ಝೋಡಿಯಾಕ್ ಕಿಲ್ಲರ್ ಎಂದೇ ಹೆಸರಿಸಲ್ಪಟ್ಟಿದ್ದ ಅಮೆರಿಕದ ಅನಾಮಧೇಯ ಸಿರೀಯಲ್ ಕಿಲ್ಲರ್ ರಹಸ್ಯ ಬರೋಬ್ಬರಿ 50 ವರ್ಷದ ನಂತರ ಬಯಲಾಗಿದೆ. ಉತ್ತರ ಕ್ಯಾಲಿಫೋರ್ನಿಯಾದ ರಸ್ತೆಗಳಲ್ಲಿ ಭೀಕರತೆಯನ್ನು ಬಿಚ್ಚಿಟ್ಟ, ಕ್ರೂರ ಕೊಲೆಗಳ ಮೂಲಕ ಜನರನ್ನು ಬೆಚ್ಚಿ ಬೀಳಿಸಿದ್ದ ಸೀರಿಯಲ್ ಕಿಲ್ಲರ್‌ನ ಅನಾಮಧೇಯ ಝೋಡಿಯಾಕ್ ಮೆಸೇಜ್ ರಹಸ್ಯವನ್ನು ತಜ್ಞರು ಭೇದಿಸಿದ್ದಾರೆ.

ಈತ ಸ್ಯಾನ್‌ಫ್ರಾನ್ಸಿಸ್ಕೋ ಕ್ರಾನಿಕಲ್‌ಗೆ 1969ರಲ್ಲಿಯೇ ಈ ಸಂದೇಶ ಕಳುಹಿಸಿದ್ದ. ಈತನ ಸಂದೇಶದಲ್ಲಿ ಸುಮಾರು 340 ಅಕ್ಷರಗಳಿದ್ದು, ವರ್ಜಿನಿಯಾದ ಸಾಫ್ಟ್‌ವೇರ್ ಡೆವಲಪರ್ ಡೇವಿಡ್ ಓರಂಚಕ್, ಬೆಲ್ಜಿಯನ್ ಕಂಪ್ಯೂಟರ್ ಪ್ರೋಗ್ರಾಮರ್ ಜರ್ಲ್‌ ವಾನ್ ಈಕೆ, ಆಸ್ಟ್ರೇಲಿಯಾದ ಗಣಿತಜ್ಞ ಸಾಮ್ ಬ್ಲಾಕ್ ಈ ರಹಸ್ಯವನ್ನು ಬಯಲು ಮಾಡಿದ್ದಾರೆ.

ರೈತ ಚಳುವಳಿ, ಅಮೆರಿಕದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಧ್ವಂಸ!

ಈ ಕೋಡ್ ಡಿಕೋಡ್ ಮಾಡಲು ಬಹಳಷ್ಟು ವರ್ಷಗಳೇ ಹಿಡಿದಿವೆ. 2006ರಲ್ಲಿ ಒರಂಚಕ್ ಅವರು ಕಂಪ್ಯೂಟರ್ ಪ್ರೋಗ್ರಾಂ ಮೂಲಕ ಈ ಕೋಡ್ ಡಿಕೋಡ್ ಮಾಡಲು ಪ್ರಯತ್ನಿಸಿದರು.

ನನ್ನನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ನೀವು ಸಾಕಷ್ಟು ವಿನೋದ ಪಡೆಯುತ್ತಿದ್ದೀರಿ ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ... ನಾನು ಗ್ಯಾಸ್ ಚೇಂಬರ್ ಬಗ್ಗೆ ಹೆದರುವುದಿಲ್ಲ ಏಕೆಂದರೆ ಅದು ಬೇಗನೆ ನನ್ನನ್ನು ಸ್ವರ್ಗಕ್ಕೆ ಕಳುಹಿಸುತ್ತದೆ (sic) ಏಕೆಂದರೆ ನನಗೆ ಈಗ ಕೆಲಸ ಮಾಡಲು ಸಾಕಷ್ಟು ಗುಲಾಮರು ಇದ್ದಾರೆ ಎಂದು ಝೋಡಿಯಾಕ್ ಕಿಲ್ಲರ್ ಸಂದೇಶ ಬರೆದಿದ್ದು ಎಲ್ಲವೂ ಕ್ಯಾಪಿಟಲ್ ಲೆಟರ್ಸ್‌ನಲ್ಲಿದೆ. ಯಾವುದೇ ವಿರಾಮ ಚಿಹ್ನೆಗಳಿಲ್ಲದೆ ಇದನ್ನು ಬರೆಯಲಾಗಿದೆ.

ಪುತ್ರನ ವ್ಯವಹಾರದ ಬಗ್ಗೆ ಕೊನೆಗೂ ಮೌನ ಮುರಿದ ಜೋ ಬೈಡೆನ್!

ಇದು ಈ ಸೀರಿಯಲ್‌ ಕಿಲ್ಲರ್‌ನ ಮೊದಲ ಸಂದೇಶವೇನೂ ಅಲ್ಲ, ಇಂತಹ ಬೇರೆ ಸಂದೇಶವನ್ನು 1969ರಲ್ಲಿ ಶಾಲಾ ಶಿಕ್ಷಕ ಮತ್ತು ಆತನ ಪತ್ನಿಗೆ ಕಳುಹಿಸಿದ್ದ.
ನನಗೆ ಕೊಲ್ಲೋದೆಂದರೆ ಇಷ್ಟ. ಯಾಕೆಂದರೆ ಕೊಲ್ಲೋದೆಂದರೆ ಫನ್. ನನ್ನ ಗುಲಾಮರ ಮೂಲಕ ನಾನು ಸತ್ತ ಮೇಲೂ ನನ್ನ ಕೆಲಸ ನಡೆಯುತ್ತದೆ ಎಂದು ಆತ ಬರೆದಿದ್ದ. ಸೀರಿಯಲ್ ಕಿಲ್ಲರ್ ಬಳಸಿದ ಕೋಡಿಂಗ್ 1950 ರ  ಹಿಂದಿನ ಅಮೆರಿಕ ಸೈನ್ಯದ ಕ್ರಿಪ್ಟೋಗ್ರಫಿ ಕೈಪಿಡಿಯಲ್ಲಿ ಬಳಸಲಾಗಿದೆ ಎಂದಿದ್ದಾರೆ ತಜ್ಞರು. ಇದೇ ಕಥೆಯನ್ನು ಹೊಂದಿರುವ ಝೋಡಿಯಾಕ್ ಎನ್ನುವ ಸಿನಿಮಾ ಕೂಡಾ ಮಾಡಲಾಗಿದೆ. ಟ್ರೈಲರ್ ನೋಡಿ