ಅಮೇಜಾನ್‌ನಲ್ಲಿ ಏರ್ ಫ್ರಯರ್ ಆರ್ಡರ್ ಮಾಡಿದ ಮಹಿಳೆಗೆ ಡೆಲಿವರಿಯಾಗಿದ್ದೇ ಬೇರೆ..!
ಸೋಫಿಯಾ ಎನ್ನುವ ಮಹಿಳೆ ಅಮೇಜಾನ್ ವೆಬ್‌ಸೈಟ್‌ನಲ್ಲಿ ಏರ್ ಫ್ರಯರ್‌ಅನ್ನು ಆರ್ಡರ್ ಮಾಡಿದ್ದರು. ಆದರೆ, ಇದರ ಬಾಕ್ಸ್‌ನೊಳಗೆ ಇದ್ದಿದ್ದೇ ಬೇರೆಯಾಗಿತ್ತು. ಈ ಕುರಿತಾಗಿ ಕಂಪನಿ ಕೂಡ ತನ್ನ ಪ್ರತಿಕ್ರಿಯೆ ನೀಡಿದೆ.
ನವದೆಹಲಿ (ಜು.24): ಅಮೇಜಾನ್‌ನಲ್ಲಿ ಏರ್‌ಫ್ರಯರ್ ಆರ್ಡರ್ ಮಾಡಿದ ಮಹಿಳೆಗೆ ಡೆಲಿವರಿ ಬಾಕ್ಸ್‌ನಲ್ಲಿ ಫ್ರಯರ್ ಜೊತೆಗೆ ದೊಡ್ಡ ಹಲ್ಲಿ ಕೂಡ ಡೆಲಿವರಿಯಾಗಿದೆ. ಈ ಅಚ್ಚರಿಯ ಘಟನೆ ಕೊಲಂಬಿಯಾದಲ್ಲಿ ನಡೆದಿದ್ದು, ಮಹಿಳೆ ಈ ಕುರಿತಾಗಿ ಅಮೇಜಾನ್‌ಗೆ ದೂರು ಕೂಡ ದಾಖಲಿಸಿದ್ದಾರೆ. ಮನೆಗೆ ಬಂದ ಡೆಲಿವರಿ ಬಾಕ್ಸ್‌ಅನ್ನು ನೋಡಿದ ಆಕೆ, ಖರೀದಿ ಮಾಡಿದ ಹೊಸ ಏರ್ ಫ್ರಯರ್ ಹೇಗಿದೆ ಅನ್ನೋದನ್ನು ನೋಡುವ ಸಲುವಾಗಿ ಬಾಕ್ಸ್‌ಅನ್ನು ತೆರೆಯಲು ಆರಂಭಿಸಿದ್ದಳು. ಈ ವೇಳೆ ಏರ್‌ಫ್ರಯರ್ ಜೊತೆಗೆ ಅದೇ ಬಾಕ್ಸ್‌ನಲ್ಲಿ ಸ್ಪ್ಯಾನಿಷ್ ರಾಕ್ ಹಲ್ಲಿ ಕೂಡ ಬಾಕ್ಸ್‌ನಲ್ಲಿ ಇದ್ದವು. ತನಗೆ ಆದ ಅನುಭವವನ್ನು ಅವರು ಸೋಶಿಯ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೋಫಿಯಾ ಸೆರಾನೋ ಅನ್ನೋ ಮಹಿಳೆಗೆ ಈ ಅನುಭವವಾಗಿದ್ದು, ತಮ್ಮ ಕಥೆಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. 'ನಾನು ಅಮೇಜಾನ್ ಮೂಲಕ ಏರ್ ಫ್ರಯರ್‌ಅನ್ನು ಆರ್ಡರ್ ಮಾಡಿದೆ. ಆದರೆ, ಈ ಆರ್ಡರ್‌ನೊಂದಿಗೆ ಅದರಲ್ಲಿ ಇನ್ನೊಂದು ಪ್ರಾಣಿ ಕೂಡ ಜೊತೆಯಾಗಿತ್ತು' ಎಂದು ಬರೆದುಕೊಂಡಿದ್ದಾರೆ. ಅಡುಗೆ ಮನೆಯ ವಸ್ತುವಿನ ಜೊತೆ ಇದ್ದ ದೊಡ್ಡ ಸ್ಪ್ಯಾನಿಷ್ ರಾಕ್ ಹಲ್ಲಿ ಚಿತ್ರವನ್ನು ಕೂಡು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶಾಕಿಂಗ್ ಡೆಲಿವರಿಗೆ ಅಮೇಜಾನ್ ಕಾರಣ: ಇದರಲ್ಲಿ ತಪ್ಪು ಯಾರದು ಅನ್ನೋದೇ ಈಗ ತಿಳಿಯದಾಗಿದೆ. ಅಮೇಜಾನ್ ಕಂಪನಿಯ ತಪ್ಪೇ ಅಥವಾ ಡೆಲಿವರಿಯನ್ನು ಮನೆಗೆ ಮುಟ್ಟಿಸಿದ ಕೊರಿಯರ್ ಕ್ಯಾರಿಯರ್‌ನ ತಪ್ಪೇ ಎನ್ನುವುದು ಗೊತ್ತಾಗಿಲ್ಲ. ಅದೇನೇ ಇರಲಿ, ಆದರೆ, ಪಾರ್ಸಲ್‌ನಲ್ಲಿ ಬಂದ ಹಲ್ಲಿಯನ್ನು ಕಂಡು ಸೋಫಿಯಾ ಭಯಭೀತಳಾಗಿದ್ದು ಖಚಿತವಾಗಿತ್ತು. ಬಹುತೇಕ ಇದು ಅಮೇಜಾನ್ ಕಂಪನಿಯ ಅಜಾಗರೂಕತೆ ಆಗಿರುತ್ತದೆ. ನಾನು ಬುಕ್ ಮಾಡದ ವಸ್ತುವನ್ನು ಅವರು ಬಾಕ್ಸ್‌ನಲ್ಲ ಹಾಕಿ ಕಳಿಸಿರಬಹುದು ಎಂದು ದೂರಿದ್ದಾರೆ.
