ತಮ್ಮ ಬ್ಯಾಲೆ ಪ್ರದರ್ಶನಕ್ಕೆ ಕೆಟ್ಟದಾದ ವಿಮರ್ಶೆ ನೀಡಿದ್ದಾರೆ ಎಂಬ ಕಾರಣಕ್ಕೆ ವಾರಾಂತ್ಯ ಪ್ರದರ್ಶನದಲ್ಲಿ ಖ್ಯಾತ ವಿಮರ್ಶಕರೊಬ್ಬರ ಮುಖಕ್ಕೆ ನಾಯಿಯ ಮಲ ಎಸೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಈ ಕುರಿತಾಗಿ ತನಿಖೆ ಆರಂಭಿಸಿದ್ದಾರೆ.  

ಬರ್ಲಿನ್‌: ತಮ್ಮ ಬ್ಯಾಲೆ ಪ್ರದರ್ಶನಕ್ಕೆ ಕೆಟ್ಟದಾದ ವಿಮರ್ಶೆ ನೀಡಿದ್ದಾರೆ ಎಂಬ ಕಾರಣಕ್ಕೆ ವಾರಾಂತ್ಯ ಪ್ರದರ್ಶನದಲ್ಲಿ ಖ್ಯಾತ ವಿಮರ್ಶಕರೊಬ್ಬರ ಮುಖಕ್ಕೆ ನಾಯಿಯ ಮಲ ಎಸೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಈ ಕುರಿತಾಗಿ ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ನಡೆದ ಪ್ರದರ್ಶನವೊಂದರ ಕುರಿತಾಗಿ ವಿಮರ್ಶಕ ಮಾರ್ಕೋ ಗೋಯ್ಕೆ (Marco Goeke) ಕಠಿಣವಾಗಿ ವಿಮರ್ಶೆ ಬರೆದಿದ್ದರು ಎಂಬ ಕಾರಣಕ್ಕೆ ಅವರನ್ನು ಅವಮಾನಿಸಲು ಬ್ಯಾಲೆ ನಿರ್ದೇಶಕಿ ವಿಬ್ಕೇ ಹ್ಯೂಸ್ಟರ್‌ (Vibke Huester)ನಿರ್ಧರಿಸಿದ್ದರು. ಹೀಗಾಗಿ ಗೋಯ್ಕೆ ಮೇಲೆ ನಾಯಿಯ ಮಲ ಬಿಸಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೇಪರ್‌ ಬ್ಯಾಗ್‌ನಿಂದ ಪ್ರಾಣಿಯ ಮಲವನ್ನು ತೆಗೆದ ಬ್ಯಾಲೆ ನಿರ್ದೇಶಕಿ ಅದನ್ನು ವಿಮರ್ಶಕನ ಮುಖಕ್ಕೆ ಎಸೆದಿದ್ದಾರೆ ಎಂದು ಫ್ರಾಂಕ್‌ಫರ್ಚ್‌ನ ಮಾಧ್ಯಮವೊಂದು ವರದಿ ಮಾಡಿದೆ. ಇದಾದ ಬಳಿಕ ಬ್ಯಾಲೆ ಪ್ರದರ್ಶನವನ್ನು ಆಯೋಜಕರು ರದ್ದು ಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಮಗಳಿಗೆ ಕಚ್ಚಿತೆಂದು ಕೋಪ: ಜೀವಂತ ಏಡಿಗಳ ತಿಂದು ಆಸ್ಪತ್ರೆ ಸೇರಿದ ಅಪ್ಪ

ಸಾಮಾನ್ಯವಾಗಿ ತನ್ನ ಹೆಣ್ಣು ಮಕ್ಕಳ ಮೇಲೆ ಅಪ್ಪನಿಗಿರುವ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮಗಳ ಮೇಲೆ ಅಪ್ಪನಿಗೆ ತುಸು ಹೆಚ್ಚೆ ಪ್ರೀತಿ ಕಾಳಜಿ ಇರುತ್ತದೆ. ಮಗಳಿಗೆ ತುಸು ಹೆಚ್ಚು ಕಡಿಮೆಯಾದರೆ ಅಪ್ಪ ಏನು ಮಾಡಲು ಸಿದ್ಧನಿರುತ್ತಾನೆ. ಅಪ್ಪನ ಪ್ರೀತಿ ಅಂತಹದ್ದು, ಇಲ್ಲೊಂದು ಕಡೆ ಮಗಳ ಮೇಲೆ ಅಪ್ಪನ ಅತಿರೇಕದ ಈ ಪ್ರೀತಿಯೇ ಈಗ ಆತನ ಆರೋಗ್ಯಕ್ಕೆ ಕುತ್ತು ತಂದಿದೆ. ಹೌದು ತನ್ನ ಮಗಳಿಗೆ ಏಡಿಯೊಂದು ಕಚ್ಚಿತೆಂದು ಸಿಟ್ಟಿಗೆದ್ದ ತಂದೆ ಇಡೀ ಏಡಿಗಳ ಕುಲದ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಇದಕ್ಕಾಗಿ ತನ್ನ ಮಗಳಿಗೆ ಕಚ್ಚಿದ ಏಡಿಯನ್ನು ಆತ ಹಸಿಯಾಗಿಯೇ ಜಗ್ಗಿದು ನುಂಗಿದ್ದು, ಇದರಿಂದ ಆತನ ಆರೋಗ್ಯ ಹದಗೆಟ್ಟಿದೆ. ಚೀನಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

