ವೇಶ್ಯವಾಟಿಕೆ ಅತ್ಯಂತ ಪುರಾತನ ವೃತ್ತಿ. ಆದರೂ ಯಾವ ದೇಶದಲ್ಲಿಯೂ ಈ ವೃತ್ತಿಗೆ ಮಾನ್ಯತೆ ಇಲ್ಲ. ವಿಶ್ವದ ಹಲವು ದೇಶಗಳಲ್ಲಿ ವೈಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.

ಈ ಕೊರೋನಾದಿಂದ ಜನರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ವೇಶ್ಯಾ ವೃತ್ತಿ ಮಾಡುವವರ ಬದುಕು ಇದಕ್ಕೆ ಹೊರತಲ್ಲ. ಈ ವೃತ್ತಿ ಮಾಡುವವರು ಅಮೆರಿಕದಲ್ಲಿ ಆನ್‌ಲೈನ್‌ ಸೆಕ್ಸ್‌ಗೆ ಇಳಿಯುತ್ತಿದ್ದಾರೆ.

ಚಂದ್ರನ ಅಂಗಳದಿಂದ ಚೀನಾ ನೌಕೆ ಭೂಮಿಗೆ ಇವನ್ನು ಹೆಕ್ಕಿ ತಂತು

ನ್ಯೂಯಾರ್ಕ್ ಪ್ರತಿನಿಧಿ ಅಲೆಕ್ಸಾಂಡ್ರಿಯೋ ಒಕಾಸಿಯೋ ಕೋರ್ಟೆಝ್ ವೇಶ್ಯಾವಾಟಿಕೆ ಬೆಂಬಲಿಸಿದ್ದಾರೆ. ಸೆಕ್ಸ್ ವರ್ಕ್ ಈಸ್ ವರ್ಕ್ ಎಂದಿದ್ದಾರೆ ಈಕೆ. ಫೆಡರಲ್ ಸರ್ಕಾರ ಜನರಿಗೆ ನೆರವಾಗಲು ಏನೂ ಮಾಡಿಲ್ಲ. ನಾವು ಪ್ರಚೋದಕ ತಪಾಸಣೆ, ಯುಐ, ಸಣ್ಣ ಬಿಜ್ ಪರಿಹಾರ, ಆಸ್ಪತ್ರೆ ಧನಸಹಾಯ ಇತ್ಯಾದಿಗಳನ್ನು ರವಾನಿಸಬೇಕು ಎಂದು ಅವರು ಹೇಳಿದ್ದಾರೆ.

ವಿಪರ್ಯಾಸವೆಂದರೆ, ಡೆಮಾಕ್ರಟಿಕ್ ಶಾಸಕರು ಕಟ್ಟುನಿಟ್ಟಾದ ಲಾಕ್‌ಡೌನ್ ಕ್ರಮಗಳ ಪ್ರತಿಪಾದಕರಾಗಿದ್ದು, ಇದು ಅಸಂಖ್ಯಾತ ಸಣ್ಣ ಉದ್ಯಮಗಳ ನಾಶಕ್ಕೆ ಕಾರಣವಾಗಿದೆ ಮತ್ತು ಅಮೆಜಾನ್‌ನಂತಹ ಬೆಳೆದ ಮೆಗಾ-ಕಾರ್ಪೊರೇಟ್‌ಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಕೊರೋನಾ ಲಸಿಕೆ ಪಡೆದ ಮಹಿಳೆಗೆ ಅಲರ್ಜಿ: ಆಸ್ಪತ್ರೆಗೆ ದಾಖಲು

ನ್ಯೂಯಾರ್ಕ್ ಪ್ರತಿನಿಧಿ ಅಲೆಕ್ಸಾಂಡ್ರಿಯೋ ವೇಶ್ಯಾ ವೃತ್ತಿಯೂ ಕಾಯಕವೇ ಎಂದು ಹೇಳಿರುವುದು ಸದ್ದು ಮಾಡುತ್ತಿದೆ.  ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯೊಂದನ್ನು ರೀ ಟ್ವೀಟ್ ಮಾಡಿ 'sex work is work' ಎಂದು ಕೋಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ವೇಶ್ಯಾವೃತ್ತಿಯನ್ನು ಕಾಯಕವೆಂದು ಪರಿಗಣಿಸಿದರೆ ಸರಕಾರ ಅದಕ್ಕೆ ಅಗತ್ಯ ತರಬೇತಿ ನೀಡುತ್ತಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಹೆಣ್ಣು ಯಾವತ್ತೂ ಗಂಡು ಬಳಸುವ ವಸ್ತುವಾಗಬಾರದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.