ಮುಷರಫ್ ಚೇತರಿಕೆ ಕ್ಷೀಣ: ಆ್ಯಂಬುಲೆನ್ಸಲ್ಲಿ ಪಾಕ್‌ಗೆ ತರುವ ಸಾಧ್ಯತೆ
ಸದ್ಯ ದುಬೈ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ, ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ (78) ಆರೋಗ್ಯದಲ್ಲಿ ಚೇತರಿಕೆ ಕಂಡುಬರುವ ಸಾಧ್ಯತೆ ಮತ್ತಷ್ಟು ಕ್ಷೀಣಿಸಿದೆ ಎನ್ನಲಾಗಿದೆ. ಹೀಗಾಗಿ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ಪಾಕಿಸ್ತಾನಕ್ಕೆ ಕರೆತರಲು ಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಲಾಹೋರ್ (ಜೂ.15): ಸದ್ಯ ದುಬೈ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ, ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ (78) ಆರೋಗ್ಯದಲ್ಲಿ ಚೇತರಿಕೆ ಕಂಡುಬರುವ ಸಾಧ್ಯತೆ ಮತ್ತಷ್ಟು ಕ್ಷೀಣಿಸಿದೆ ಎನ್ನಲಾಗಿದೆ. ಹೀಗಾಗಿ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ಪಾಕಿಸ್ತಾನಕ್ಕೆ ಕರೆತರಲು ಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಮುಷರ್ರಫ್, ಈ ಹಿಂದೆ ದೇಶದ ಸೇನೆಯ ಮುಖ್ಯಸ್ಥರಾಗಿದ್ದ ಹಿನ್ನೆಲೆಯಲ್ಲಿ ಈಗಲೂ ಅವರ ಬೆಂಬಲಕ್ಕೆ ಸೇನೆ ನಿಂತಿದ್ದು, ಅವರಿಗೆ ಗೌರವಯುತ ಬೀಳ್ಕೊಡುಗೆ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಮುಷರ್ರಫ್‌ಗೆ ಪಾಕ್ ಕೋರ್ಟ್ ಪ್ರಕರಣವೊಂದಲ್ಲಿ ಗಲ್ಲು ಶಿಕ್ಷೆ ವಿಧಿಸಿದೆ.
ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ, ಸುದ್ದಿ ವೈರಲ್
ಪಾಕ್ ಮಾಜಿ ಅಧ್ಯಕ್ಷಗೆ ಬಹು ಅಂಗಾಂಗ ವೈಫಲ್ಯ: ಪಾಕಿಸ್ತಾನದ ಪದಚ್ಯುತ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರ ಸ್ಥಿತಿ ಗಂಭೀರವಾಗಿದ್ದು, ಯುಎಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಅವರ ಆರೋಗ್ಯ ಅತ್ಯಂತ ವಿಷಮ ಸ್ಥಿತಿಯಲ್ಲಿದ್ದು, ಬದುಕಿ ಉಳಿಯುವ ಸಾಧ್ಯತೆ ತುಂಬಾ ಕ್ಷೀಣ’ ಎಂದು ಅವರ ಕುಟುಂಬದವರೇ ಹೇಳಿದೆ. ಮುಷರ್ರಫ್ ದೇಹಸ್ಥಿತಿ ಬಗ್ಗೆ ಶುಕ್ರವಾರ ಸಂಜೆ ನಾನಾ ಪುಕಾರುಗಳು ಎದ್ದಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರ ಕುಟುಂಬ ‘ಅಂಗಾಂಗಗಳನ್ನು ಬಾಧಿಸುವ ‘ಅಮಿಲಾಯ್ಡೊಸಿಸ್’ ಎಂಬ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ.
ಕಳೆದ 3 ವಾರದಿಂದ ಅವರು ಆಸ್ಪತ್ರೆಯಲ್ಲಿದ್ದಾರೆ. ಆದರೆ ಈಗ ಅವರು ಚೇತರಿಸಿಕೊಳ್ಳಲು ಆಗದಂಥ ಸ್ಥಿತಿಗೆ ತಲುಪಿದ್ದಾರೆ. ಅವರ ಅಂಗಾಂಗಗಳು ವಿಫಲಗೊಳ್ಳುತ್ತಿವೆ. ಅವರಿಗಾಗಿ ಪ್ರಾರ್ಥಿಸಿ’ ಎಂದು ಟ್ವೀಟರ್‌ನಲ್ಲಿ ಕೇಳಿಕೊಂಡಿದೆ. ಆದರೆ, ‘ಮುಷರ್ರಫ್ ವೆಂಟಿಲೇಟರ್‌ನಲ್ಲಿ ಇಲ್ಲ’ ಎಂದು ಕುಟುಂಬ ಸ್ಪಷ್ಟಪಡಿಸಿದೆ. ಅಮಿಲಾಯ್ಡೊಸಿಸ್ ಎಂಬುದು ಅಪರೂಪದ ಕಾಯಿಲೆ ಆಗಿದ್ದು, ದೇಹದ ಅಂಗಾಗಂಗಳಲ್ಲಿ ಅಸಾಮಾನ್ಯ ರೀತಿಯಲ್ಲಿ ಪ್ರೊಟೀನ್‌ಗಳು ಸೃಷ್ಟಿಆಗುತ್ತವೆ ಹಾಗೂ ಅಂಗಾಂಗ ವೈಫಲ್ಯ ಸಂಭವಿಸುತ್ತದೆ.
ಪಾಕ್ ಮಾಜಿ ಅಧ್ಯಕ್ಷರನ್ನು ಭೇಟಿಯಾದ 'KGF-2' ನಟ ಸಂಜಯ್ ದತ್; ಫೋಟೋ ವೈರಲ್
ಇದಕ್ಕೂ ಮುನ್ನ ಮಾತನಾಡಿದ್ದ ಪಾಕ್ ವಾರ್ತಾ ಸಚಿವ ಫವಾದ್ ಚೌಧರಿ, ‘ಮುಷರ್ರಫ್ ವೆಂಟಿಲೇಟರ್‌ನಲ್ಲಿದ್ದಾರೆ’ ಎಂದಿದ್ದರು. ನವಾಜ್ ಷರೀಫ್‌ರನ್ನು 1999ರಲ್ಲಿ ಕ್ಷಿಪ್ರಕ್ರಾಂತಿ ಮೂಲಕ ಕೆಳಗಿಳಿಸಿ, ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಮುಷರ್ರಫ್ ಅವರು ಪಾಕ್ ಅಧ್ಯಕ್ಷರಾಗಿದ್ದರು. 1999ರಿಂದ 2008ರವರೆಗೆ ಪಾಕಿಸ್ತಾನ ಆಳಿದ್ದ ಮುಷರ್ರಫ್, ಪಾಕ್‌ನಲ್ಲಿ ದೇಶದ್ರೋಹ ಪ್ರಕರಣ ಎದುರಿಸುತ್ತಿದ್ದು, ದೇಶ ತೊರೆದು 2016ರಿಂದ ಯುಎಇನಲ್ಲಿ ವಾಸವಿದ್ದಾರೆ.