹಲವು ನಿರ್ಬಂಧಗಳನ್ನು ಜಾರಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿಭಟನೆ ಕೈಗೊಳ್ಳುವ 24 ತಾಸು ಮುನ್ನ ಇದಕ್ಕೆ ನ್ಯಾಯಾಂಗ ಇಲಾಖೆಯಿಂದ ಅನುಮತಿ ಪಡೆಯಲೇಬೇಕು. ಜೊತೆಗೆ ಪ್ರತಿಭಟನೆ ನಡೆಯುವ ಸ್ಥಳ, ಉದ್ದೇಶ, ಸಮಯ, ಘೋಷಣೆಗಳು ಸೇರಿದಂತೆ ಪ್ರತಿಭಟನೆಗೆ ಸಂಬಂಧಿಸಿದ ಇನ್ನಿತರ ಮಾಹಿತಿಗಳನ್ನು ಸರ್ಕಾರದ ಜತೆ ಹಂಚಿಕೊಳ್ಳಬೇಕು ಎಂದು ತಾಲಿಬಾನ್‌ ಹೇಳಿದೆ.

ಪ್ರತಿಭಟನೆ ಆಯೋಜನೆಯಾಗುವ 24 ಗಂಟೆಗಳ ಮುಂಚಿತವಾಗಿ ಪ್ರತಿಭಟನೆ ಕುರಿತಾದ ವಿವರಣೆಯನ್ನು ಭದ್ರತಾ ಸಂಸ್ಥೆಗಳ ಜತೆಗೂ ಹಂಚಿಕೊಳ್ಳಬೇಕು ಎಂದು ತಿಳಿ​ಸ​ಲಾ​ಗಿ​ದೆ.

ತಾಲಿಬಾನ್‌ ಸರ್ಕಾರ ರಚನೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ತಾಲಿಬಾನಿಗಳ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಜನ ಸಾಮಾನ್ಯರಿಂದ ಪ್ರತಿಭಟನೆಗಳು ಹೆಚ್ಚುತ್ತಿವೆ. ಈ ಪ್ರತಿಭಟನೆಗಳನ್ನು ಹತ್ತಿಕ್ಕುವ ದುರುದ್ದೇಶದಿಂದ ತಾಲಿಬಾನ್‌ ಉಗ್ರ ಸಂಘಟನೆ ಈ ನಿರ್ಧಾರ ಕೈಗೊಂಡಿದೆ.