ಅಮೆರಿಕ ವಿಮಾನವನ್ನೇ ತುರ್ತು ಭೂಸ್ಪರ್ಶ ಮಾಡಿಸಿದ ಮಹಿಳಾ ಪ್ರಯಾಣಿಕೆ ತಲೆಯ ಹೇನು!
ವಿಮಾನ ಟೇಕ್ ಆಫ್ ಆಗಿ ಕೆಲ ಹೊತ್ತೇ ಕಳೆದಿದೆ. ಈ ವೇಳೆ ಮಹಿಳೆ ತಲೆಯಲ್ಲಿ ಸಹ ಪ್ರಯಾಣಿಕ ಹೇನು ಗುರುತಿಸಿದ್ದಾನೆ. ಇಷ್ಟೇ ನೋಡಿ ತುರ್ತು ಕಾರಣ ನೀಡಿ ವಿಮಾನವನ್ನೇ ಲ್ಯಾಂಡ್ ಮಾಡಲಾಗಿದೆ.
ನ್ಯೂಯಾರ್ಕ್(ಆ.04) ತಲೆಯಲ್ಲಿ ಹೇನು ಹರಿದಾಡುವುದು ಸಮಸ್ಯೆ ನಿಜ. ಆದರೆ ಈ ಸಮಸ್ಯೆ ವಿಮಾನವನ್ನೇ ಲ್ಯಾಂಡ್ ಮಾಡುವಷ್ಟು ಗಂಭೀರ ಅನ್ನೋದು ಇದೀಗ ಭಾರಿ ಚರ್ಚೆಯಾಗುತ್ತಿದೆ. ಹೌದು, ಅಮೆರಿಕನ್ ಏರ್‌ಲೈನ್ಸ್ ಮಹಿಳೆ ತಲೆಯಲ್ಲ ಹೇನಿದೆ ಅನ್ನೋ ಕಾರಣಕ್ಕೆ ತುರ್ತು ಲ್ಯಾಂಡ್ ಮಾಡಲಾಗಿದೆ. ಲಾಸ್ ಎಂಜಲ್ಸ್‌ನಿಂದ ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿದ್ದ ವಿಮಾನ ಏಕಾಏಕಿ ಫೋನಿಕ್ಸ್‌ನಲ್ಲಿ ಲ್ಯಾಂಡ್ ಮಾಡಲಾಗಿದೆ. ಸಹ ಪ್ರಯಾಣಿಕ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ತಲೆ ಮೇಲೆ ಹೇನು ಹರಿದಾಡುತ್ತಿದೆ ಎಂದು ದೂರು ನೀಡಿದ ಬೆನ್ನಲ್ಲೇ ವಿಮಾನ ಲ್ಯಾಂಡ್ ಆಗಿದೆ.
ಟಿಕ್‌ಟಾಕ್ ಕ್ರಿಯೆಟರ್ ಎಥನ್ ಜುಡೆಲ್ಸನ್ ಈ ಘಟನೆಯನ್ನು ವಿವರಿಸಿದ್ದಾರೆ. ಲಾಸ್ ಎಂಜಲ್ಸ್‌ನಿಂದ ನ್ಯೂಯಾರ್ಕ್‌ಗೆ ಸರಿಸುಮಾರು 6 ಗಂಟೆಗಳ ಪ್ರಯಾಣ. ಈ ಸುದೀರ್ಘ ಪ್ರಯಾಣದ ನಡುವೆ ಏಕಾಏಕಿ ಫ್ಲೈಟ್ ಮಾರ್ಗ ಬದಲಾಗಿದೆ. ತುರ್ತು ವಿಮಾನ ಭೂಸ್ಪರ್ಶವಾಗಿದೆ. ಹಲವರಿಗೆ ಏನಾಗಿದೆ ಅನ್ನೋದೇ ಗೊತ್ತಿಲ್ಲ. ಕೆಲವರಿಗೆ ಭೂಸ್ಪರ್ಶ ಯಾಕೆ ಅನ್ನೋ ಗೊಂದಲ. ವಿಮಾನದಲ್ಲಿರುವ ಎಲ್ಲಾ ಪ್ರಯಾಣಿಕರು ಆರೋಗ್ಯವಾಗಿದ್ದಾರೆ. ಯಾರೂ ಅಸ್ವಸ್ಥರಾಗಿಲ್ಲ, ಯಾರಿಗೂ ತುರ್ತು ಚಿಕಿತ್ಸೆಯ ಅವಶ್ಯಕತೆ ಬಿದ್ದಿಲ್ಲ. ಹೀಗಿದ್ದರೂ ಭೂಸ್ಪರ್ಶವೇಕೆ ಅನ್ನೋದು ಹಲವು ಪ್ರಯಾಣಿಕರ ಅನುಮಾನವಾಗಿತ್ತು ಎಂದು ಜುಡೆಲನ್ಸ್ ಹೇಳಿದ್ದಾರೆ.
