Asianet Suvarna News Asianet Suvarna News

ಒಂದು ನಿಮಿಷದಲ್ಲಿ ಅತೀಹೆಚ್ಚು ಕೋಳಿ ಕಾಲು ತಿಂದು ದಾಖಲೆ ಬರೆದ ಮಹಿಳೆ

ತಿನ್ನುವ ಸ್ಪರ್ಧೆಗಳು ಇತ್ತೀಚೆಗೆ ಸಾಮಾನ್ಯ ಎನಿಸಿವೆ. ಅದೇ ರೀತಿ ಇಲ್ಲೊಂದು ಕಡೆ ಕೋಳಿ ಕಾಲು ತಿನ್ನುವ ಸ್ಪರ್ಧೆ ನಡೆದಿದೆ. ಈ ಸ್ಪರ್ಧೆಯಲ್ಲಿ ಮಹಿಳೆಯೊಬ್ಬರು ಒಂದು ನಿಮಿಷದಲ್ಲಿ ಮೂರುವರೆ ಚಿಕನ್‌ ಕಾಲುಗಳನ್ನು ತಿನ್ನುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 

African Woman Eats Most Chicken Feet in 60 Seconds akb
Author
First Published Sep 27, 2022, 5:55 PM IST

ದಕ್ಷಿಣ ಆಫ್ರಿಕಾ: ತಿನ್ನುವ ಸ್ಪರ್ಧೆಗಳು ಇತ್ತೀಚೆಗೆ ಸಾಮಾನ್ಯ ಎನಿಸಿವೆ. ಮುದ್ದೆ ತಿನ್ನುವ ಸ್ಪರ್ಧೆ, ಐಸ್‌ಕ್ರೀಂ ತಿನ್ನುವ ಸ್ಪರ್ಧೆ, ಮೊಟ್ಟೆ ತಿನ್ನುವ ಚಿಕನ್‌ ಕಬಾಬ್‌ ತಿನ್ನುವ ಸ್ಪರ್ಧೆ ಹೀಗೆ ವಿವಿಧ ಸ್ಪರ್ಧೆಗಳನ್ನು ನೀವು ನೋಡಿರುತ್ತಿರಿ. ಅದೇ ರೀತಿ ಇಲ್ಲೊಂದು ಕಡೆ ಕೋಳಿ ಕಾಲು ತಿನ್ನುವ ಸ್ಪರ್ಧೆ ನಡೆದಿದೆ. ಈ ಸ್ಪರ್ಧೆಯಲ್ಲಿ ಮಹಿಳೆಯೊಬ್ಬರು ಒಂದು ನಿಮಿಷದಲ್ಲಿ ಮೂರುವರೆ ಚಿಕನ್‌ ಕಾಲುಗಳನ್ನು ತಿನ್ನುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 

ನೀವು ನಾನ್‌ವೆಜ್ ತಿನ್ನುವವರಾಗಿದ್ದರೆ ಅದರಲ್ಲೂ ಚಿಕನ್ ಪ್ರಿಯರಾಗಿದ್ದರೆ, ನಿಮಗೆ ಈ ಸ್ಪರ್ಧೆ ಇಷ್ಟವಾಗಬಹುದು. ಚಿಕನ್‌ನಲ್ಲಿ ಒಂದೊಂದು ಭಾಗ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಕೆಲವರಿಗೆ ಚಿಕನ್ ತಲೆ ಎಂದರೆ ಬಹಳ ಇಷ್ಟ ಮತ್ತೆ ಕೆಲವರಿಗೆ ಚರ್ಮ, ಕುತ್ತಿಗೆ ಹೀಗೆ ಚಿಕನ್‌ನ ಒಂದೊಂದು ಭಾಗವನ್ನು ಒಬ್ಬೊಬ್ಬರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇಲ್ಲಿ ಚಿಕನ್‌ನ ಕಾಲು ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆಯೊಬ್ಬರು ಒಂದು ನಿಮಿಷದಲ್ಲಿ ಮೂರುವರೆ ಕೋಳಿ ಕಾಲುಗಳನ್ನು ತಿಂದಿದ್ದಾರೆ. 

