Asianet Suvarna News Asianet Suvarna News

ರೇಷನ್‌ ಕಾರ್ಡ್‌ನಲ್ಲಿ 'ದತ್ತಾ' ಬದಲು 'ಕುತ್ತಾ' ಸರ್‌ನೇಮ್‌, ಅಧಿಕಾರಿಯ ಮುಂದೆ ಬೊಗಳಿ ಸೇಡು ತೀರಿಸಿಕೊಂಡ!

ರೇಷನ್‌ ಕಾರ್ಡ್‌ನಲ್ಲಿ ಹೆಸರನ್ನಾಗಲಿ, ಸರ್‌ನೇಮ್‌ ಆಗಲಿ ಬದಲಾವಣೆ ಮಾಡೋದು ಎಷ್ಟು ಕಷ್ಟ ಅನ್ನೋದು ಮಾಡಿದವರಿಗೆ ತಿಳಿದಿರುತ್ತದೆ. ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಯೊಬ್ಬನ ಸರ್‌ನೇಮ್‌ನಲ್ಲಿ ದತ್ತಾ ಎನ್ನುವ ಬದಲು ಅಧಿಕಾರಿಗಳು 'ಕುತ್ತಾ' ಎಂದು ಮಾಡಿದ್ದರು. ಇದಕ್ಕೆ ಆ ವ್ಯಕ್ತಿ ಸೇಡು ತೀರಿಸಿಕೊಂಡು ವಿಡಿಯೋವೀಗ ವೈರಲ್‌ ಆಗಿದೆ.

Kutta was written instead of Dutta on the ration card protested barking in front of the officer san
Author
First Published Nov 19, 2022, 10:20 PM IST

ಕೋಲ್ಕತ್ತಾ (ನ.19): ರೇಷನ್‌ ಕಾರ್ಡ್‌ನಲ್ಲಿ ಹೆಸರು ಸೇರಿಸೋದಾಗಿ, ಹೆಸರನ್ನು ತೆಗೆಯೋದಾಗಲಿ ಅಷ್ಟು ಸುಲಭವಾಗಿ ಆಗುವಂಥ ಕೆಲಸವಲ್ಲ. ಅದರಲ್ಲೂ ಇದ್ದ ಹೆಸರಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಬೇಕು ಎಂದಾದರೆ ಕಥೆ ಮುಗಿದೇ ಹೋದ ಹಾಗೆ. ಇಂಥದ್ದೇ ಒಂದು ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಕ್ನಾ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ವ್ಯಕ್ತಿಯಾಗಿರುವ ಶ್ರೀಕಾಂತ್‌ ದತ್ತಾ ಹೆಸರನ್ನು ಆಹಾರ ಇಲಾಖೆ ನೀಡುವ ರೇಷನ್‌ ಕಾರ್ಡ್‌ನಲ್ಲಿ ಶ್ರೀಕಾಂತ್‌ 'ಕುತ್ತಾ' ಎಂದು ಮಾಡಿತ್ತು. ಹಿಂದಿಯಲ್ಲಿ ಕುತ್ತಾ ಎಂದರೆ ನಾಯಿ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಶ್ರೀಕಾಂತ್‌ ಸಾಕಷ್ಟು ಬಾರಿ ಪ್ರಯತ್ನ ಮಾಡಿದರು. ಎರಡು ಬಾರಿ ಹೆಸರನ್ನು ಸರಿಪಡಿಸುವಂತೆ ಮನವಿ ಕೂಡ ಸಲ್ಲಿಸಿದ್ದರು. ಎರಡೂ ಬಾರಿಯೂ ಅವರ ಹೆಸರಿನ ಮುಂದಿದ್ದ 'ಕುತ್ತಾ' ದತ್ತಾ ಆಗಲೇ ಇಲ್ಲ. ಆದರೆ, ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಶನಿವಾರ ಶ್ರೀಕಾಂತ್‌ ಕುತ್ತಾ ಅಲ್ಲಲ್ಲ.. ಶ್ರೀಕಾಂತ್‌ ದತ್ತಾ ಸಖತ್‌ ಆದ ಉಪಾಯವನ್ನು ಕಂಡುಕೊಂಡಿದ್ದರು. ಗ್ರಾಮಕ್ಕೆ ಬಂದಿದ್ದ ಆಹಾರ ಇಲಾಖೆಯ ಬ್ಲಾಕ್‌ ಡೆವಲಪ್‌ಮೆಂಟ್‌ ಅಧಿಕಾರಿಯ ಕಾರಿನ ಬಳಿ ಬಂದ ಶ್ರೀಕಾಂತ್‌ ದತ್ತಾ, ನಾಯಿಯ ರೀತಿ ವರ್ತನೆ ಮಾಡಿದ್ದಲ್ಲದೆ,  ಬೊಗಳಲು ಕೂಡ ಆರಂಭ ಮಾಡಿದ್ದಾರೆ. ಇದನ್ನು ಕಂಡ ಸ್ಥಳೀಯ ಬಿಡಿಒ ಕೂಡ ಮುಜುಗರಕ್ಕೆ ಒಳಗಾಗಿದ್ದಾರೆ.