ಟೇಕ್ ಆಫ್ ಬೆನ್ನಲ್ಲೇ ಪೈಲೈಟ್-ಕೋ ಪೈಲೆಟ್‌ಗೆ ನಿದ್ದೆ, 28 ನಿಮಿಷದ ಬಳಿಕ ಎದ್ದಾಗ ನಡೆದಿತ್ತು ಪವಾಡ!
ವಿಮಾನ ಫೋನಿಕ್ಸ್‌ನಲ್ಲಿ ಲ್ಯಾಂಡ್ ಆಗುತ್ತಿದ್ದ ಮಹಿಳೆಯೊಬ್ಬರು ಎಲ್ಲರಿಗಿಂತ ಬೇಗ ಇಳಿಯಲು ದಡಧಡ ಎಂದು ವಿಮಾನದ ಮುಂಭಾಗಕ್ಕೆ ತೆರಳಿದ್ದಾರೆ. ಇತರ ಯಾರೂ ಕೂಡ ಇಳಿಯಲು ಮುಂದಾಗಿಲ್ಲ. ಆ ಮಹಿಳೆಗೆ ತುರ್ತು ಭೂಸ್ಪರ್ಶವಾಗಿರುವುದು ಗೊತ್ತಾಗಿಲ್ಲ. ಕೆಲ ಹೊತ್ತಲ್ಲಿ ವಿಮಾನದ ಪ್ರಯಾಣಿಕರು ಗದ್ದಲ ಆರಂಭಿಸಿದ್ದಾರೆ. ಇಲ್ಲಿ ಯಾಕೆ ಲ್ಯಾಂಡಿಂಗ್ ಮಾಡಿದ್ದೀರಿ. ನಮ್ಮ ಸಮಯ ವ್ಯರ್ಥವಾಗಿದೆ. ಹೊಟೆಲ್ ಬುಕಿಂಗ್ ಆಗಿದೆ. ಕಚೇರಿ ಸಭೆ ಇದೆ. ಹೀಗೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳಿ ಗದ್ದಲ ಆರಂಭಿಸಿದ್ದಾರೆ. ಈ ವೇಳೆ ವಿಮಾನವ ಸಂಸ್ಥೆ ತುರ್ತು ಆರೋಗ್ಯದ ಕಾರಣಕ್ಕಾಗಿ ಭೂಸ್ಪರ್ಶ ಮಾಡಲಾಗಿದೆ. ಇದಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದಷ್ಟೇ ಮಾಹಿತಿ ನೀಡಿದ್ದಾರೆ.
ಈ ತುರ್ತು ಆರೋಗ್ಯಕ್ಕೆ ಕಾರಣಾಗಿತ್ತು ಒಂದು ಹೇನು. ಮಹಿಳೆ ತಲೆಯಲ್ಲಿ ಹೇನು ಹರಿದಾಡುತ್ತಿರುವುದನ್ನು ಪಕ್ಕದಲ್ಲಿ ಕುಳಿತ ಪ್ರಯಾಣಿಕ ಗಮನಿಸಿದ್ದಾನೆ. ಇದೊಂದು ವಿಮಾನವನ್ನೇ ಭೂಸ್ಪರ್ಶ ಮಾಡುವ ಸಮಸ್ಯೆ ಎಂದು ತುರ್ತಾಗಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಒಂದು ಹೇನು ವಿಚಾರವನ್ನು ಕ್ಯಾಪ್ಟನ್ ಕೂಡ ಗಂಭೀರವಾಗಿ ಪರಿಗಣಿಸಿದ್ದಾರೆ. ಬಳಿಕ ಮಾರ್ಗ ಬದಲಾಯಿಸಿ, ಲ್ಯಾಂಡಿಂಗ್ ಮಾಡಿದ್ದಾರೆ ಎಂದು ಜುಡೆಲ್ಸನ್ ವಿವರಿಸಿದ್ದಾರೆ.
ತುರ್ತು ಲ್ಯಾಂಡ್ ಆದ ಇಸ್ರೇಲ್ ವಿಮಾನಕ್ಕೆ ಇಂಧನ ತುಂಬಲು ಒಪ್ಪದ ಟರ್ಕಿ ಏರ್‌ಪೋರ್ಟ್ ಸಿಬ್ಬಂದಿ