Asianet Suvarna News Asianet Suvarna News

ಮಾಧ್ಯಮ ಕ್ಷೇತ್ರಕ್ಕೆ ನುಗ್ಗಿದ AI ತಂತ್ರಜ್ಞಾನ, ಶೇ.20ರಷ್ಟು ಉದ್ಯೋಗಿಗಳ ವಜಾ ಮಾಡಿದ ಪತ್ರಿಕಾ ಸಂಸ್ಥೆ!

ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನ ಬಂದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಅಪಾಯ ಹೆಚ್ಚು ಎನ್ನುವ ಸುದ್ದಿ ನಿಜವಾಗಿದೆ. ಪ್ರಸಿಇದ್ಧ ಪತ್ರಿಕಾಸಂಸ್ಥೆ ತನ್ನ ಶೇ.20ರಷ್ಟು ವರ್ಕ್‌ಫೋರ್ಸ್‌ಅನ್ನು ವಜಾ ಮಾಡುವ ನಿರ್ಧಾರ ಮಾಡಿದ್ದು ಅವರ ಬದಲಿಗೆ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳುವುದಾಗಿ ಘೋಷಣೆ ಮಾಡಿದೆ.

AI technology Enters news organization fires 20 per cent of its workforce replaces editors photo editors san
Author
First Published Jun 23, 2023, 3:45 PM IST

ಬರ್ಲಿನ್‌ (ಜೂ.23): ಜಾಗತಿಕವಾಗಿ ಮುನ್ನಲೆಗೆ ಬಂದಿರುವ ಚಾಟ್‌ ಜಿಪಿಟಿ, ಎಐ ತಂತ್ರಜ್ಞಾನದ ಟೂಲ್‌ಗಳಿಂದಾಗಿ ಬರಹಗಾರರು, ಸಂಪಾದಕರು ಹಾಗೂ ಡಿಸೈನರ್‌ಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನುವ ಭಯ ನಿಜವಾಗಿದೆ. ಜರ್ಮನಿ ದೇಶದ ಪ್ರಮುಖ ಪತ್ರಿಕೆಯೊಂದು ತನ್ನ ಬರಹಗಾರರು, ಎಡಿಟರ್‌ಗಳು ಹಾಗೂ ವಿನ್ಯಾಸಕರನ್ನು ವಜಾ ಮಾಡಲು ನಿರ್ಧರಿಸಿದೆ. ಅವರ ಸ್ಥಾನಗಳಲ್ಲಿ ಎಐ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದೆ. ಜರ್ಮನಿಯ ಪ್ರತಿಷ್ಠಿತ ಪತ್ರಿಕಾ ಸಂಸ್ಥೆ, ತನ್ನ ವರ್ಕ್‌ಫೋರ್ಸ್‌ನ ಶೇ. 20ರಷ್ಟು ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಈಗಾಗಲೇ ನೋಟಿಸ್‌ಗಳನ್ನು ನೀಡಿದೆ. ನ್ಯೂಸ್‌ರೂಮ್‌ನ ಬಲವನ್ನು ಕಡಿಮೆ ಮಾಡಲು ಕಂಪನಿ ನಿರ್ಧಾರ ಮಾಡಿದ್ದು, ಅವರ ಬದಲು ಅದೇ ಕೆಲಸಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಾಗಿ ತಿಳಿಸಿದೆ. ಜರ್ಮನಿಯ ಪ್ರಮುಖ ಮಾಧ್ಯಮ ಕಂಪನಿಯಾದ ಆಕ್ಸೆಲ್ ಸ್ಪ್ರಿಂಗರ್ ತನ್ನ ನ್ಯೂಸ್‌ರೂಮ್ ಸಿಬ್ಬಂದಿಯ ಶೇ,20ರಷ್ಟು ವಜಾಗೊಳಿಸುವ ನಿರ್ಧಾರ ಮಾಡಿದೆ. ಅವರ ಬದಲು ಅದೇ ಸ್ಥಾನಕ್ಕೆ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಾಗಿ ತಿಳಿಸಿದೆ.

