ಅಲೌಕಿಕ ತಜ್ಞ ಡ್ಯಾನ್ ರಿವೇರಾ ಸಾವಿನ ನಂತರ ಪ್ರೇತಾತ್ಮ ಇದೆ ಎನ್ನಲಾದ ಅನಾಬೆಲ್ ಪಾವೆ ನಾಪತ್ತೆಯಾಗಿದೆ. ಗೆಟ್ಟಿಸ್ಬರ್ಗ್ ಹೋಟೆಲ್ ರೂಮಿನಲ್ಲಿ ಡ್ಯಾನ್ ಶವ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದಿಲ್ಲ. 

ಗೆಟ್ಟಿಸ್ಬರ್ಗ್: ಅಲೌಕಿಕ ವಿಷಯಗಳ ತಜ್ಞ ಡ್ಯಾನ್ ರಿವೇರಾ ಸಾವಿನ ನಂತರ, ಪ್ರೇತಾತ್ಮ ಇದೆ ಅಂತ ನಂಬಲಾಗಿದ್ದ 'ಅನಾಬೆಲ್' ಪಾವೆ ಹೋಟೆಲ್ ರೂಮಿನಿಂದ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. 54 ವರ್ಷದ ಡ್ಯಾನ್ ರಿವೇರಾ ಜುಲೈ 13 ರಂದು ಗೆಟ್ಟಿಸ್ಬರ್ಗ್‌ನ ಹೋಟೆಲ್ ರೂಮಿನಲ್ಲಿ ಸಾವನ್ನಪ್ಪಿದ್ದರು. 'ಡೆವಿಲ್ಸ್ ಆನ್ ದಿ ರನ್' ಅನ್ನೋ ಪ್ರೇತ ಪ್ರವಾಸ ಮುಗಿಸಿ ಬಂದ ಮೇಲೆ ಅವರ ಶವ ಸಿಕ್ಕಿತ್ತು. ಈ ಪ್ರವಾಸದ ಪ್ರಮುಖ ಆಕರ್ಷಣೆ ಅನಾಬೆಲ್ ಪಾವೆಯಾಗಿತ್ತು.

ಡ್ಯಾನ್ ರಿವೇರಾ ಸಾವಿಗೆ ಕಾರಣ ಇನ್ನೂ ತಿಳಿದಿಲ್ಲ. ಮರಣೋತ್ತರ ಪರೀಕ್ಷೆ ವರದಿ ಎಂಟರಿಂದ ಹತ್ತು ವಾರಗಳಲ್ಲಿ ಬರಬಹುದು. ಆದರೆ ರಿವೇರಾ ಸಾವು ಅನುಮಾನಾಸ್ಪದ ಅಲ್ಲ, ಅವರು ರೂಮಿನಲ್ಲಿ ಒಬ್ಬರೇ ಇದ್ದರು ಅಂತ ಅಧಿಕಾರಿಗಳು ಹೇಳಿದ್ದಾರೆ. ಪ್ರಾಥಮಿಕ ತನಿಖೆಗೆ ಬಂದಾಗ ಪಾವೆ ರೂಮಿನಲ್ಲಿ ಇರಲಿಲ್ಲ ಅಂತ ಆಡಮ್ಸ್ ಕೌಂಟಿ ಕೊರೋನರ್ ಫ್ರಾನ್ಸಿಸ್ ಡ್ಯೂಟ್ರೋ ಹೇಳಿದ್ದಾರೆ.

ಅನಾಬೆಲ್ ಪಾವೆ ಅಂದ್ರೆ ಏನು?

ಅನಾಬೆಲ್ ಪಾವೆಯಲ್ಲಿ ಪ್ರೇತಾತ್ಮ ಎಂದು ನಂಬಲಾಗಿದೆ. 1970ರಿಂದಲೂ ಅನಾಬೆಲ್ ಪಾವೆಗೂ ಅಲೌಕಿಕ ಘಟನೆಗಳಿಗೂ ಸಂಬಂಧ ಇದೆ ಅಂತಾ ನಂಬಲಾಗಿದೆ. ನ್ಯೂ ಇಂಗ್ಲೆಂಡ್ ಸೊಸೈಟಿ ಫಾರ್ ಸೈಕಿಕ್ ರಿಸರ್ಚ್ ವೆಬ್‌ಸೈಟ್ ಪ್ರಕಾರ, 1968ರಲ್ಲಿ ಒಬ್ಬ ನರ್ಸಿಂಗ್ ವಿದ್ಯಾರ್ಥಿನಿಗೆ ಉಡುಗೊರೆಯಾಗಿ ಈ ಅನಾಬೆಲ್ ಪಾವೆ ಬಂದಿತ್ತು.

