ಅಮೆರಿಕ ಇದುವರೆಗೂ ಸರಿಯಾದ ಸಾಕ್ಷಿ ನೀಡಿಲ್ಲ. ಹೀಗೆ ಸಾಕ್ಷಿ ರಹಿತ ಆರೋಪ ಮಾಡುವುದು ಗಂಭೀರ ವಿಷಯ. ಸಾಕ್ಷಿ ಇಲ್ಲದೇ ಆರೋಪಿಸುವುದು ಒಪ್ಪಲಾಗದು ಎಂದು ಹೇಳಿದ ರಷ್ಯಾ ವಿದೇಶಾಂಗ ವಕ್ತಾರೆ ಮರಿಯಾ ಝಕರೋವಾ

ಮಾಸ್ಕೋ(ಮೇ.10):  ಅಮೆರಿಕ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸುತ್ತಿದೆ. ಭಾರತ ಸೇರಿದಂತೆ ಅನ್ಯ ರಾಷ್ಟ್ರಗಳ ಆಂತರಿಕ ವಿಷಯದಲ್ಲಿ ಮೂಗು ತೂರಿಸಿ ಶಾಂತಿ ಕದಡುತ್ತಿದೆ ಎಂದು ರಷ್ಯಾ ಆರೋಪಿಸಿದೆ. ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಹತ್ಯೆ ಸಂಚಿನ ವಿಚಾರದಲ್ಲಿಯೂ ಅಮೆರಿಕ ಸರಿಯಾದ ಸಾಕ್ಷಿ ನೀಡದೆ, ಗಂಭೀರ ಆರೋಪ ಮಾಡುತ್ತಿದೆ ಎಂದು ರಷ್ಯಾ ದೂಷಿಸಿದೆ.

ಪನ್ನೂನ್‌ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂಬ ವಾಷಿಂಗ್ಟನ್‌ ಪೋಸ್ಟ್‌ ಕುರಿತು ಮಾತನಾಡಿದ ರಷ್ಯಾ ವಿದೇಶಾಂಗ ವಕ್ತಾರೆ ಮರಿಯಾ ಝಕರೋವಾ,‘ಅಮೆರಿಕ ಇದುವರೆಗೂ ಸರಿಯಾದ ಸಾಕ್ಷಿ ನೀಡಿಲ್ಲ. ಹೀಗೆ ಸಾಕ್ಷಿ ರಹಿತ ಆರೋಪ ಮಾಡುವುದು ಗಂಭೀರ ವಿಷಯ. ಸಾಕ್ಷಿ ಇಲ್ಲದೇ ಆರೋಪಿಸುವುದು ಒಪ್ಪಲಾಗದು ಎಂದು ಹೇಳಿದರು.

ಭಾರತ ಅಭಿವೃದ್ಧಿಗೆ ಪ್ರಧಾನಿ ಮೋದಿಯೇ ಕಾರಣ: ಅಮೆರಿಕ ಉದ್ಯಮಿ

ಅಮೆರಿಕವು ಭಾರತದ ಇತಿಹಾಸ, ಮನೋಭಾವ ಹಾಗೂ ಸಾಮಾಜಿಕ ಸ್ಥಿತಿಯನ್ನು ಅರಿತುಕೊಳ್ಳುವಲ್ಲಿ ಎಡವಿದೆ. ಹೀಗಾಗಿ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಬೇಕಾಬಿಟ್ಟಿ ಆರೋಪ ಮಾಡುತ್ತಿದೆ. ಮತ್ತೊಂದೆಡೆ ಭಾರತದಲ್ಲಿ ಅಸ್ಥಿರತೆ ಸೃಷ್ಟಿಸುವ ಸಲುವಾಗಿ ಲೋಕಸಭೆ ಚುನಾವಣೆಯಲ್ಲಿ ಮೂಗು ತೂರಿಸುತ್ತಿದೆ. ಜೊತೆಗೆ ಅನ್ಯ ದೇಶಗಳ ವಿಷಯದಲ್ಲಿಯೂ ಅಗತ್ಯವಿಲ್ಲದೇ ತನ್ನ ಅಧಿಕ ಪ್ರಸಂಗವನ್ನು ತೋರುತ್ತಿದೆ ಎಂದು ಕುಟುಕಿದರು.