ಸಿಎನ್‌ಎನ್ ವರದಿ ಮಾಡಿರುವಂತೆ ಎಲೋನ್ ಮಸ್ಕ್‌ನ ಸ್ನೇಹಿತರಾಗಿರುವ ಕಂಪನಿಯ ಸಿಇಒ, ಮಥಿಯಾಸ್ ಡೊಪ್ಫ್ನರ್, ಕೇವಲ ಡಿಜಿಟಲ್‌ ಎನ್ನುವ ವಿಧಾನದ ಕಡೆಗೆ ಬದಲಾವಣೆಯನ್ನು ಪ್ರಾರಂಭಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಸಂಸ್ಥೆ ಮೆಮೊಅನ್ನೂ ಬಿಡುಗಡೆ ಮಾಡಿದ್ದು, ಸಂಪಾದಕರು, ಫೋಟೋ ಎಡಿಟರ್‌, ಪ್ರೂಫ್ ರೀಡರ್‌ಗಳು ಮತ್ತು ಮುದ್ರಣ ಉತ್ಪಾದನೆಯಲ್ಲಿ ಒಳಗೊಂಡಿರುವ ಇತರ ಕೆಲಸಗಾರರನ್ನು ಹೊರಹಾಕುವ ನಿರ್ಧಾರ ಮಾಡಿದೆ. ಈ ಕ್ರಮವು ಯುರೋಪ್‌ನಲ್ಲಿ ಹೆಚ್ಚು ಮಾರಾಟವಾಗುವ ಪತ್ರಿಕೆಗಳಲ್ಲಿ ಒಂದಾದ ಬಿಲ್ಡ್ ಮೇಲೆ ವಿಶೇಷವಾಗಿ ಪರಿಣಾಮ ಬೀರುತ್ತದೆ.

ಜರ್ಮಿನಿಯ ಸಾಕಷ್ಟು ಮಲ್ಟಿಮೀಡಿಯಾ ನ್ಯೂಸ್‌ ಬ್ರ್ಯಾಂಡ್‌ಗಳಾದ ಜರ್ಮನ್‌ ಭಾಷೆಯ ಪಬ್ಲಿಕೇಶನ್‌ ಬಿಲ್ಡ್‌ ಮತ್ತು ವೆಲ್ಟ್‌, ಅದರೊಂದಿಗೆ ಅಮೆರಿಕದ ನ್ಯೂಸ್ ಸೈಟ್‌ಗಳಾದ ಪೊಲಿಟಿಕೋ ಹಾಗೂ ಇನ್‌ಸೈಡರ್‌ ಪತ್ರಿಕೆಗಳಿಗೆ ಆಕ್ಸೆಲ್ ಸ್ಪ್ರಿಂಗರ್ ಮಾತೃಸಂಸ್ಥೆಯಾಗಿದೆ.  ಜರ್ಮನ್ ವೃತ್ತಪತ್ರಿಕೆ ಫ್ರಾಂಕ್‌ಫರ್ಟರ್ ಆಲ್‌ಗೆಮೈನ್ (ಎಫ್‌ಎಝಡ್‌) ವರದಿ ಮಾಡಿದಂತೆ, ಆಕ್ಸೆಲ್ ಸ್ಪ್ರಿಂಗರ್ ತನ್ನ ಉದ್ಯೋಗಿಗಳಿಗೆ ಈಗಾಗಲೇ ನೋಟಿಸ್‌ಗಳನ್ನು ನೀಡಿದ್ದು, ಅವರು ಮಾಡಬಹುದಾದ ಕೆಲಸಗಳನ್ನು ಚಾಟ್‌ ಜಿಪಿಟಿಯಂಥ ಎಐ ಪರಿಕರಗಳ ಮೂಲಕ ನಿರ್ವಹಿಸಬಹುದು ಎಂದು ತಿಳಿಸಿದೆ. ಹಾಗಾಗಿ ಉದ್ಯೋಗದಿಂದ ವಜಾ ಮಾಡುತ್ತಿರುವುದಾಗಿ ಪ್ರಕಟಿಸಿದೆ.

