ಸಾಮಾನ್ಯವಾಗಿ ಮಗು ಹುಟ್ಟಿದಾಗ 2.5 ಕೆಜಿಯಿಂದ ಹೆಚ್ಚೆಂದರೆ 3.5 ಕೆಜಿ ತೂಕವಿರುತ್ತೆ. ಆದರೆ ಈ ತಾಯಿ ಹೆತ್ತ ಮಗುವಿನ ತೂಕ ನೋಡಿ ಖುದ್ದು ತಾಯಿಯೇ ಅಚ್ಚರಿಗೊಂಡಿದ್ದಾರೆ. ಇತ್ತ ವೈದ್ಯರೂ ಶಾಕ್ ಆಗಿದ್ದಾರೆ. ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಗರಿಷ್ಠ ತೂಕದ ಮಗು ಹುಟ್ಟಿದೆ.
ಅಲಬಾಮ(ಮಾ.10) ಹುಟ್ಟುವಿನ ಮಗುವಿನ ತೂಕ ಮಗುವಿನ ಆರೋಗ್ಯ ಸೂಚಿಸುತ್ತದೆ. ಹಾಗಂತ ಹೆಚ್ಚಾಗಬಾರದು, ಕಡಿಮೆಯೂ ಆಗಬಾರದು. ಆದರೆ ಇದೀಗ ಅಚ್ಚರಿಯೊಂದು ನಡೆದಿದೆ. ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಗರಿಷ್ಠ ತೂಕದ ಮಗುವಿನ ಜನನವಾಗಿದೆ. ಮಗುವನ್ನು ಹೆತ್ತ ತಾಯಿ ಕೂಡ ಶಾಕ್ ಆಗಿದ್ದಾರೆ. ಇತ್ತ ವೈದ್ಯರು ಮಾತ್ರವಲ್ಲ ವೈದ್ಯ ಲೋಕವೇ ಅಚ್ಚರಿಗೀಡಾಗಿದೆ. ಹೌದು, ಅಮೆರಿಕದ ಅಲಬಾಮದ ತಾಯಿಯೊಬ್ಬರು ಹೆತ್ತ ಮಗುವಿನ ತೂಕ ಬರೋಬ್ಬರಿ 13 ಪೌಂಡ್. ಅದರೆ ಸರಿಸುಮಾರು 6 ಕೆ.ಜಿ. ಸಾಮಾನ್ಯವಾಗಿ 6 ಕೆಜಿ ತೂಕ ಬರಲು ಹುಟ್ಟಿದ ಮಗು ಕನಿಷ್ಠ 6 ತಿಂಗಳು ಆಗಿರಬೇಕು.
ಅಲಾಬಮಾದ ಆಸ್ಪತ್ರೆಯೊಂದರಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಸಮಯದಲ್ಲಿ ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಕೂಡಾ ಬೆಚ್ಚಿಬಿದ್ದಿದ್ದಾರೆ. ಬರ್ಮಿಂಗ್‌ಹ್ಯಾಮ್‌ನ ಡೆಲಿವರಿ ಡ್ರೈವರ್ ಪಮೇಲಾ ಮೈನ್ ಮಂಗಳವಾರ ಸಿಸೇರಿಯನ್ ಮೂಲಕ ಮಗಳು ಪ್ಯಾರಿಸ್ ಹಲೋಗೆ ಜನ್ಮ ನೀಡಿದರು. ಅಲಾಬಮಾ ಗ್ರ್ಯಾಂಡ್ ವ್ಯೂ ವೈದ್ಯಕೀಯ ಕೇಂದ್ರದಲ್ಲಿ ಪಮೇಲಾ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಆಗಮನವಾಗುತ್ತಿದ್ದಂತೆ ಹೆರಿಗೆ ಕೋಣೆಯಲ್ಲಿದ್ದವರೆಲ್ಲಾ ಆಶ್ಚರ್ಯಚಕಿತರಾಗಿದ್ದಾರೆ. ಆ ಸಮಯದಲ್ಲಿ ನರ್ಸ್ ಇದೇನಿದು ದೇವರೇ ಎಂದರು ಅಚ್ಚರಿಗೊಂಡಿದ್ದಾರೆ ಎಂದು ಪಮೇಲಾ ಹೇಳಿದ್ದಾರೆ. ಅವರ ಜೊತೆಗೆ ತಾನೂ ಸಹಾ ಶಾಕ್ ಆದೆ ಎಂದು ಪಮೇಲಾ ಹೇಳಿದ್ದಾರೆ.