‘ದುವಾರೆ ಸರ್ಕಾರ್ ಯೋಜನೆ’ ಕಾರ್ಯಕ್ರಮದ ಅಡಿಯಲ್ಲಿ ಬಿಡಿಒ ಅಧಿಕಾರಿ ಶ್ರೀಕಾಂತ್ ಅವರ ಗ್ರಾಮಕ್ಕೆ ಆಗಮಿಸಿದ್ದರು. ಶ್ರೀಕಾಂತ್ ನಾಯಿಯಂತೆ ಬೊಗಳುವುದನ್ನು ನೋಡಿ ಬಿಡಿಒಗೆ ಮೊದಲು ಈತನಿಗೆ ಮಾತನಾಡಲು ಬರೋದಿಲ್ಲ ಎಂದು ಅನಿಸಿದೆ. ಆದರೆ, ಸ್ಥಳೀಯ ಜನರು ವಿಷಯವನ್ನು ತಿಳಿಸಿದಾಗ ಆಗಿರುವ ತಪ್ಪನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಆದೇಶಿಸಿದರು.

ಮಾಜಿ IAS ಅಧಿಕಾರಿ ಆನಂದ್ ಬೋಸ್ ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲ!

40 ವರ್ಷ್ ಶ್ರೀಕಾಂತ್‌ ದತ್ತಾ, ಒಂದಲ್ಲ ಎರಡು ಬಾರಿ ತನ್ನ ಸರ್‌ನೇಮ್‌ನಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದರು. ಆದರೆ ಇದರಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. ಮೊದಲ ಬಾರಿಗೆ ಸರ್‌ನೇಮ್‌ ಬದಲು ಮಾಡಿದಾಗ ಅವಕಾಶ ಶ್ರೀಕಾಂತ್‌ ದತ್ತಾ ಎನ್ನುವ ಬದಲು ಶ್ರೀಕಾಂತ್‌ ಮಂಡಲ್‌ ಎಂದು ಮಾಡಿದ್ದರುಉ. ಬಳಿಕ ಮತ್ತೊಮ್ಮೆ ಅವರು ಸರ್‌ನೇಮ್‌ ಬದಲಿ ಮಾಡುವಂತೆ ಮನವಿ ಸಲ್ಲಿಸಿದಾಗ ಶ್ರೀಕಾಂತ್‌ ಕುಮಾರ್‌ ದತ್‌ ಎಂದು ಮಾಡಿದ್ದರು.

ತಪ್ಪಾಗಿದೆ ಕ್ಷಮಿಸಿ, ಬಹಿರಂಗ ಕ್ಷಮೆ ಯಾಚಿಸಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

ಬಳಿಕ ಮತ್ತೊಮ್ಮೆ ಅವರು ಅರ್ಜಿ ಸಲ್ಲಿಸಿ ಹೆಸರು ಸರಿಪಡಿಸುವಂತೆ ಕೋರಿಕೊಂಡಿದ್ದಾರೆ. ಈ ಹಂತದಲ್ಲಿ ಅಧಿಕಾರಿಗಳು ಅವರ ಹೆಸರನ್ನು ಶ್ರೀಕಂಠ ದತ್ತಾ ಎನ್ನುವ ಬದಲು ಶ್ರೀಕಂಠಿ ಕುಮಾರ್‌ ಕುತ್ತಾ ಎಂದು ಮಾಡಿದ್ದರು. ಅಧಿಕಾರಿಗಳ ಅಸಡ್ಡೆಯ ವರ್ತನೆಗೆ ಕುದ್ದು ಹೋಗಿದ್ದ ಶ್ರೀಕಾಂತ್ ಕೈಯಲ್ಲಿ ಬ್ಯಾಗ್ ಮತ್ತು ಸಾಕಷ್ಟು ಪೇಪರ್ ಗಳನ್ನು ಹಿಡಿದುಕೊಂಡು 'ದುವಾರೆ ಸರ್ಕಾರ್' ಕಾರ್ಯಕ್ರಮಕ್ಕೆ ಆಗಮಿಸಿ ನಾಯಿಯಂತೆ ಬೊಗಳತೊಡಗಿದರು.

 

Follow Us:
Download App:
  • android
  • ios