ಇದರಿಂದಾಗಿ ಜರ್ಮನಿ ಭಾಷೆಯ ಪ್ರಸಿದ್ಧ ಪತ್ರಿಕೆಗಳಲ್ಲಿ ಒಂದಾದ ಬಿಲ್ಡ್‌ನಲ್ಲಿ ಕನಿಷ್ಠ 200 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಪ್ರಸ್ತುತ ಬಿಲ್ಡ್‌ನಲ್ಲಿ 1 ಸಸಾವಿರ ಮಂದಿ ಉದ್ಯೋಗದಲ್ಲಿದ್ದಾರೆ. ಆದರೆ, ಬಿಲ್ಡ್‌ ಪತ್ರಿಕೆಯ ವಕ್ತಾರ ಇದನ್ನು ನಿರಾಕರಿಸಿದ್ದು, ನೇರವಾಗಿ ಎಐ ಕಾರಣದಿಂದಾಗಿ ಇವರುಗಳು ಕೆಲಸ ಕಳೆದುಕೊಳ್ಳುತ್ತಿಲ್ಲ. ಎಡಿಟರ್‌ಗಳು ಹಾಗೂ ರಿಪೋರ್ಟರ್‌ಗಳಿಗೆ ಚಾಟ್‌ ಜಿಪಿಟಿಯಂಥ ಎಐ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲಿದ್ದಾರೆ ಎಂದಿದ್ದಾರೆ.

ಭಾರತದಿಂದ ChatGPTಗೆ ಪ್ರತಿಸ್ಪರ್ಧೆ ಸಾಧ್ಯವಿಲ್ಲ, AI ಸಂಸ್ಥಾಪಕನ ಸವಾಲು ಸ್ವೀಕರಿಸಿದ ಟೆಕ್ ಮಹೀಂದ್ರ!

ಆದರೆ, ಇತ್ತೀಚೆಗೆ ನೀಡಿದ ನೋಟಿಸ್‌ನಲ್ಲಿ, ಸಿಇಒ ಮಥಿಯಾಸ್ ಡಾಪ್ಫ್ನರ್ ಅವರು ಸ್ವತಂತ್ರ ಪತ್ರಿಕೋದ್ಯಮವನ್ನು ವರ್ಧಿಸುವ ಸಾಮರ್ಥ್ಯವನ್ನು ಎಐ ತಂತ್ರಜ್ಞಾನ ಹೊಂದಿದೆ ಎಂದು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಪತ್ರಿಕೋದ್ಯಮವನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಮಾಡುತ್ತದದೆ ಎಂದಿದ್ದಾರೆ. ಪ್ರಕಾಶನ ಸಂಸ್ಥೆಗಳ ಭವಿಷ್ಯದ ಸುಸ್ಥಿರತೆಗಾಗಿ ಈ ಹೊಸ ಬದಲಾವಣೆಯನ್ನು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು. ಅತ್ಯುತ್ತಮ ರೀತಿಯಲ್ಲಿ ವಿಷಯವನ್ನು ಹಾಗೂ ವಿಚಾರಗಳನ್ನು ಪ್ರಸ್ತುತಿ ಮಾಡುವವವರು ಮಾತ್ರವೇ ಅಭಿವೃದ್ಧಿ ಕಾಣುತ್ತಾರೆ. ಭವಿಷ್ಯದ ದಿನಗಳಲ್ಲಿ ಎಐ ತಂತ್ರಜ್ಞಾನ, ಒಂದು ಪತ್ರಿಕೆಯೊಂದರ ಸಂಪೂರ್ಣ ವಿನ್ಯಾಸವನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂದಿದ್ದಾರೆ.

ಚಾಟ್ ಜಿಪಿಟಿ ಬಗ್ಗೆ ತರಗತಿ ನೀಡಿ 3 ತಿಂಗಳಲ್ಲಿ 28 ಲಕ್ಷ ಹಣ ಗಳಿಸಿದ 23 ವರ್ಷದ ಯುವಕ

Follow Us:
Download App:
  • android
  • ios