Asianet Suvarna News Asianet Suvarna News

2 ವರ್ಷ ಕಾದು, ಶ್ರವಣ ದೋಷ ಇರೋ ಭಾರತೀಯ ಮಗುವನ್ನು ದತ್ತು ಪಡೆದ ಅಮೆರಿಕನ್ ದಂಪತಿ

ಇದಕ್ಕೆ ಋಣಾನುಬಂಧ ಅನ್ನುವುದೋ, ಏನೋ ಗೊತ್ತಿಲ್ಲ. ನಮಗೇ ಹುಟ್ಟುವ ಮಗುವಾದರೂ ಆರೋಗ್ಯವಾಗಿರಲಿ ಅಂತ ಬಯಸುತ್ತೇವೆ. ಅಂಥದ್ರಲ್ಲಿ ದತ್ತು ಪಡೆಯೋ ಮಗುವಿನ ಆರೋಗ್ಯವನ್ನು ನೋಡಿಯೇ ನೋಡುತ್ತಾರೆ. ಆದರೆ, ಈ ಅಮೆರಿಕನ್ ಜೋಡಿ ಶ್ರವಣ ದೋಷ ಇರೋ ಭಾರತೀಯ ಮಗುವನ್ನು ದತ್ತು ಪಡೆದಿದ್ದಾರೆ!

After a wait of more than two years US couple adopts Indian girl akb
Author
Bangalore, First Published Jan 26, 2022, 3:14 PM IST

ನ್ಯೂಯಾರ್ಕ್‌(ಜ. 26): ಎಲ್ಲೋ ಹುಟ್ಟುವ ಮಗು ಎಲ್ಲೋ ಬೆಳೆಯುತ್ತದೆ . ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳಿಗೆ ಕಾರಣಗಳೇ ಸಿಗುವುದಿಲ್ಲ. ಸಂಬಂಧವೇ ಇಲ್ಲದ ಅಪರಿಚಿತರು ಬಂದು ನಮ್ಮ ಬದುಕಿನ ದೊಡ್ಡ ಭಾಗವಾಗಿ ಬಿಡುತ್ತಾರೆ. ಹಾಗೆಯೇ ಈಗ ಅಮೆರಿಕಾದ ಜೋಡಿಯೊಂದು ತಮಗೆ ಈಗಾಗಲೇ ಒಂದು ಮಗುವಿದ್ದರೂ ಕೂಡ ಹಲವು ಅಡೆತಡೆಗಳನ್ನು ಮೀರಿ ಇನ್ನೊಂದು ಮಗುವನ್ನು ದತ್ತು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು ಅಮೆರಿಕಾದ ಶೇನ್​ ಮೈಕೆಲ್ ​ಮೈಲಿಯಸ್​ ( Shane Michael Mylius)ಮತ್ತು ಜೊಹೊನ್ನಾ ಜೋ ಮೈಲಿಯಸ್ (Johonna Jo Mylius) ದಂಪತಿ ಹೀಗೆ ಭಾರತದ ಮಗುವನ್ನು ದತ್ತು ಪಡೆದ ಜೋಡಿ, ಇವರಿಗೆ ಈಗಾಗಲೇ ಒಂದು ಮಗುವಿದೆ. ಈ ದಂಪತಿ ತಮ್ಮ ಮೊದಲ ಮಗಳು ಕೈಲಾ (Kaila) ಹುಟ್ಟಿದ ನಂತರ ಎರಡನೇ ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸಿದ್ದರು. ಅವರ ಈ ಮಗುವಿನ  ಹುಡುಕಾಟವು ಅವರನ್ನು ಭಾರತದವರೆಗೂ ಕರೆತಂದಿತು.  

Sushmita Sen Adopts Baby Boy: ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಬೆನ್ನಲ್ಲೇ 3ನೇ ಮಗುವನ್ನು ದತ್ತು ಪಡೆದ ನಟಿ

ಮತ್ತೊಂದು ಮಗು ದತ್ತು ಪಡೆಯಲು ಮುಂದಾದ ಇವರು  ಹಲವು ಅಡ್ಡಿ ಆತಂಕಗಳನ್ನು ಎದುರಿಸಿದರು. ಸುಮಾರು ಎರಡು ವರ್ಷಗಳವರೆಗೆ ಕಾದು ಭಾರತ ಮೂಲದ ಮಗುವೊಂದನ್ನು ದತ್ತು ಪಡೆಯುವಲ್ಲಿ ಕೊನೆಗೂ ಇವರು ಯಶಸ್ವಿಯಾಗಿದ್ದಾರೆ. ಹಾಗಂತ ಇವರು ದತ್ತು ಪಡೆದ ಮಗು ಸಂಪೂರ್ಣ ಆರೋಗ್ಯದಿಂದ ಕೂಡಿದ ಮಗುವಲ್ಲ. ಹುಟ್ಟಿನಿಂದಲೇ ಶ್ರವಣ ದೋಷವನ್ನು ಎದುರಿಸುತ್ತಿರುವ ಮಗು ಇದಾಗಿದೆ. ಮಗುವಿಗೆ ನೈನಾ ಹೋಪ್‌ ಮೈಲಿಯಸ್ ಎಂದು ಹೆಸರಿಡಲಾಗಿದೆ. 