1970ರಲ್ಲಿ ಕನೆಕ್ಟಿಕಟ್‌ನ ನರ್ಸಿಂಗ್ ವಿದ್ಯಾರ್ಥಿನಿ ಡೋನಾಗೆ ಸಿಕ್ಕ ಮೇಲೆ ಅನಾಬೆಲ್ ಪಾವೆ ಬಗ್ಗೆ ಅನೇಕ ಅಲೌಕಿಕ ಘಟನೆಗಳು ವರದಿಯಾಗಿವೆ. ಪ್ರಸಿದ್ಧ ಅಲೌಕಿಕ ತಜ್ಞರಾದ ಎಡ್ ಮತ್ತು ಲೊರೈನ್ ವಾರನ್ ದಂಪತಿ ಪ್ರಕಾರ, ಪಾವೆ ತಾನಾಗೇ ಕೈ ಎತ್ತುತ್ತಿತ್ತು, ಜನರನ್ನು ಹಿಂಬಾಲಿಸುತ್ತಿತ್ತು. ಜನರನ್ನು ಹೆದರಿಸುವ ರೀತಿಯಲ್ಲಿ ಭಯಾನಕ ವರ್ತನೆ ತೋರಿಸುತ್ತಿತ್ತು. ಒಬ್ಬ ಪೊಲೀಸ್ ಅಧಿಕಾರಿಗೆ ಪಾವೆ ಚುಚ್ಚಿದೆ ಅಂತಾನೇ ಹೇಳಲಾಗುತ್ತದೆ. ಒಬ್ಬ ಪಾದ್ರಿಗೆ ಸಂಬಂಧಿಸಿದ ಕಾರು ಅಪಘಾತಕ್ಕೂ ಅನಾಬೆಲ್ ಪಾವೆಯೇ ಕಾರಣ ಎಂದು ನಂಬಲಾಗಿದೆ.

ಗೊಂಬೆಯಲ್ಲಿ 6 ವರ್ಷದ ಅನಾಬೆಲ್ ಹುಡುಗಿ ಆತ್ಮ

6 ವರ್ಷದ ಅನಾಬೆಲ್ ಅನ್ನೋ ಸತ್ತ ಹುಡುಗಿಯ ಆತ್ಮ ಪಾವೆಯೊಳಗೆ ಇದೆ ಅಂತ ನಂಬಲಾಗಿದೆ. ಪಾವೆಯಲ್ಲಿ ಪ್ರೇತಾತ್ಮ ಇದೆ ಅಂತ ವಾದಿಸಿದ ವಾರನ್ ದಂಪತಿ, ಪಾವೆಯನ್ನು ತಮ್ಮ ಕನೆಕ್ಟಿಕಟ್ ಮ್ಯೂಸಿಯಂಗೆ ಸ್ಥಳಾಂತರಿಸಿದರು. ಈ ಪಾವೆಯೇ 'ದಿ ಕಾಂಜುರಿಂಗ್' ಸಿನಿಮಾಗೆ ಸ್ಫೂರ್ತಿ. ಈ ವರ್ಷದ ಆರಂಭದಲ್ಲಿ, ಲೂಸಿಯಾನದ ಜೈಲ್ ಬ್ರೇಕ್ ಮತ್ತು ಬೆಂಕಿ ಅವಘಡಕ್ಕೂ ಅನಾಬೆಲ್ ಪಾವೆಗೂ ಸಂಬಂಧ ಇದೆ ಅನ್ನೋ ಸುಳ್ಳು ಸುದ್ದಿ ಹಬ್ಬಿತ್ತು. ಆದರೆ ಪಾವೆ ಎಂದೂ 'ನಿಯಂತ್ರಣ ತಪ್ಪಿಲ್ಲ' ಅಂತ ತಜ್ಞರು ಸ್ಪಷ್ಟಪಡಿಸಿದ್ದರು. ಇದೀಗ ಅನಾಬೆಲ್ ಪಾವೆಯೇ ಕಾಣೆಯಾಗಿದೆ ಎಂಬ ವಿಷಯ ತಿಳಿದು ಇಡೀ ಜಗತ್ತು ಶಾಕ್ ಆಗಿದೆ.

