Asianet Suvarna News Asianet Suvarna News

ರಾಮ ಮಂದಿರ ಉದ್ಘಾಟನೆ ಸಂಭ್ರಮ, ಅಮೆರಿಕದಲ್ಲಿ ಹಿಂದೂಗಳ ಬೃಹತ್ ರ‍್ಯಾಲಿ !

ರಾಮ ಮಂದಿರ ಉದ್ಘಾಟನೆಗೆ ತಯಾರಿ ನಡೆಯುತ್ತಿದೆ. ಜನವರಿ 22ರಂದು ಮೋದಿ ರಾಮ ಮಂದಿರ ಉದ್ಘಾಟನೆ ಮಾಡಲಿದ್ದಾರೆ. ದೇಶ ವಿದೇಶಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇದೀಗ ಅಮೆರಿಕದಲ್ಲಿ ರಾಮ ಮಂದಿರ ಉದ್ಘಾಟನೆ ಸಂಭ್ರಮಾಚರಣೆ ಶುರುವಾಗಿದೆ. ವಾಶಿಂಗ್ಟನ್‌ನಲ್ಲಿ ಬೃಹತ್ ರ‍್ಯಾಲಿ ನಡೆಸಲಾಗಿದೆ.

American Hindus organized car rally to celebrate Ayodhya Ram Mandir inauguration ckm
Author
First Published Dec 17, 2023, 4:49 PM IST | Last Updated Dec 17, 2023, 4:49 PM IST

ವಾಶಿಂಗ್ಟನ್(ಡಿ.17) ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ. ಆಯೋಧ್ಯೆ ಸಂಪೂರ್ಣ ಅಲಂಕಾರಗೊಂಡಿದೆ. ಅಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ದೇಶ ವಿದೇಶಗಳಲ್ಲಿ ಸಂಭ್ರಮ ಜೋರಾಗಿದೆ. ಇದೀಗ ಅಮೆರಿಕದ ವಾಶಿಂಗ್ಟನ್‌ನಲ್ಲಿ ಹಿಂದೂಗಳು ಬೃಹತ್ ರ‍್ಯಾಲಿ ಆಯೋಜಿಸಿದ್ದಾರೆ. ಫೆಡ್ರಿಕ್ ಸಿಟಿ ಮೇರಿಲೆಂಡ್ ಬಳಿ ಇರುವ ಆಂಜನೇಯ ದೇವಸ್ಥಾನ ಬಳಿಯಿಂದ ಬೃಹತ್ ಕಾರು ರ‍್ಯಾಲಿ ನಡೆಸಲಾಗಿದೆ.

ಭಾರತದಲ್ಲಿ ಈಗಾಗಲೇ ಸಂಭ್ರಮ ಆರಂಭಗೊಂಡಿದೆ. ಭಾರತೀಯರಾಗಿ ನಾವು ಅಮೆರಿಕದಲ್ಲಿ ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಆಚರಿಸುತ್ತಿದ್ದೇವೆ. 500 ವರ್ಷಗಳಿಂದ ಹಿಂದೂಗಳು ನಡೆಸಿದ ಸತತ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ. ಅದೆಷ್ಟೋ ಜನರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಸಾಧು ಸಂತರು, ಹಿಂದೂ ಕಾರ್ಯಕರ್ತರ ಬಲಿದಾನದ ಫಲವಾಗಿ ಇದೀಗ ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ನಮಗೆ ಹೆಮ್ಮೆಯಾಗುತ್ತಿದೆ ಎಂದು  ಅಮೆರಿಕ ಡಿಸಿ ಘಟಕದ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಮಹೇಂದ್ರ ಸಪಾ ಹೇಳಿದ್ದಾರೆ.

ರಾಮಮಂದಿರ ಉದ್ಘಾಟನೆಗೆ 250 ಕನ್ನಡಿಗರಿಗೆ ಆಹ್ವಾನ..!

ಜನವರಿ 20 ರಂದು ಮತ್ತೆ ವಾಶಿಂಗ್ಟನ್ ಡಿಸಿಯಲ್ಲಿ ಇದೇ ರೀತಿ ಬೃಹತ್ ರ‍್ಯಾಲಿ ಆಯೋಜಿಸಲಾಗುತ್ತದೆ.  ಹಿಂದೂಗಳು ಕುಟುಂಬಗಳು ಭಾಗಿಯಾಗುತ್ತಿದೆ. ಜನವರಿ 20 ರಂದು ಆಯೋಜಿಸುವ ಕಾರ್ಯಕ್ರಮದಲ್ಲಿ ಶ್ರೀರಾಮಾಯಣ ಕಥಾ, ರಾಮ ಲೀಲಾ, ರಾಮ ಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹೇಂದ್ರ ಸಪಾ ಹೇಳಿದ್ದಾರೆ.

ಜ.22ರಂದು ಈ ಗರ್ಭಗುಡಿಯಲ್ಲೇ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರಿ ಮೋದಿ ಪ್ರಾಣ ಪ್ರತಿಷ್ಠೆ ನೆರವೇರಿಸಲಿದ್ದಾರೆ. 
ಮುಂದಿನ ತಿಂಗಳು ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯ ಫೋಟೋಗಳನ್ನು ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ.ಶ್ರೀ ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್‌ ಅವರು ಈ ಪೋಟೋಗಳನ್ನು ಟ್ವೀಟ್‌ ಮಾಡಿದ್ದು, ರಾಮಲಲ್ಲಾನನ್ನು ಪ್ರತಿಷ್ಠಾಪನೆ ಮಾಡುವ ಗರ್ಭಗುಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅದಕ್ಕೆ ದೀಪಾಲಂಕಾರ ಮಾಡಲಾಗಿದೆ’ ಎಂದು ಹೇಳಿದ್ದಾರೆ.

ಅಯೋಧ್ಯೆ ರಾಮ ಮಂದಿರ ದೇಗುಲ ಲೈಟಿಂಗ್ ಹೊಣೆ ಕನ್ನಡಿಗ ರಾಜೇಶ್ ಶೆಟ್ಟಿಗೆ!

ಗರ್ಭಗುಡಿಯಲ್ಲಿ ಪೀಠವೊಂದು ಇದ್ದು ಅದರ ಮೇಲೆ ರಾಮನ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ. ಉಳಿದಂತೆ ಶ್ವೇತ ವರ್ಣದ ಅಮೃತ ಶಿಲೆಗಳು ಗರ್ಭಗುಡಿಯನ್ನು ಕಂಗೊಳಿಸುವಂತೆ ಮಾಡಿವೆ.ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ಗರ್ಭಗುಡಿಯ ಕಾಮಗಾರಿ ಪೂರ್ಣಗೊಂಡಿದೆ. ಉದ್ಘಾಟನೆ ವೇಳೆಗೆ ಮೊದಲ ಮಹಡಿ ಕಾಮಗಾರಿ ಸಂಪೂರ್ಣ ಪೂರ್ಣಗೊಳ್ಳಲಿದೆ. 

Latest Videos
Follow Us:
Download App:
  • android
  • ios