ವಿಮಾನ ಪತನದಲ್ಲೂ ಬದುಕುಳಿದ ಮಕ್ಕಳು, ಅಮೆಜಾನ್ ಕಾಡಿನಲ್ಲಿ 17 ದಿನದ ಬಳಿಕ ಪವಾಡ..!
ಆಯುಷ್ಯ ಗಟ್ಟಿಯಾಗಿದ್ರೆ ಮನುಷ್ಯ ಬೆಂಕಿಗೆ ಬಿದ್ದರೂ ಬದುಕುಳಿಯುತ್ತಾನೆ ಅನ್ನೋ ಮಾತಿದೆ. ಈ ಘಟನೆ ಓದಿದ್ರೆ ಅದು ನಿಜ ಅನ್ನಿಸದೇ ಇರದು.
ಈ ಕಥೆ ನಿಮ್ಮನ್ನು ಹಾಲಿವುಡ್ ಸಿನಿಮಾ ನೆನಪಿಸಿದ್ರೂ ಅಚ್ಚರಿ ಇಲ್ಲ. ಇದು ನಡೆದಿರೋದು ಅಮೆಜಾನ್ ಕಾಡಿನಲ್ಲಿ. ನಿಮಗೆ ಗೊತ್ತೇ ಇದೆ, ಕೊಲಂಬಿಯಾದ ಅಮೆಜಾನ್ ದಟ್ಟಾರಣ್ಯ ಅಷ್ಟು ಅಪಾಯಕಾರಿ ಅಂತ. ಅಮೆಜಾನ್ ಕಾಡಿನಲ್ಲಿ ನಾಪತ್ತೆಯಾದವರು ಬದುಕುಳಿದು ಬಂದ ಉದಾಹರಣೆ ಕಡಿಮೆಯೇ. ಅಂಥ ಅಮೆಜಾನ್ ಕಾಡಿನಲ್ಲಿ ಪವಾಡಸದೃಶ ಘಟನೆಯೊಂದು ನಡೆದಿದೆ. ರೊನಾಕ್ಯು ಮುಕುಟುಯಿ ಎಂಬ ಮಹಿಳೆ ತನ್ನ ನಾಲ್ವರು ಮಕ್ಕಳನ್ನು ಕರೆದುಕೊಂಡು ಸೆಸ್ನಾ 206 ಲಘು ವಿಮಾನ ಹತ್ತಿದ್ರು. ಅಮೆಜಾನಸ್ ಪ್ರಾಂತ್ಯದ ಅರಾರಕುವರಾದಿಂದ ಗುವಿಯಾರ್ ಪ್ರಾಂತ್ಯದ ಸಾನ್ ಜೋಸ್ ಡೆಲ್ ಗುವಿಯಾರ್ ನಗರದ ಕಡೆಗೆ ತೆರಳುತ್ತಿದ್ದ ವಿಮಾನ, ಮೇ 1 ರ ಮುಂಜಾನೆ.
ಅಮೆಜಾನ್ ದಟ್ಟಾರಣ್ಯದಲ್ಲಿ ನಾಪತ್ತೆಯಾಗಿತ್ತು. ತೀವ್ರ ಶೋಧದ ಬಳಿಕ ವಿಮಾನದ ಪೈಲಟ್, ಕೋ- ಪೈಲಟ್, ಮಕ್ಕಳ ತಾಯಿಯ ಮೃತದೇಹ ಅರಣ್ಯ ಪ್ರದೇಶವೊಂದರಲ್ಲಿ ಸಿಕ್ಕಿತ್ತು. ಆದ್ರೆ, ವಿಮಾನದಲ್ಲಿದ್ದ 11 ತಿಂಗಳ ಮಗು ಸೇರಿದಂತೆ ನಾಲ್ಕು ಮಕ್ಕಳ ಪತ್ತೆಯೇ ಇರಲಿಲ್ಲ. ಮಕ್ಕಳಿಗಾಗಿ ಎರಡು ವಾರಗಳ ಹಿಂದೆ ಕೊಲಂಬಿಯಾ ಮಿಲಿಟರಿ , ಶೋಧ ಕಾರ್ಯಕ್ಕೆ ಇಳಿದಿತ್ತು. ಸೇನೆಯ ಅತ್ಯಂತ ಸವಾಲಿನ ಹಾಗೂ ಕ್ಲಿಷ್ಟಕರವಾದ ಕಾರ್ಯಾಚರಣೆಯ ಬಳಿಕ ನಾಲ್ವರು ಮಕ್ಕಳು ಸಿಕ್ಕಿದ್ದಾರೆ ಅಂತ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ 