ಕೊರೋನಾ ಮಹಾಮಾರಿಗೆ ಲಸಿಕೆ ಪಡೆದುಕೊಂಡಿದ್ದ ಅಮೆರಿಕಾ ಮಹಿಳೆಗೆ ಇದೀಗ ಆರೋಗ್ಯದಲ್ಲಿ ಸಮಸ್ಯೆ ಎದುರಾಗಿದೆ. 

ನ್ಯೂಯಾರ್ಕ್ (ಡಿ.18): ಫೈಝರ್‌ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ನೀಡಲು ಅಮೆರಿಕ ಆರಂಭಿಸಿದ ಬೆನ್ನಲ್ಲೇ ಲಸಿಕೆಯು ಸೋಂಕಿತರೊಬ್ಬರ ಮೇಲೆ ಅಡ್ಡಪರಿಣಾಮ ಬೀರಿದೆ ಎಂದು ವರದಿಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲಾಸ್ಕಾದ ಮಧ್ಯವಯಸ್ಕ ಮಹಿಳಾ ಆರೋಗ್ಯ ಸಿಬ್ಬಂದಿಯೊಬ್ಬರಿಗೆ ಲಸಿಕೆ ನೀಡಿದಾಗ ಅವರಿಗೆ ಗಂಭೀರ ರೀತಿಯಲ್ಲಿ ಅಲರ್ಜಿ ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಕೊರೋನಾಗೆ 6 ಬಲಿ, 1240 ಹೊಸ ಕೇಸ್ ಪತ್ತೆ ..

 ಅವರನ್ನು ರಾತ್ರೋರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಸಿಕೆ ಪಡೆದ ಮಹಿಳೆಯಲ್ಲಿ ಈ ಹಿಂದೆ ಅಲರ್ಜಿ ಇರಲಿಲ್ಲ ಎಂದೂ ಹೇಳಿದ್ದಾರೆ. 

ಫೈಝರ್‌ ಕಂಪನಿಯ ಲಸಿಕೆ ವಿತರಣೆಯನ್ನು ಬ್ರಿಟನ್‌ನಲ್ಲಿ ವಿಶ್ವದಲ್ಲೇ ಮೊದಲ ಬಾರಿ ಆರಂಭಿಸಿದಾಗ ಅಲ್ಲೂ ಕೆಲವರಲ್ಲೂ ಅಲರ್ಜಿ ಕಾಣಿಸಿಕೊಂಡಿತ್ತು. ಅಲರ್ಜಿ ಇರುವವರು ಲಸಿಕೆ ಪಡೆಯಬಾರದು ಎಂದು ಬ್ರಿಟನ್‌ ಸರ್ಕಾರ ಸೂಚನೆ ನೀಡಿತ್ತು.