ಸಾವಿಗೆ ಕಾರಣವಾಯ್ತಾ ಗೊಂಬೆ?

ತಜ್ಞ ಡ್ಯಾನ್ ರಿವೇರಾ ನಿಧನರಾದ ಹೋಟೆಲ್ ಕೋಣೆಯಲ್ಲಿ ಯಾವುದೇ ಅನುಮಾನಸ್ಪದ ವಸ್ತಗಳು ಕಾಣಿಸಿಲ್ಲ. ಇಲ್ಲಿ ಅನುಮಾನಸ್ಪದ ಘಟನೆಗಳು ನಡೆದಿರುವ ಬಗ್ಗೆಯೂ ಯಾವುದೇ ಸಂಶಯ ಕಂಡು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಕೆಲವರು ತಜ್ಞ ಡ್ಯಾನ್ ರಿವೇರಾ ಸಾವನ್ನು ಅನಾಬೆಲ್ಲಾ ಗೊಂಬೆಯೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಈ ಸಾವಿಗೆ ಅನಾಬೆಲ್ಲಾ ಗೊಂಬೆನಾ ಎಂಬ ಚರ್ಚೆಗಳು ಶುರುವಾಗಿವೆ.

ಪೊಲೀಸರ ಅಧಿಕೃತ ಹೇಳಿಕೆ ಏನು?

ಪಿಎಸ್‌ಪಿ ಗೆಟ್ಟಿಸ್‌ಬರ್ಗ್‌ನ ಸದಸ್ಯರು ಆಡಮ್ಸ್ ಕೌಂಟಿಯ ಸ್ಟ್ರಾಬನ್ ಟೌನ್‌ಶಿಪ್‌ನಲ್ಲಿರುವ ಹೋಟೆಲ್‌ ನಲ್ಲಿ ವ್ಯಕ್ತಿಯೊಬ್ಬರು ನಿಧನರಗಿದ್ದನ್ನು ಅಲ್ಲಿಯ ಕೆಲಸಗಾರರು ಮೊದಲು ನೋಡಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಅಸಾಮಾನ್ಯ ಅಥವಾ ಅನುಮಾನಾಸ್ಪದ ಏನೂ ಕಂಡುಬಂದಿಲ್ಲ ಎಂದು ಪೆನ್ಸಿಲ್ವೇನಿಯಾ ರಾಜ್ಯ ಪೊಲೀಸರು ಅಧಿಕೃತ ಹೇಳಿಕೆಯನ್ನು ಪ್ರಕಟಿಸಿದ್ದಾರೆ. ಈ ಎಲ್ಲಾ ಘಟನೆಗಳ ನಡುವೆ ರಿವೆರಾ ನಿಧನದ ನಂತರವೂ ನ್ಯೂ ಇಂಗ್ಲೆಂಡ್ ಸೊಸೈಟಿ ಫಾರ್ ಸೈಕಿಕ್ ರಿಸರ್ಚ್ ಮ್ಮ ಅಲೌಕಿಕ ಪ್ರವಾಸವನ್ನು ಮುಂದುವರಿಸಲು ಯೋಜಿಸಿದೆ ಎಂದು ವರದಿಯಾಗಿದೆ.

ಅನಾಬೆಲ್‌ ಹೆಸರಿನಲ್ಲಿ ಹಾರರ್ ಸಿನಿಮಾಗಳು

ಹಾಲಿವುಡ್‌ನಲ್ಲಿ ಅನಾಬೆಲ್ ಗೊಂಬೆಯನ್ನಿಟ್ಟುಕೊಂಡು ಹಲವು ಸಿನಿಮಾಗಳು ಬಿಡುಗಡೆಗೊಂಡು ಸಕ್ಸಸ್ ಆಗಿವೆ. ಚಿತ್ರವನ್ನು ನೋಡುವಾಗ ಜನರು ಭಯದಿಂದ ಥಿಯೇಟರ್‌ನಿಂದ ಹೊರಗೆ ಓಡಿ ಬಂದಿರುವ ಘಟನೆಗಳು ಸಹ ನಡೆದಿವೆ. ಬಾಕ್ಸ್ ಆಫಿಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುವ ಅನಾಬೆಲ್ ಸರಣಿ ಚಿತ್ರಗಳು ದಾಖಲೆಯನ್ನು ಬರೆದಿವೆ.