ಚೀನಾ ವಿರೋಧದ ನಡುವೆ ತೈವಾನ್ ಸಂಸತ್ತಿನಲ್ಲಿ ಅಮೆರಿಕ ಸ್ಪೀಕರ್ ಭಾಷಣ, ಯುದ್ಧ ಭೀತಿ!

ಭಾರಿ ವಿರೋಧದ ನಡುವೆ ತೈವಾನ್‌ಗೆ ಭೇಟಿ ನೀಡಿರುವ ಅಮೆರಿಕ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಸಂಸತ್ತಿನಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ ಯಾವುದೇ ಪರಿಸ್ಥಿತಿಯಲ್ಲಿ ತೈವಾನ್ ಜೊತೆ ನಿಲ್ಲುವುದಾಗಿ ಘೋಷಿಸಿದೆ. ಇದು ಚೀನಾವನ್ನು ಮತ್ತಷ್ಟು ಕೆರಳಿಸಿದೆ.  ಯುದ್ಧದ ಸೂಚನೆಯನ್ನು ಚೀನಾ ನೀಡಿದೆ.

America Speaker nancy pelosi address Taiwan parliament despite china warns and threat ckm

ತೈವಾನ್(ಆ.03):  ರಷ್ಯಾ ಹಾಗೂ ಉಕ್ರೇನ್ ಸಂಘರ್ಷದ ನಡುವೆ ಇದೀಗ ಅಮೆರಿಕ ಹಾಗೂ ಚೀನಾ ನಡುವೆ ಯುದ್ಧ ಭೀತಿ ಎದುರಾಗಿದೆ. ಚೀನಾ ತೀವ್ರ ವಿರೋಧದ ನಡುವೆಯೂ ತೈವಾನ್‌ಗೆ ಅಮರಿಕ ಸ್ಪೀಕ್ ನ್ಯಾನ್ಸಿ ಪೆಲೋಸಿ ಭೇಟಿ ನೀಡಿದ್ದಾರೆ. ಇದು ಚೀನಾ ಕೆರಳಿಸಿದೆ. ಇದರ ಬೆನ್ನಲ್ಲೇ 21 ಯುದ್ಧ ವಿಮಾನಗಳನ್ನು ಚೀನಾ ತೈವಾನ್ ರಕ್ಷಣಾ ವಲಯದಲ್ಲಿ ಸುತ್ತಾಡುತ್ತಿದೆ. ಇಷ್ಟೇ ಅಲ್ಲ ಗಡಿ ಪ್ರದೇಶದಿಂದ ದಾಳಿ ಆರಂಭಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ಈ ಬೆಳವಣಿಗೆ ನಡುವೆ ನ್ಯಾನ್ಸಿ ಪೆಲೋಸಿ ತೈವಾನ್ ಸಂಸತ್ತಿನ ಭಾಷಣ ಮಾಡಿದ್ದಾರೆ. ಚೀನಾದ ಎಲ್ಲಾ ಎಚ್ಚರಿಕೆಯನ್ನು ಮೀರಿದ ಅಮೆರಿಕಾ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧ ಎಂದಿದೆ. ಇಷ್ಟೇ ಅಲ್ಲ ಭಾಷಣದಲ್ಲಿ ತೈವಾನ್ ಪರ ಅಮೆರಿಕ ನಿಲ್ಲಲಿದೆ ಎಂದು ಮತ್ತೊಮ್ಮೆ ಘೋಷಿಸಿದೆ. ಅಮೆರಿಕ ಈ ನಡೆ ಚೀನಾ ಮಾತ್ರವಲ್ಲ, ರಷ್ಯಾವನ್ನು ಕೆರಳಿಸಿದೆ. ತೈವಾನ್ ವಿಚಾರದಲ್ಲಿ ಚೀನಾ ಪರ ನಿಲ್ಲುವುದಾಗಿ ರಷ್ಯಾ ಘೋಷಿಸಿದೆ.  ತೈವಾನ್ ಸಂಸತ್ತಿನಲ್ಲಿ ಭಾಷಣ ಮಾಡಿದ ಪೋಲಿಸಿ, ಸಂಸದೀಯ ಸಹಕಾರ ಹೆಚ್ಚಿಸಲು ಕರೆ ನೀಡಿದ್ದಾರೆ. ಇದೇ ವೇಳೆ ಅಧ್ಯಕ್ಷ ತ್ಸೈ ಇಂಗ್ ವೆನ್ ನಾಯಕತ್ವಕ್ಕೆ ಧನ್ಯವಾದ ಹೇಳಿದ್ದಾರೆ. ವಿಶ್ವದ ಸ್ವತಂತ್ರ ಸಮಾಜಗಳಲ್ಲಿ ಒಂದಾಗಿರುವ ತೈವಾನ್ ದೇಶವನ್ನು ಶ್ಲಾಘಿಸುತ್ತೇವೆ ಎಂದು ಪೆಲೋಸಿ ಹೇಳಿದ್ದಾರೆ.

