ಅಮೆರಿಕ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಮೆರಿಕದ ಯಾವುದೇ ಕಾಲೇಜುಗಳಲ್ಲಿ ಜನಾಂಗ ಅಥವಾ ಜನಾಂಗೀಯತೆ ಆಧರಿಸಿ ಯಾವುದೇ ಆಡ್ಮಿಷನ್ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ.
ನ್ಯೂಯಾರ್ಕ್(ಜೂ.29): ವಿದ್ಯಾರ್ಥಿಗಳ ಅಡ್ಮಿಷನ್‌ಗೆ ಅವರ ವೈಯುಕ್ತಿ ಸಾಮರ್ಥ್, ಪ್ರತಿಭೆಗಳೆ ಮಾನದಂಡವಾಗಿರಬೇಕು. ಇದರ ಬದಲಾಗಿದೆ ಜನಾಂಗ, ಜನಾಂಗೀಯತೆ ಆಧಾರದಲ್ಲಿ ಪ್ರವೇಶಾತಿ ಮಾಡುವಂತಿಲ್ಲ ಎಂದು ಅಮೆರಿಕ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅಮೆರಿಕದಲ್ಲಿನ್ನು ಜನಾಂಗ ಆಧಾರಿತ ಕಾಲೇಜು ಪ್ರವೇಶಾತಿ ನಿಷೇಧಿಸಲಾಗಿದೆ. ಈ ರೀತಿಯ ಜನಾಂಗ ಆಧಾರಿತ ದಾಖಲಾತಿ ಅಮೆರಿಕ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಮೆರಿಕ ಸುಪ್ರೀಂ ಕೋರ್ಟ್ ಚೀಫ್ ಜಸ್ಟೀಸ್ ಜಾನ್ ರಾಬರ್ಸ್ ಈ ಆದೇಶ ನೀಡಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆ, ಕೌಶ್ಯಲ್ಯ, ಸಾಮರ್ಥ್ಯಗಳೇ ಮಾನದಂಡಗಳಾಗಿರುಬೇಕು. ಆದರೆ ಹಲವು ಕಾಲೇಜುಗಳು ಅವರ ಚರ್ಮದ ಬಣ್ಣ ಸೇರಿದಂತೆ ಇತರ ಮಾನದಂಡಗಳನ್ನಿಟ್ಟು ಅಡ್ಮಿಷನ್ ಮಾಡುತ್ತಿದೆ. ಇದನ್ನು ಅಮೆರಿಕ ಸಂವಿಧಾನ ಬಲವಾಗಿ ವಿರೋಧಿಸುತ್ತದೆ ಎಂದಿದೆ.
ಪ್ರೊಟೀನ್ ಶೇಕ್ ಕುಡಿದು 16 ವರ್ಷದ ಭಾರತದ ಬಾಲಕ ಸಾವು, ಕಂಪನಿಗೆ ಕೋರ್ಟ್ ವಾರ್ನಿಂಗ್ !
ಅಮೆರಿಕ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ದಾಖಲಾತಿ ವೇಳೆ ಕಪ್ಪು, ಹಿಸ್ಪಾನಿಕ್ ಹಾಗೂ ಸ್ಥಳೀಯ ಅಮೆರಿಕನ್ಸ್‌ಗೆ ಆದ್ಯೆ ನೀಡುತ್ತಿದೆ. ಭಾರತ, ಏಷ್ಯಾದ ವಿದ್ಯಾರ್ಥಿಗಳ ವಿರುದ್ಧ ತಾರಾಮತ್ಯ ಮಾಡಲಾಗುತ್ತಿದೆ ಅನ್ನೋ ಆರೋಪ ಕೇಳಬಂದಿತ್ತು. ಈ ಕುರಿತು ಹಲವು ದೂರುಗಳು, ನ್ಯಾಯಾಲಯದಲ್ಲಿ ಮನವಿಗಳು ದಾಖಲಾಗಿತ್ತು.
ಇದೀಗ ಅಮೆರಿಕ ಸುಪ್ರೀಂ ಕೋರ್ಟ್ ದಶಕಗಳ ಹಿಂದಿನ ಪದ್ಧತಿ ಹಾಗೂ ನೀತಿಯನ್ನು ಬದಲಾಯಿಸಿದೆ. ವಿಶ್ವವಿದ್ಯಾಲಯಗಳು ಅರ್ಜಿದಾರರ ಹಿನ್ನಲೆ ಪರಿಗಣಿಸಲು ಮುಕ್ತವಾಗಿದೆ. ಆದರೆ ದಾಖಲಾತಿ ವೇಳೆ ಶೈಕ್ಷಣಿಗ ಅರ್ಹತೆ ಮೇಲೆ ಅಡ್ಮಿಷನ್ ಮಾಡಿಕೊಳ್ಳಬೇಕು. ಅರ್ಜಿದಾರ ಕಪ್ಪು, ಬಿಳಿ ಅಥವಾ ಇನ್ಯಾವುದೋ ಜನಾಂಗೀಯ ಆಧಾರದಲ್ಲ ಅಡ್ಮಿಷನ್ ನೀಡುವುದು ತಾರತಮ್ಯವಾಗಿದೆ ಎಂದು ರಾಬರ್ಟ್ಸ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಅಮೆರಿಕ ಸಂವಿಧಾನ ಈ ರೀತಿ ತಾರತಮ್ಯವನ್ನು ಸಹಿಸುವುದಿಲ್ಲ. ಸಮಾನತೆಗೆ ಅಂಗೀಕಾರದ ಅಗತ್ಯವಿದೆ. ಜನಾಂಗೀಯತೆ ಸಮಾಜವನ್ನು ಸಮೀಕರಿಸುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಎಚ್-1ಬಿ ವೀಸಾ ಪಡೆದ 10,000 ಜನರಿಗೆ ಕೆನಡಾ ಆಫರ್: ಭಾರತದ ಟೆಕ್ಕಿಗಳಿಗೆ ಗುಡ್ ನ್ಯೂಸ್!
ಆದರೆ ಈ ತೀರ್ಪಿನ ಬೆನ್ನಲ್ಲೇ ಡೆಮಾಕ್ರಟಿಕ ಪದ ಪ್ರಗತಿಪರ ಸಭೆ ಅಧ್ಯಕ್ಷೆ ಪ್ರಮೀಳಾ ಜಯಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ತೀರ್ಪಿನಿಂದ ಮೆರಿಟ್ ಆಧಾರದಲ್ಲಿ ಸೀಟು ಪಡೆಯುವ ವಿದ್ಯಾರ್ಥಿಳಿಗೆ ಅವಕಾಶ ವಂಚಿತವಾಗಲಿದೆ ಎಂದಿದ್ದಾರೆ. ಈ ತೀರ್ಪು ಬಣ್ಣದ ಸಮುದಾಯಕ್ಕೆ ಧಕ್ಕೆಯಾಗಿದೆ. ಶಿಕ್ಷಣದಲ್ಲಿ ವೈವಿದ್ಯತೆಯ ಚಿಂತನೆ ನಷ್ಟವಾಗಲಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದೀಗ ಶ್ರೀಮಂತರಿಗೆ ಮಾತ್ರ ಸೀಮಿತವಾಗಲಿದೆ ಎಂದು ಪ್ರಮೀಳಾ ಜಯಪಾಲ್ ಹೇಳಿದ್ದಾರೆ.