ಹೊಟ್ಟೆ ನೋವೆಂದು ತಾಯಿ ಜೊತೆ ಆಸ್ಪತ್ರೆ ತೆರಳುವ ರಸ್ತೆ ಮಧ್ಯೆ ಮಗುವಿಗೆ ಜನ್ಮವಿತ್ತ 14ರ ಬಾಲೆ!
13 ಪೌಂಡ್‌ಗಿಂತಲೂ ಹೆಚ್ಚು ತೂಕವಿತ್ತು. ಸಾಮಾನ್ಯವಾಗಿ ಆರೋಗ್ಯವಂತ ಮಗು ಜನಿಸಿದಾಗ ಮೂರು-ಮೂರುವರೆ ಕೆ.ಜಿ ತೂಕವಿರುತ್ತದೆ. ಮಗುವಿನ ಜನನಕ್ಕೆ ನಾಲ್ಕು ವಾರಗಳ ಮೊದಲು ಮಾಡಿದ ಸ್ಕ್ಯಾನ್‌ನಲ್ಲಿ ಮಗುವಿನ ತೂಕ 8 ಪೌಂಡ್ ಇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ನಂತರದ ಮೌಲ್ಯಮಾಪನದಲ್ಲಿ ಮಗುವಿನ ತೂಕ 10 ಪೌಂಡ್ ಇರಬಹುದೆಂದು ಕಂಡುಹಿಡಿಯಲಾಯಿತು. ಆದರೆ, ಎರಡು ಬಾರಿ ಹೇಳಿದ್ದ ತೂಕಕ್ಕಿಂತಲೂ ಹೆಚ್ಚು ಮಗು ತೂಕವಿತ್ತು ಎಂದು ಪಮೇಲಾ ಹೇಳುತ್ತಾರೆ.
ಆಸ್ಪತ್ರೆಯ ದಾದಿಯರು ಮಗುವನ್ನು ನೋಡಲು ಆಗಾಗ ಬರುತ್ತಿದ್ದರು, ಹುಟ್ಟಿದ ಮೂರು ದಿನಗಳಲ್ಲಿಯೇ ಅವಳು ಅಲ್ಲಿ ಫೇಮಸ್ ಆದಳು ಎಂದು ಪಮೇಲಾ ಹೇಳುತ್ತಾರೆ. ಅದೇ ಸಮಯದಲ್ಲಿ, ಮಗುವಿಗೆ ಹುಟ್ಟುವಾಗ ಅಸಾಮಾನ್ಯ ತೂಕ ಇರಲು ಕಾರಣವೇನು ಎಂಬುದು ತಿಳಿದಿಲ್ಲ ಎಂದು ಪಮೇಲಾ ಹೇಳುತ್ತಾರೆ. ನಿರೀಕ್ಷೆಗಿಂತ 16 ದಿನ ಮುಂಚಿತವಾಗಿ ಪಮೇಲಾ ಮಗುವಿಗೆ ಜನ್ಮ ನೀಡಿದರು.
Water birthing: ಭಾರತದಲ್ಲಿ ಜನಪ್ರಿಯವಾಗುತ್ತಿರುವ ನವೀನ ಹೆರಿಗೆ ವಿಧಾನ, ವಾಟರ್ ಬರ್ತಿಂಗ್ ಅನುಕೂಲ, ಅಪಾಯಗಳೇನು?