ನ್ಯಾನ್ಸಿ ಪೆಲೋಸಿ ಮಾತುಗಳು ಚೀನಾವನ್ನು ತೀವ್ರವಾಗಿ ಕೆರಳಿಸಿದೆ. ತೈವಾನ್ ಚೀನಾದ ಅವಿಭಾಜ್ಯ ಅಂಗ ಎಂಬುದು ಚೀನಾದ ವಾದ. ತೈವಾನ್‌ಗೆ ಸ್ವತಂತ್ರ ದೇಶ ಸ್ಥಾನಮಾನವನ್ನು ಚೀನಾ ನೀಡಿಲ್ಲ. ಆದರೆ ಪೆಲೋಸಿ ತಮ್ಮ ಭಾಷಣದಲ್ಲಿ ವಿಶ್ವದ ಸ್ವತಂತ್ರ ಸಮಾಜ ಎಂದಿದೆ. ತೈವಾನ್ ವಿಚಾರದಲ್ಲಿ ಅಮರಿಕ ಹಸ್ತಕ್ಷೇಪ ಮಾಡುತ್ತಿದೆ. ಇದರ ಅಗತ್ಯ ಅಮೆರಿಕಾಗೆ ಇಲ್ಲ. ಇದು ಚೀನಾದ ಭಾಗವಾಗಿದೆ. ಚೀನಾದ ಅನುಮತಿ ಇಲ್ಲದೆ ಇಲ್ಲಿ ಪ್ರವೇಶ ನಿಷಿದ್ಧ ಎಂದಿದೆ.

ಸೇನಾ ಕಾರ್ಯಾಚರಣೆಯ ಸೂಚನೆ, 21 ಚೀನಾ ಯುದ್ಧವಿಮಾನ ತೈವಾನ್‌ ಪ್ರವೇಶ!

ಚೀನಾದ ಎಚ್ಚರಿಕೆ ತೀವ್ರಗೊಳ್ಳುತ್ತಿದ್ದಂತೆ ಅಮೆರಿಕ ಯುಎಸ್‌ಎಸ್‌ ರೋನಾಲ್ಡ್‌ ರೀಗನ್‌ ಯುದ್ಧ ನೌಕೆಯನ್ನು ಫಿಲಿಪ್ಪೀನ್ಸ್‌ ಸಮುದ್ರದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಜೊತೆಗೆ ತೈವಾನ್‌ ಸರ್ಕಾರ ಕೂಡಾ ತನ್ನ ಯೋಧರು ಮತ್ತು ಸೇನೆಯನ್ನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಇರಿಸಿವೆ. ಆದರೆ ಒಂದು ವೇಳೆ ತೈವಾನ್‌ ಮೇಲೆ ಚೀನಾ ದಾಳಿ ನಡೆಸಿದರೆ ತೈವಾನ್‌ಗೆ ಸೇನಾ ನೆರವು ನೀಡಲು ಸಿದ್ಧ ಎಂದು ಅಮೆರಿಕ ಇತ್ತೀಚೆಗೆ ಭರವಸೆ ನೀಡಿತ್ತು.ಹೀಗಾಗಿ ತೈವಾನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ರಷ್ಯಾ ಕೂಡಾ ಅಮೆರಿಕದ ನಡೆಯನ್ನು ‘ಯುದ್ಧ ಪ್ರಚೋದನೆ’ ಎಂದು ಕರೆದಿದ್ದು, ಅಮೆರಿಕದ ವಿರುದ್ಧ ಚೀನಾವನ್ನು ಬೆಂಬಲಿಸುವುದಾಗಿ ಹೇಳಿಕೆ ನೀಡಿದೆ.

ತೈವಾನ್‌ನಲ್ಲಿ ಚೀನಾ ಸೇನಾ ಕಾರ್ಯಚರಣೆಗೆ ಜಪಾನ್ ವಿರೋಧ ವ್ಯಕ್ತಪಡಿಸಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಜಪಾನ್ ಎಚ್ಚರಿಕೆ ನೀಡಿದೆ.   ದ್ವೀಪ ದೇಶ ತೈವಾನ್‌ನ ಸುತ್ತಮುತ್ತಲೂ ನಿತ್ಯವೆಂಬಂತೆ ಚೀನಾ ನಡೆಸುತ್ತಿರುವ ಸೇನಾ ಚಟುವಟಿಕೆಗಳು, ವಲಯದಲ್ಲಿನ ಯಥಾಸ್ಥಿತಿ ಬದಲಾವಣೆ ಜೊತೆಗೆ ಇಡೀ ವಲಯದ ಸ್ಥಿರತೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಮೆರಿಕ ಗಂಭೀರ ಕಳವಳ ವ್ಯಕ್ತಪಡಿಸಿದೆ. ಈ ಮೂಲಕ ಸ್ವತಂತ್ರ ತೈವಾನ್‌ಗೆ ಬೆಂಬಲ ವ್ಯಕ್ತಪಡಿಸಿದೆ

ಸ್ಪೀಕರ್ ತೈವಾನ್ ಭೇಟಿಗೆ ಕೆಂಡ, ಭಾರತದ ಚೀನಾ ರಾಯಭಾರ ಕಚೇರಿಯಿಂದ ಅಮೆರಿಕಾಗೆ ಎಚ್ಚರಿಕೆ!

Latest Videos
Follow Us:
Download App:
  • android
  • ios