ಡರ್ಬನ್‌ನ ಉಮ್ಲಾಜಿಯಲ್ಲಿರುವ ಮಾಶಾಂಪ್ಲೇನ್ಸ್ ಲಾಂಜ್ ರೆಸ್ಟೋರೆಂಟ್ (Mashamplanes Lounge restaurant) ಮತ್ತು ಬಾರ್‌ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾದ (South African) ಮಹಿಳೆ, ವುಯೊಲ್ವೆತು ಸಿಮಾನಿಲೆ (Vuyolwethu Simanile) ಎಂಬುವವರು ಮೂರುವರೆ ಕೋಳಿ ಕಾಲುಗಳನ್ನು ತಿಂದು ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. ಈ ಸ್ಪರ್ಧೆಯಲ್ಲಿ ಇವರ ನಾಲ್ವರು ಸಹೋದ್ಯೋಗಿಗಳು ಕೂಡ ಭಾಗಿಯಾಗಿದ್ದರು. ಅವರಿಗಿಂತ ಎರಡು ಪಟ್ಟು ಹೆಚ್ಚು ಚಿಕನ್ ತಿನ್ನುವ ಮೂಲಕ ಸಿಮಾನಿಲೆ ವಿಶ್ವ ದಾಖಲೆ ನಿರ್ಮಿಸಿದರು. ಈ ಸ್ಪರ್ಧೆಗೆ ಸ್ಟಂಬೋ ರೆಕಾರ್ಡ್ ಬ್ರೇಕರ್ ಎಂದು ಹೆಸರಿಡಲಾಗಿತ್ತು. 

ರಾಯಚೂರು: ಕೋಳಿ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು

ಈ ಸ್ಪರ್ಧೆ ಆಯೋಜಕಿ ಸೋಫಿಯಾ ಗ್ರೀನಾಕ್ರೆ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ 10 ಚಿಕನ್ ಕಾಲುಗಳನ್ನು ನೀಡಿದ್ದರು. ಅಲ್ಲದೇ ಒಮ್ಮೆಗೆ ಒಂದೇ ಕೋಳಿ ಕಾಲನ್ನು ತಿನ್ನಬೇಕು ಎಂದು ಶರತ್ತು ವಿಧಿಸಲಾಗಿತ್ತು. ಆದರೆ ಒಂದಕ್ಕಿಂತ ಹೆಚ್ಚು ಕೋಳಿ ಕಾಲುಗಳನ್ನು ಒಮ್ಮೆಗೆ ತಿಂದವರು ಮುಂದಿನ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದರು. ಅದರಂತೆ ದಾಖಲೆ ಮುರಿಯಲು ಸ್ಪರ್ಧಾಳುಗಳು ಕನಿಷ್ಠ 3.8 ಗ್ರಾಂ ಚಿಕನ್ (chicken) ಕಾಲನ್ನು ತಿನ್ನಬೇಕಿತ್ತು. 

Mangaluru: ಪ್ರವೀಣ್ ‌ನೆಟ್ಟಾರು ಚಿಕನ್‌ ಸೆಂಟರ್‌ ಪುನಾರಂಭಿಸಿದ ಹಿಂದೂ ಕಾರ್ಯಕರ್ತ..!

ಪ್ರತಿಯೊಬ್ಬ ಸ್ಪರ್ಧಾಳುಗಳು ವಿಭಿನ್ನವಾದ ತಂತ್ರಗಳನ್ನು ಹೊಂದಿದ್ದರು. ಕೆಲವರು ಬಾಯಿಪೂರ್ತಿ ತುಂಬಿಸಿಕೊಂಡಿದ್ದರೆ ಮತ್ತೆ ಕೆಲವರು ಕ್ರಮಬದ್ಧವಾದ ವಿಧಾನ ಅನುಸರಿಸಿದರು. ಕೊನೆಯದಾಗಿ ತೀರ್ಪುಗಾರರು ತೀರ್ಪು ನೀಡಲು ಸ್ಪರ್ಧಾಳುಗಳು ಎಷ್ಟು ಕಾಲುಗಳನ್ನು ತಿಂದಿದ್ದಾರೆ ಎಂದು ಲೆಕ್ಕ ಹಾಕಲು ಪ್ರತಿ ಪ್ಲೇಟ್‌ಗಳನ್ನು ತೂಕ ಮಾಡಿದರು ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  

ಎಷ್ಟು ಕೋಳಿಗಳ ಕಾಲು ತಿಂದರೂ ಎಂಬುದರಿಂದ ಈ ಸ್ಪರ್ಧೆಯನ್ನು ಅಳೆಯಲಾಗುವುದಿಲ್ಲ, ಬದಲಾಗಿ ಗ್ರಾಂಗಳ ಆಧಾರದ ಮೇಲೆ ಅಳೆಯಲಾಗಿದೆ ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ. ಸಾಮಾನ್ಯವಾಗಿ ಒಂದು ಕೋಳಿ ಕಾಲು ಸುಮಾರು 35 ಗ್ರಾಂ ತೂಗುತ್ತದೆ ಎಂದು ತಿಳಿದು ಬಂದಿದೆ. 

Follow Us:
Download App:
  • android
  • ios