Passenger Plane Missing: ಚೀನಾ ಗಡಿಯಲ್ಲಿರುವ ಅಮುರ್ ಪ್ರದೇಶದಲ್ಲಿ ಪ್ರಯಾಣಿಕ ವಿಮಾನ ನಾಪತ್ತೆಯಾಗಿದೆ. ವಿಮಾನದಲ್ಲಿ ಐದು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು. 

ಮಾಸ್ಕೋ: ಸುಮಾರು 50 ಜನರು ಪ್ರಯಾಣಿಸುತ್ತಿದ್ದ ಪ್ರಯಾಣಿಕ ವಿಮಾನ ದಿಢೀರ್ ಅಂತ ನಾಪತ್ತೆಯಾಗಿದೆ. ಆನ್ -24 ಪ್ರಯಾಣಿಕ ವಿಮಾನ (An-24 passenger plane) ಮಾರ್ಗ ಮಧ್ಯೆಯೇ ಸಂಪರ್ಕ ಕಡಿತಗೊಂಡಿದೆ. ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಅಧಿಕಾರಿಗಳು ಪ್ರಯತ್ನಿಸುದ್ದಾರೆ. ಸದ್ಯ ಆನ್ - 24 ವಿಮಾನದ ಶೋಧ ಕಾರ್ಯ ನಡೆಯುತ್ತಿದೆ ಸ್ಥಳೀಯ ಗರ್ವನರ್ ಮಾಹಿತಿ ನೀಡಿದ್ದಾರೆ.

ರಾಯಿಟರ್ಸ್ ವರದಿ ಪ್ರಕಾರ, ರಷ್ಯಾದ ಪೂರ್ವ ಭಾಗದಲ್ಲಿ ವಿಮಾನ ನಾಪತ್ತೆಯಾಗಿದೆ. ಈ ವಿಮಾನವು ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ನಗರ ಪ್ರವೇಶಿಸುವ ಸಂದರ್ಭದಲ್ಲಿ ರಾಡಾರ್ ಸಂಪರ್ಕದಿಂದ ಕಡಿತಗೊಂಡಿದೆ. ಸೈಬೀರಿಯಾ ಮೂಲದ ಅಂಗಾರ ವಿಮಾನಯಾನ ಸಂಸ್ಥೆ (Siberia-based airline Angara) ಈ ಪ್ಲೇನ್‌ ನಿರ್ವಹಣೆ ಮಾಡುತ್ತಿತ್ತು.

ಸದ್ಯದ ಪ್ರಾಥಮಿಕ ವರದಿ ಪ್ರಕಾರ, ವಿಮಾನದಲ್ಲಿ ಐವರು ಮಕ್ಕಳು ಸೇರಿದಂತೆ 43 ಪ್ರಯಾಣಿಕರು, ಆರು ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಮಾಹಿತಿ ನೀಡಿದ್ದಾರೆ.

Scroll to load tweet…