ಹಳೇ ಬಾಯ್‌ಫ್ರೆಂಡ್‌ಗಳನ್ನೆಲ್ಲಾ ಮದ್ವೆಗೆ ಕರೆದು ಅವಮಾನಿಸಿದ ವಧು... ವಿಡಿಯೋ ವೈರಲ್

ಹೀಗೆ ಜೀವಂತ ಏಡಿಯನ್ನು ತಿಂದ ವ್ಯಕ್ತಿಯನ್ನು 39 ವರ್ಷದ ಲೂ (Lu) ಎಂದು ಗುರುತಿಸಲಾಗಿದೆ. ಈತ ಪೂರ್ವ ಚೀನಾದ ಝೇಜಿಂಗ್ (Zhejiang) ಪ್ರಾಂತ್ಯದ ನಿವಾಸಿಯಾಗಿದ್ದಾನೆ. ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಎಂಬ ನ್ಯೂಸ್ ಪೋರ್ಟಲ್ ಪ್ರಕಾರ, ಹೀಗೆ ಏಡಿಗಳನ್ನು ಜೀವಂತವಾಗಿ ತಿಂದ ಎರಡು ತಿಂಗಳ ಬಳಿಕ ಈತನಿಗೆ ತೀವ್ರವಾದ ಬೆನ್ನು ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ (hospital) ದಾಖಲಾಗಿದ್ದಾನೆ. ಆದರೆ ತಾನು ಏಡಿ ತಿಂದಿರುವ ಬಗ್ಗೆ ಹೇಳಿಕೊಳ್ಳಲು ಸಂಕೋಚಕ್ಕೊಳಗಾಗಿದ್ದಾನೆ. ವೈದ್ಯರು ಅಲರ್ಜಿಗೆ ಕಾರಣವಾದಂತಹ ಏನನ್ನಾದರೂ ತಿಂದಿದ್ದೀರೆ ಎಂದು ಆತನನ್ನು ಕೇಳಿದಾಗ ಆತ ವೈದ್ಯರ ಎಲ್ಲ ಪ್ರಶ್ನೆಗಳಿಗೆ ನೋ ಎಂದೇ ಉತ್ತರಿಸಿದ್ದಾನೆ. ಆದರೆ ಆತನ ಪತ್ನಿ ಆತ ಏಡಿಗಳನ್ನು ತಿಂದಿರುವ ಬಗ್ಗೆ ವೈದ್ಯರಿಗೆ ಹೇಳಿದಾಗ ಈ ವಿಚಾರ ಬಹಿರಂಗವಾಗಿದೆ ಎಂದು ಆತನ ವೈದ್ಯ ಕಾವೊ ಕ್ಯೂಯಾನ್ (Cao Qian) ಎಂದು ನ್ಯೂಸ್ ಪೋರ್ಟ್‌ಲ್‌ಗೆ ಹೇಳಿದ್ದಾರೆ. 

ಪತ್ನಿ ತನ್ನ ಪತಿ ಏಡಿಗಳನ್ನು ತಿಂದಿರುವುದಾಗಿ ವೈದ್ಯರಲ್ಲಿ ಹೇಳಿದಾಗ ಅವರು ಲು ಬಳಿ ಏಕೆ ಎಂದು ಕೇಳಿದ್ದು, ಮಗಳನ್ನು ಕಚ್ಚಿರುವುದಕ್ಕೆ ಏಡಿಯ ಬಗ್ಗೆ ತೀವ್ರವಾಗಿ ಸಿಟ್ಟುಗೊಂಡು ಸೇಡು ತೀರಿಸಿಕೊಳ್ಳುವುದಕ್ಕಾಗಿ ಜೀವಂತವಾದ ಏಡಿಗಳನ್ನು ತಿಂದಿರುವುದಾಗಿ ಆತ ವೈದ್ಯರ ಬಳಿ ಹೇಳಿದ್ದಾನೆ. ನಂತರ ವೈದ್ಯರು ಲು ವನ್ನು ರಕ್ತ ತಪಾಸಣೆ ಮಾಡಿಸಿಕೊಳ್ಳಲು ಕಳುಹಿಸಿದ್ದಾರೆ. ಈ ವೇಳೆ ಆತನ ದೇಹದ ಮೂರು ಭಾಗಗಳು ಹಾನಿಗೊಳಗಾಗಿರುವುದು ತಿಳಿದು ಬಂದಿದೆ. ಆತನ ಎದೆಯ ಭಾಗ (chest), ಹೊಟ್ಟೆ(abdomen), ಲಿವರ್(liver) ಹಾಗೂ ಜೀರ್ಣಕ್ರಿಯೆಯ ಭಾಗ ಸೋಂಕಿಗೊಳಗಾಗಿರುವುದು ರಕ್ತ ತಪಾಸಣೆ ವೇಳೆ ಕಂಡು ಬಂದಿದೆ. 

ರೇಷನ್‌ ಕಾರ್ಡ್‌ನಲ್ಲಿ 'ದತ್ತಾ' ಬದಲು 'ಕುತ್ತಾ' ಸರ್‌ನೇಮ್‌, ಅಧಿಕಾರಿಯ ಮುಂದೆ ಬೊಗಳಿ ಸೇಡು ತೀರಿಸಿಕೊಂಡ!