ಏರ್ ಫ್ರೈಯರ್ ಅನ್ನು ಪ್ಯಾಕ್ ಮಾಡಿದ ಬಾಕ್ಸ್‌ನಲ್ಲಿ ಹಲ್ಲಿ ಇರುವುದರಿಂದ ಇದು ಅಮೇಜಾನ್‌ನ ಬೇಜವಾಬ್ದಾರಿ ಅನ್ನೋದು ನಮಗೆ ಗೊತ್ತಾಗಿದೆ..' ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದಲ್ಲದೆ, ಬಿಗಿಯಾಗಿ ಪ್ಯಾಕ್ ಮಾಡಲಾದ ಈ ಬಾಕ್ಸ್‌ಗಳಲ್ಲಿ ಹಲ್ಲಿ ಇದ್ದ ಕಾರಣ ಅವು ಉಸಿರುಗಟ್ಟಿ ಸಾವು ಕಾಣಬಹುದು ಅಥವಾ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂದು ಹೇಳಿದ್ದಾರೆ. ಪಾರ್ಸಲ್‌ನಲ್ಲಿ ಹಲ್ಲಿ ಬಂದಿರುವುದು ಮಾತ್ರವಲ್ಲ, ಹಲ್ಲಿಯ ಬಗ್ಗೆ ತಮ್ಮ ಚಿಂತೆ ಹಾಗೂ ಕಾಳಜಿಯನ್ನು ಕೂಡ ಸೋಫಿಯಾ ವ್ಯಕ್ತಪಡಿಸಿದ್ದಾರೆ.
ಸೋಫಿಯಾ ಪೋಸ್ಟ್ ಮಾಡಿರುವ ಚಿತ್ರದಲ್ಲಿ ಕಾರ್ಡ್‌ಬೋರ್ಡ್ ಬಾಕ್ಸ್‌ನ ಒಳಗಡೆ ದೊಡ್ಡ ಹಲ್ಲಿ ಇರುವುದು ಕಂಡಿದೆ. ಜುಲೈ 16 ರಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಪೋಸ್ಟ್ ಮಾಡಿದ್ದು, ಇಲ್ಲಿಯವರೆಗೂ 1 ಮಿಲಿಯನ್‌ಗಿಂತಲೂ ಅಧಿಕ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ.
ವ್ಯಾಪಾರಸ್ಥರು ತಿಳಿಯಲೇಬೇಕಾದ ನಿಯಮ, ಅಮೆಜಾನ್ ಯಶಸ್ಸಿಗೆ ಕಾರಣವಾಯ್ತು ಎರಡು ಪಿಜ್ಜಾ ರೂಲ್ಸ್
ಈಕೆಯ ಪೋಸ್ಟ್ ವೈರಲ್ ಆದ ಬೆನ್ನಲ್ಲಿಯೇ ಅಮೇಜಾನ್ ಕೂಡ ಪ್ರತಿಕ್ರಿಯೆ ನೀಡಿದೆ. ಲಿಂಕ್‌ಅನ್ನು ನೀಡಿ, ನಿಮಗೆ ಆಗಿರುವ ಸಮಸ್ಯೆಯನ್ನು ವಿವರಿಸುವಂತೆ ತಿಳಿಸಿದ್ದಾರೆ. ಆದರೆ, ಸೋಫಿಯಾ ಮಾತ್ರ ಅಮೇಜಾನ್ ಕಂಪನಿ ನೀಡಿದ ಪರಿಹಾರದಿಂದ ನಮಗೆ ತೃಪ್ತಿಯಾಗಿಲ್ಲ ಎಂದಿದ್ದಾರೆ. ಅವರು ನೀಡಿರುವ ಏಕೈಕ ಸಲ್ಯೂಷನ್ ಏನೆಂದರೆ, ನನ್ನ ಹಣವನ್ನು ರೀಫಂಡ್ ಮಾಡುವುದಾಗಿ ಹೇಳಿದ್ದು. ಅದರೊಂದಿಗೆ ಏರ್‌ಫ್ರಯರ್‌ಅನ್ನು ರಿಟರ್ನ್ ಮಾಡುವಂತೆ ತಿಳಿಸಿದ್ದಾರೆ. ಇದು ನನಗೆ ಇಷ್ಟವಾಗಲಿಲ್ಲ' ಎಂದು ಹೇಳಿದ್ದಾರೆ.
Gullak Web Series Review: ನಮ್ಮ ಮಧ್ಯಮ ವರ್ಗದ ಬಾಲ್ಯ ನೆನಪಿಸೋ ಕಥೆ ಗುಲಕ್!