ಸೋಲ್‌[ಫೆ.03]: ಕೊರೋನಾ ವೈರಸ್‌ ವಿಶ್ವದೆಲ್ಲೆಡೆ ವ್ಯಾಪಿಸಿರುವುದು ಚೀನಾ ವಿರೋಧಿ ಭಾವನೆ ಹೆಚ್ಚಲು ಕಾರಣವಾಗಿದೆ. ಹೋಟೆಲ್‌, ರೆಸ್ಟೋರೆಂಟ್‌, ಲಾಡ್ಜ್‌ಗಳು ಚೀನಾ ಪ್ರವಾಸಿಗರನ್ನೇ ನಿಷೇಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೇ ಅಲ್ಲ, ಏಷ್ಯಾದ ಉಳಿದ ರಾಷ್ಟ್ರಗಳ ಪ್ರವಾಸಿಗರೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬೆಳವಣಿಯಿಂದಾಗಿ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲಾರಂಭಿಸಿದೆ.

ದಕ್ಷಿಣ ಕೊರಿಯಾ, ಜಪಾನ್‌, ಹಾಂಕಾಂಗ್‌, ವಿಯೆಟ್ನಾಂ ಸೇರಿದಂತೆ ಅನೇಕ ದೇಶಗಳಲ್ಲಿ ರೆಸ್ಟೋರೆಂಟ್‌ಗಳು ಚೀನಾ ಪ್ರವಾಸಿಗರಿಗೆ ಪ್ರವೇಶ ನಿರಾಕರಿಸಿವೆ. ಇಂಡೋನೇಷ್ಯಾದಲ್ಲಿ ಸ್ಥಳೀಯರು, ಹೋಟೆಲ್‌ಗಳಲ್ಲಿ ತಂಗಿರುವ ಚೀನಿಯರನ್ನು ಹೊರದಬ್ಬಿ ಎಂದು ಒತ್ತಾಯಿಸಿ ರಾರ‍ಯಲಿಗಳನ್ನು ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಕೊರೋನಾ ಭೀತಿ ಇಳಿಮುಖ, 28 ಸ್ಯಾಂಪಲ್‌ಗಳ ವರದಿ ನೆಗೆಟಿವ್‌!

ಸಾಮಾಜಿಕ ಜಾಲತಾಣಗಳಲ್ಲಿಯೂ ಚೀನಾ ವಿರೋಧಿ ಭಾವನೆ ಬರುವ ರೀತಿಯಲ್ಲಿ, ನಿಂದನಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸಿ ಟ್ರೋಲ್‌ ಮಾಡಲಾಗುತ್ತಿದೆ. ಚೀನಾ ಪ್ರವಾಸದಲ್ಲಿರುವ ತಮ್ಮ ದೇಶಗಳ ಪ್ರಜೆಗಳಿಗೆ ಈಗಾಗಲೇ ಅನೇಕ ದೇಶಗಳು ವಿಶೇಷ ವಿಮಾನ ವ್ಯವಸ್ಥೆ ಮಾಡಿ ದೇಶಕ್ಕೆ ಕರೆಯಿಸಿಕೊಳ್ಳುತ್ತಿವೆ.

ಪತ್ರಿಕೆಗಳಲ್ಲಿ ಅವಹೇಳನ:

ಫ್ರಾನ್ಸ್‌ ಮತ್ತು ಆಸ್ಪ್ರೇಲಿಯಾಗಳಲ್ಲಿ ಚೀನಿಯರನ್ನು ನಿಂದಿಸುವ ರೀತಿಯಲ್ಲಿ ಸುದ್ದಿ ಪ್ರಕಟಿಸಿದ ಪತ್ರಿಕೆಗಳು ತೀವ್ರ ಟೀಕೆಗೆ ಗುರಿಯಾಗಿವೆ. ಬಳಿಕ ಕ್ಷಮೆ ಕೇಳಿವೆ. ಯುರೋಪ್‌, ಅಮೆರಿಕಗಳಲ್ಲಿ ಚೀನಿಯರು ನಿಂದನೆ ಮಾಡಿರುವ ಪ್ರಕರಣಗಳೂ ದಾಖಲಾಗಿವೆ.

ಕೊರೋನಾ ವೈರಸ್ ಭೀತಿ: ಬೆಂಗಳೂರಿನಲ್ಲಿ ಮಾಸ್ಕ್ ಮಾರಾಟ ಜೋರು!