 

2019ರ ಅಕ್ಟೋಬರ್‌ನಲ್ಲಿ ಕೇವಲ 18 ತಿಂಗಳ ಮಗುವಿದ್ದಾಗ ನೈನಾಳನ್ನು ನೋಡಿದ ದಂಪತಿ ಆ ಮಗುವೇ ಬೇಕೆಂದು ನಿರ್ಧರಿಸಿ ಬಿಟ್ಟಿದ್ದರು. ನೈನಾ ಅವಧಿಪೂರ್ವ ಹುಟ್ಟಿದ ಮಗುವಾಗಿದ್ದು ಅದಕ್ಕೆ ಶ್ರವಣ ದೋಷವಿತ್ತು. ಹೀಗಾಗಿ ನವಜಾತ ಶಿಶುಗಳನ್ನಿರಿಸುವ ತೀವ್ರ ನಿಗಾ ಘಟಕದಲ್ಲಿ ಆ ಮಗುವನ್ನು ಬಿಡಲಾಯಿತು. ಮಗುವಿಗೆ ಇದ್ದ ಹಲವು ವೈದ್ಯಕೀಯ ಸಮಸ್ಯೆಗಳು ಯಾವುದು ಕೂಡ ಈ ದಂಪತಿಯನ್ನು ಆ ಮಗುವನ್ನು ದತ್ತು ಪಡೆಯುವುರಿಂದ ಹಿಂದೆ ಸರಿಯುವಂತೆ ಮಾಡಲಿಲ್ಲ.  

ಹೀಗಾಗಿ 2020 ರ ಮಾರ್ಚ್‌ನಲ್ಲಿ ನೈನಾ ಅವರನ್ನು ತಮ್ಮ ಸುಪರ್ದಿಗೆ ಪಡೆಯಲು ಈ ದಂಪತಿ ಸಿದ್ಧರಾಗಿದ್ದರು. ಆದರೆ ನಂತರದಲ್ಲಿ ಇಡೀ ಜಗತ್ತು ಕೋವಿಡ್ -19 ಕಾರಣದಿಂದಾಗಿ ಲಾಕ್‌ಡೌನ್‌ಗೆ ಒಳಗಾದ ಪರಿಣಾಮ ಇವರ ಈ ದತ್ತು ಪಡೆಯುವ ಈ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು.  ಆದಾಗ್ಯೂ ಹಲವು ತಿಂಗಳುಗಳ ಕಾಲ ಕಾತರದಿಂದ ಕಾದ ದಂಪತಿ 2020 ರ ಡಿಸೆಂಬರ್‌ನಲ್ಲಿ ನೈನಾ ಅವರನ್ನು ತಮ್ಮ ಸುಪರ್ದಿಗೆ ಪಡೆದರು. ನಂತರ  ತಮ್ಮ ಪುತ್ರಿಯನ್ನು ಸ್ವೀಕರಿಸಲು ಫೆಬ್ರವರಿ 2021 ರಲ್ಲಿ ಭಾರತಕ್ಕೆ ಬರಲು ಸಿದ್ಧರಾಗಿದ್ದರು.

Kerala Adoption Battle: ಕರುಳ ಕುಡಿಗಾಗಿ ಹೋರಾಡಿ ಗೆದ್ದ ಅಮ್ಮ, ಕಂದ ಮರಳಿ ತಾಯಿ ಮಡಿಲಿಗೆ!

ಆದರೆ ದುರದೃಷ್ಟವಶಾತ್, ಅವರು ಭಾರತಕ್ಕೆ ಹೊರಡುವ ಒಂದು ವಾರಕ್ಕೂ ಮೊದಲು, ಟೆಕ್ಸಾಸ್‌ನಲ್ಲಿ ತೀವ್ರ ಹಿಮಪಾತವಾಗಿ ಅವರ ಎಲ್ಲಾ ಯೋಜನೆಗಳನ್ನು ಅವರು ಸ್ಥಗಿತಗೊಳಿಸಬೇಕಾಯಿತು.  ಅಲ್ಲದೇ ದಂಪತಿ ಇನ್ನೂ ಭಾರತೀಯ ದೂತಾವಾಸದಿಂದ ತಮ್ಮ ವೀಸಾವನ್ನು ಸ್ವೀಕರಿಸಿರಲಿಲ್ಲ. ಆದಾಗ್ಯೂ ಎಲ್ಲಾ ಆತಂಕ ಅಡಡಿಗಳನ್ನು ಮೀರಿ ಕೊನೆಗೂ ಅವರು ಕೊನೆಯ ಪ್ರಯತ್ನದಲ್ಲಿ, ಭಾರತೀಯ ದೂತಾವಾಸಕ್ಕೆ ತೆರಳಿ ಅದೇ ದಿನ ತಮ್ಮ ವಿಮಾನದ ಸಮಯಕ್ಕೆ ಸರಿಯಾಗಿ ವೀಸಾಗಳನ್ನು ಪಡೆದರು. ಅಲ್ಲದೇ ಶೀಘ್ರದಲ್ಲೇ ಭಾರತಕ್ಕೆ ಆಗಮಿಸಿ ಮಗು ನೈನಾಳನ್ನು ಭೇಟಿಯಾಗಿ ದತ್ತು ಪ್ರಕ್ರಿಯೆಗಳೆಲ್ಲವನ್ನು ಮುಗಿಸಿ  ಆಕೆಯನ್ನು ಅಮೆರಿಕಕ್ಕೆ ಕರೆತಂದರು.  ಅಲ್ಲದೇ ತಮ್ಮ ಮಗಳಿಗೆ ನೈನಾ ಹೋಪ್ ಮೈಲಿಯಸ್ ಎಂದು ಹೆಸರಿಟ್ಟರು. 

ಇದೀಗ ಇನ್ಸ್ಟಾಗ್ರಾಮ್‌ನಲ್ಲಿ  ದಂಪತಿ ತಮ್ಮ ಈ ಕತೆಯನ್ನು ಹೇಳಿಕೊಂಡಿದ್ದಾರೆ. 

Follow Us:
Download App:
  • android
  • ios