ಕ್ಯಾಲಿಫೋರ್ನಿಯಾ(ಆ.17): ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಶುಕ್ರವಾರ ಲೇಕ್ ಫೈರ್ ನಿಯಂತ್ರಿಸಲು ಯತ್ನಿಸುತ್ತಿದ್ದ ಅಗ್ನಿಶಾಮಕ ಸಿಬ್ಬಂದಿ ಹೊಸ ಬಗೆಯ ಸಮಸ್ಯೆ ಎದುರಿಸಿದ್ದಾರೆ. ಸಿಟಟ್ಟಿನಲ್ಲಿದ್ದ ಗೂಳಿಯಯೊಂದು ಇವರ ಮೇಲೆ ದಾಳಿ ನಡೆಸಲು ಯತ್ನಿಸಿದೆ. ವೆಂಚುರಾ ಕೌಂಟಿ ಅಗಗ್ನಿಶಾಮಕ ವಿಭಾಗ ಸೋಶಿಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ಅದು ಭಾರೀ ವೈರಲ್ ಆಗಿದೆ. 

ಮಹಾ ಜಲಾಶಯ ಹತ್ತಿರ ಲಘು ಭೂಕಂಪ: ಕೃಷ್ಣಾ ನದಿ ತೀರದ ಗ್ರಾಮಸ್ಥರಲ್ಲಿ ಮತ್ತೆ ಆತಂಕ

ಯುಎಸ್‌ಟುಡೇ ಅನ್ವಯ ಲೇಕ್ ಫೈರ್ ಕ್ಯಾಲಿಫೋರ್ನಿಯಾ ಅರಣ್ಯದಲ್ಲಿ ಕಾಣಿಸಿಕೊಂಡ ಬೆಂಕಿ. ಇದು ಕಳೆದ ತಿಂಗಳ ಅಂತ್ಯಕ್ಕೆ 18,000 ಎಕರೆಗೂ ಅಧಿಕ ಪ್ರದೇಶಕ್ಕೆ ವ್ಯಾಪಿಸಿದೆ. ಹೀಗಿರುವಾಗ ಶುಕ್ರವಾರ ಬೆಂಕಿ ನಂದಿಸುತ್ತಿದ್ದ ಸಿಬ್ಬಂದಿ ಮೇಲೆ ಅಚಾನಕ್ಕಾಗಿ ಗೂಳಿಯೊಂದು ದಾಳಿ ಮಾಡಿದೆ. ಇದನ್ನು ಕಂಡ ಸಿಬ್ಬಂದಿಯೂ ಎಲ್ಲಾ ಸಾಮಾಗ್ರಿಗಳನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. 

ವೆಂಚುರಾ ಕೌಂಟಿ ಫೈರ್ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಇದನ್ನು ವೀಕ್ಷಿಸಿದವರೆಲ್ಲರೂ ಬೆಂಕಿ ನಂದಿಸುವ ವೇಳೆ ಇಂತುದ್ದೊಂದು ಅಪಾಯ ಎದುರಾಗಿರುವುದಕ್ಕೆ ಗಾಬರಿ ವ್ಯಕ್ತಪಡಿಸಿದ್ದಾರೆ.