ವಾಶಿಂಗ್ಟನ್(ಸೆ.15): ಚೀನಾದ ಕುತಂತ್ರ ಬುದ್ದಿಯಿಂದ ಒಂದೊಂದೆ ದೇಶಗಳು ಚೀನಾ ವಿರುದ್ಧ ಕಿಡಿ ಕಾರುತ್ತಿದೆ. ಇಷ್ಟೇ ಅಲ್ಲ ಚೀನಾ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಹಾಕುತ್ತಿದೆ. ಈಗಾಗಲೇ ಭಾರತ, ಚೀನಾ ಮೂಲಕ ಆ್ಯಪ್ ಬ್ಯಾನ್ ಮಾಡಿದೆ. ಇದೀಗ ಅಮೆರಿಕ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಚೀನಾದಿಂದ ರಫ್ತಾಗುತ್ತಿರುವ 5 ವಸ್ತುಗಳನ್ನು ಅಮೆರಿಕ ಬ್ಯಾನ್ ಮಾಡಿದೆ.

ರಾಜತಾಂತ್ರಿಕ ಹೊಡೆತ: ಚೀನಾಗೆ ಗುಡ್ ಬೈ ಹೇಳಿ ಭಾರತದ ಜೊತೆ ಕೈ ಜೋಡಿಸಿದ ಜರ್ಮನಿ!

ಚೀನಾದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿನ 5 ಉತ್ಪನ್ನಗಳಿಗೆ ಅಮೆರಿಕ ನಿಷೇಧ ಹೇರಿದೆ. ಈ ಪ್ರಾಂತ್ಯದಲ್ಲಿ ಬಲಂವತವಾಗಿ, ಜೀತಪದ್ದತಿ ಮೂಲಕ ಕಾರ್ಮಿಕರನ್ನು ಚೀನಾ ಸರ್ಕಾರ ಬಳಸಿಕೊಳ್ಳುತ್ತಿದೆ. ಕಾಟನ್, ಕಂಪ್ಯೂಟರ್ ಕಂಪೊನೆಂಟ್ಸ್, ಬಟ್ಟೆ ಸೇರಿದಂತೆ 5 ಉತ್ಪನ್ನಗಳನ್ನು ನಿಷೇಧಿಸಿದೆ. ಚೀನಾ ಕಾರ್ಮಿಕರ ಶೋಷಣೆ ಮೂಲಕ ಉತ್ಪನ್ನಗಳು ಉತ್ಪಾದಿಸುತ್ತಿದೆ. ಇದಕ್ಕಾಗಿ ಕ್ಸಿಂಜಿಯಾಂಗ್ ವಲಯದ 5 ಉತ್ಪನ್ನಗಳನ್ನು ಅಮೆರಿಕ ಬ್ಯಾನ್ ಮಾಡಿದೆ.

ಚೀನಾ ಸರ್ಕಾರವು ಅಮೆರಿಕ ಆಮದು ಮಾಡುವ ಸರಕುಗಳನ್ನು ತಯಾರಿಸಲು ಕಾರ್ಮಿಕರನ್ನು ಆದುನಿಕ ಗುಲಾಮಗಿರಿ ಮೂಲಕ ತಯಾರಿಸಾಗುತ್ತಿದೆ.  ಚೀನಾ ಈ ಸರಕುಗಳನ್ನು ನಮ್ಮ ಪೂರೈಕೆ ಸರಪಳಿಗಳಿಗೆ ಆಮದು ಮಾಡಿಕೊಳ್ಳಲು ಪ್ರಯತ್ನಿಸಿದಾಗ, ಅದು ಅಮೆರಿಕಾದ ಕಾರ್ಮಿಕರು ಮತ್ತು ವ್ಯವಹಾರಗಳಿಗೆ ಸಮಸ್ಯೆಗಳಾಗುತ್ತದೆ. ಅಮೆರಿಕ ಕಾರ್ಮಿಕರು, ಉದ್ಯಮಿಗಳಿಗೆ ನಾವು ಮೊದಲ ಆದ್ಯತೆ ನೀಡಲಿದ್ದೇವೆ ಎಂದು ಅಧ್ಯಕ್ಷ ಡೋನಾಲ್ಟ್ ಟ್ರಂಪ್ ಹೇಳಿದ್ದಾರೆ.

ವಿದೇಶಿ ಕಂಪೆನಿಗಳು  ಕಾರ್ಮಿಕರನ್ನು ಬಲವಂತವಾಗಿ ಬಳಸಿಕೊಳ್ಳುವುದವನ್ನು ಅನುಮತಿಸುವುದಿಲ್ಲ ಆದರೆ ಚೀನಾ ನಡೆಯಿಂದ  ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮಗಳನ್ನು ಗೌರವಿಸುವ ಅಮೇರಿಕ ವ್ಯವಹಾರಗಳಿಗೆ ಹಾನಿಯಾಗುತ್ತಿದೆ ಸಿಬಿಪಿ ಆಯುಕ್ತ ಮಾರ್ಕ್ ಎ. ಮೋರ್ಗಾನ್ ಹೇಳಿದ್ದಾರೆ.