ವಾಷಿಂಗ್ಟನ್‌ (ಅ.09):  ಕೊರೋನಾ ನಿಗ್ರಹಕ್ಕೆ ವಿಶ್ವದಾದ್ಯಂತ ಔಷಧ ಸಂಶೋಧನೆಗೆ ನೂರಾರು ಕಂಪನಿಗಳು ಹರಸಾಹಸ ಪಡುತ್ತಿರುವಾಗಲೇ ಅಮೆರಿಕದ ಕಂಪನಿಯೊಂದರ ಪ್ರಾಯೋಗಿಕ ಔಷಧವೊಂದು ದಿಢೀರನೆ ಭಾರೀ ಸದ್ದು ಮಾಡಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೇವಲ 6 ದಿನದಲ್ಲೇ ಸೋಂಕಿನಿಂದ ಚೇತರಿಸಿಕೊಂಡಿದ್ದು ರೀಜೆನರಾನ್‌ ಫಾರ್ಮಾ ಎಂಬ ಕಂಪನಿಯ ಔಷಧದಿಂದ ಎಂದು ವರದಿಯಾದ ಬಳಿಕ ಅದಕ್ಕೆ ಭಾರೀ ಬೇಡಿಕೆ ಕಂಡುಬಂದಿದೆ.

ಇದೇ ವೇಳೆ ಇಂಥದ್ದೊಂದು ಪ್ರಾಯೋಗಿಕ ಔಷಧವನ್ನು ಪರಿಚಯಿಸಲು ಕಾರಣವಾದ ಕೊರೋನಾ ತಮಗೆ ತಗುಲಿದ್ದು ದೇವರ ಕೃಪೆ ಎಂದು ಟ್ರಂಪ್‌ ಹೇಳಿಕೊಂಡಿದ್ದಾರೆ. ಅಲ್ಲದೆ ಎಲ್ಲ ಅಮೆರಿಕನ್ನಿಗರಿಗೂ ಈ ಔಷಧವನ್ನು ಉಚಿತವಾಗಿ ಸಿಗುವಂತೆ ಮಾಡುವುದಾಗಿ ಘೋಷಿಸುವ ಮೂಲಕ ಔಷಧದ ಕುರಿತ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ.

ಅಬ್ಬಾ..! 6 ತಿಂಗಳ ನಂತರ ಇಳಿಮುಖವಾಗುತ್ತಿದೆ ಕೊರೊನಾ ಸೋಂಕು

ಅಮೆರಿಕ ರೀಜೆನರಾನ್‌ ಫಾರ್ಮಾ ಎಂಬ ಕಂಪನಿ ‘ಆರ್‌ಇಜಿಎನ್‌-ಸಿಒವಿ 2 ಎಂಬ ಔಷಧವನ್ನು ಅಭಿವೃದ್ಧಿಪಡಿಸಿದೆ. ಎರಡು ಮೋನೋಕ್ಲೋನಲ್‌ ಆ್ಯಂಟಿಬಾಡಿ (ಪ್ರತಿಕಾಯ)ಗಳನ್ನು ಸಂಯೋಜಿಸಿ ರೂಪಿಸಿರುವ ಈ ಔಷಧವು ಸಾ​ರ್‍ಸ್-ಕೋವಿಡ್‌ 2 ವೈರಸ್‌ ಅನ್ನು ತಡೆಯುತ್ತದೆ ಎನ್ನಲಾಗಿದೆ. ಈ ಔಷಧವನ್ನು ಇನ್ನಾರೆ ಅಮೆರಿಕನ್ನರು ಖರೀದಿಸಲು ಬಯಸಿದರೆ 73 ಲಕ್ಷ ನೀಡಬೇಕು ಎನ್ನಲಾಗಿದೆ. ಟ್ರಂಪ್‌ ಆಡಳಿತದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಅವರು ಸೂಚಿಸುವ ಔಷಧವನ್ನು ತಾವು ಸೇವಿಸುವುದಿಲ್ಲ ಎಂದು ಅಮೆರಿಕ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್‌ ತಿಳಿಸಿದ್ದಾರೆ.