13, 9 ಮತ್ತು 4 ವರ್ಷದ ಮಕ್ಕಳು 11 ತಿಂಗಳು ಮಗುವನ್ನು ಪತ್ತೆ ಹಚ್ಚಲು ಸ್ನಿಫರ್ ಶ್ವಾನ ಪಡೆಯ ಜತೆಗೆ ನೂರಕ್ಕೂ ಹೆಚ್ಚು ಸೈನಿಕರು ಅರಣ್ಯವನ್ನು ಜಾಲಾಡಿದ್ದರು. ಈ ಭೀಕರ ಅಪಘಾತದ ಬಳಿಕ ಮೂವರು ಮಕ್ಕಳು, ಪುಟ್ಟ ಕಂದಮ್ಮನನ್ನು ಎತ್ತಿಕೊಂಡು, ಕಾಕ್ವೆಟಾ ವಿಭಾಗದ ಕಾಡಿನಲ್ಲಿ ಅಲೆದಾಡಿರುವುದು ಸೇನೆಯ ಗಮನಕ್ಕೆ ಬಂದಿತ್ತು. ವಿಮಾನ ಬಿದ್ದ ಸ್ಥಳದಲ್ಲಿ ಕತ್ತರಿ, ಶೂಗಳು, ಮಗುವಿನ ಹಾಲು ಕುಡಿಯುವ ಬಾಟಲಿ, ಅರ್ಧ ತಿಂದು ಬಿಟ್ಟ ಕೊಳೆತ ಹಣ್ಣುಗಳು ಸಿಕ್ಕಿದ್ದವು. ಆದರೆ, ಈ ಮಕ್ಕಳನ್ನು ಎಲ್ಲಿ, ಹೇಗೆ ರಕ್ಷಿಸಲಾಯ್ತು? ಅಥವಾ ಮಕ್ಕಳು ಅರಣ್ಯದಲ್ಲಿ ಹೇಗೆ ಜೀವ ಉಳಿಸಿಕೊಂಡಿದ್ದರು ಎಂಬ ಬಗ್ಗೆ ಅಧ್ಯಕ್ಷ ಪೆಟ್ರೋ ಯಾವುದೇ ಮಾಹಿತಿ ನೀಡಿಲ್ಲ.
ನಾಲ್ಕು ಮಕ್ಕಳು ಸಜೀವ ಪತ್ತೆಯಾಗಿದ್ದು, ಅವರನ್ನು ನದಿ ತೀರದಿಂದ ದೋಣಿಯಲ್ಲಿ ಸ್ಥಳಾಂತರ ಮಾಡಲಾಗುತ್ತಿದೆ ಮತ್ತು ಅವರೆಲ್ಲರೂ ಜೀವಂತವಾಗಿದ್ದಾರೆಂದು ಕಾರ್ಯಾಚರಣೆಯಲ್ಲಿದ್ದ ಪೈಲಟ್ ಒಬ್ಬರು ತಿಳಿಸಿದ್ದಾರೆ.
17 ಮಿಸ್ಡ್ ಕಾಲ್ ಮಿಸ್ ಮಾಡಿಕೊಂಡ್ಲು ಮಗಳು, ಮತ್ತೆ ಕರೆ ಮಾಡಿದಾಗ ಅಮ್ಮ ಹೆಣವಾಗಿದ್ಲು!
ಅಮೆಜಾನ್ ಪ್ರದೇಶದಲ್ಲಿ ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗುತ್ತಿರುವುದರಿಂದ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವುದು ಕಷ್ಟ ಎಂದೇ ಹೇಳಲಾಗುತ್ತಿದೆ. ತಾಯಿ ಕಳೆದು ಕೊಂಡ ಮಕ್ಕಳು ಸುಕ್ಷಿತವಾಗಿ ಬರಲೆಂದು ಕೊಲಂಬಿಯಾ ಜನತೆ ಪ್ರಾರ್ಥಿಸುತ್ತಿದ್ದಾರೆ. ಅವರ ಪ್ರಾರ್ಥನೆ ಫಲಿಸಲಿ..
ಡೈವೋರ್ಸ್ ಫೋಟೋಶೂಟ್ ಮಾಡಿದ ಶಾಲಿನಿಯ ನರಕದ ಬದುಕು