ಇರಾನ್‌ ರಹಸ್ಯವಾಗಿ ಅಣ್ವಸ್ತ್ರ ಯೋಜನೆಗಳನ್ನು ನಡೆಸುತ್ತಿದೆ ಎಂದು ದೂರುತ್ತಲೇ ಬಂದಿರುವ ಅಮೆರಿಕ, ಆ ದೇಶದ ಮೇಲೆ ಹಲವು ದಿಗ್ಬಂಧನಗಳನ್ನು ವಿಧಿಸಿದೆ. ಇಂತಹ ಸಂದರ್ಭದಲ್ಲೇ ಇರಾನ್‌ ಜತೆ ಭಾರತ ಒಪ್ಪಂದ ಮಾಡಿಕೊಂಡಿರುವುದು ಆ ದೇಶದ ಆಕ್ರೋಶಕ್ಕೆ ಕಾರಣವಾಗಿದೆ.

ವಾಷಿಂಗ್ಟನ್‌(ಮೇ.15):  ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಚಾಬಹಾರ್‌ ಬಂದರನ್ನು 10 ವರ್ಷಗಳ ಕಾಲ ನಿರ್ವಹಣೆ ಮಾಡಲು ಇರಾನ್‌ ಸರ್ಕಾರದ ಜತೆ ಭಾರತ ಮಾಡಿಕೊಂಡ ಒಪ್ಪಂದ ಇದೀಗ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಇರಾನ್‌ ಜತೆ ವ್ಯವಹಾರ ಮಾಡುವ ಯಾವುದೇ ದೇಶವಾದರೂ ದಿಗ್ಬಂಧನದ ಸಂಭಾವ್ಯ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಗುಟುರು ಹಾಕಿದೆ.

ಇರಾನ್‌ ರಹಸ್ಯವಾಗಿ ಅಣ್ವಸ್ತ್ರ ಯೋಜನೆಗಳನ್ನು ನಡೆಸುತ್ತಿದೆ ಎಂದು ದೂರುತ್ತಲೇ ಬಂದಿರುವ ಅಮೆರಿಕ, ಆ ದೇಶದ ಮೇಲೆ ಹಲವು ದಿಗ್ಬಂಧನಗಳನ್ನು ವಿಧಿಸಿದೆ. ಇಂತಹ ಸಂದರ್ಭದಲ್ಲೇ ಇರಾನ್‌ ಜತೆ ಭಾರತ ಒಪ್ಪಂದ ಮಾಡಿಕೊಂಡಿರುವುದು ಆ ದೇಶದ ಆಕ್ರೋಶಕ್ಕೆ ಕಾರಣವಾಗಿದೆ.

'ನಮಗೆ ಇರೋದು ಇದೊಂದೇ ಮಾರ್ಗ..' ಎಲ್ಲಾ ಸರ್ಕಾರಿ ಕಂಪನಿಗಳ ಮಾರಾಟ ಘೋಷಿಸಿದ ಪಾಕಿಸ್ತಾನ!

ಚಾಬಹಾರ್ ಬಂದರಿಗೆ ಸಂಬಂಧಿಸಿದಂತೆ ಇರಾನ್‌ ಹಾಗೂ ಭಾರತ ಒಪ್ಪಂದಕ್ಕೆ ಸಹಿ ಹಾಕಿರುವ ವಿಷಯ ನಮಗೂ ಗೊತ್ತಾಗಿದೆ. ತನ್ನ ವಿದೇಶಾಂಗ ನೀತಿ ಹಾಗೂ ಚಾಬಹಾರ್‌ ಒಪ್ಪಂದ ಮತ್ತು ಇರಾನ್‌ ಜತೆಗಿನ ದ್ವಿಪಕ್ಷೀಯ ಸಂಬಂಧದ ಕುರಿತು ಭಾರತವೇ ಮಾತನಾಡಲಿ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್‌ ಪಟೇಲ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಾಕಿಸ್ತಾನವನ್ನು ಬಳಸದೆ ಅಫ್ಘಾನಿಸ್ತಾನ ಹಾಗೂ ಕೇಂದ್ರ ಏಷ್ಯಾ ದೇಶಗಳಿಗೆ ಸರಕು ಸಾಗಿಸಲು ಭಾರತಕ್ಕೆ ಚಾಬಹಾರ್‌ ಒಪ್ಪಂದದಿಂದ ಅನುಕೂಲವಾಗಲಿದೆ.